ETV Bharat / international

ಆಕ್ಸ್​ಫರ್ಡ್ ವಿವಿಯಲ್ಲಿ ಮುಂದುವರಿದ ಕೊರೊನಾ ವೈರಸ್‌ ವ್ಯಾಕ್ಸಿನ್ ಪರೀಕ್ಷೆ - ಸಂಶೋಧನೆ

ಜಗತ್ತಿನಾದ್ಯಂತ ಕೊರೊನಾ ವೈರಸ್​ ವ್ಯಾಕ್ಸಿನ್​ ತಯಾರಿಕೆಗಾಗಿ ಸಂಶೋಧನೆಗಳು ಮುಂದುವರೆದಿದ್ದು, ವಿವಿಧ ಹಂತಗಳಲ್ಲಿ ತಪಾಸಣೆಗಳನ್ನು ಕೈಗೊಳ್ಳಲಾಗುತ್ತಿದೆ. ಈಗಿನ ಸಂಶೋಧನೆಗಳು ಒಂದು ವೇಳೆ ಯಶಸ್ವಿಯಾದಲ್ಲಿ ಈ ವ್ಯಾಕ್ಸಿನ್ ಅಭಿವೃದ್ಧಿಪಡಿಸಿ ಎಲ್ಲರಿಗೂ ತಲುಪಿಸಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

Virus vaccine trials continue at Oxford University

author img

By

Published : Apr 30, 2020, 4:12 PM IST

ಆಕ್ಸ್​ಫರ್ಡ್​: ಯುನೈಟೆಡ್ ಕಿಂಗಡಂನ ಆಕ್ಸ್​ಫರ್ಡ್​ ವಿವಿಯಲ್ಲಿ ಕೊರೊನಾ ವೈರಸ್​ ವ್ಯಾಕ್ಸಿನ್​ ಟ್ರಯಲ್ಸ್​ ಈ ವಾರವೂ ಮುಂದುವರಿದಿವೆ. ತನ್ನ ವೈದ್ಯಕೀಯ ಪ್ರಯೋಗಾಲಯದಲ್ಲಿ ಸ್ವಯಂ ಸೇವಕರ ರಕ್ತ ತಪಾಸಣೆ ಹಾಗೂ ಟ್ರಯಲ್ಸ್​ ನಡೆಸುತ್ತಿರುವ ವಿಡಿಯೋಗಳನ್ನು ವಿವಿ ಬುಧವಾರ ಬಿಡುಗಡೆ ಮಾಡಿದೆ.

ಟ್ರಯಲ್ಸ್​ ಸಂದರ್ಭದಲ್ಲಿ ಸಂಶೋಧಕರು ಸ್ವಯಂ ಸೇವಕರಿಗೆ ಇಂಜೆಕ್ಷನ್​ ನೀಡಿ, ವ್ಯಾಕ್ಸಿನ್​ ಸುರಕ್ಷತೆಯ ಬಗ್ಗೆ ಪರಿಶೀಲನೆ ಮಾಡುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿವೆ. ನೊವೆಲ್​ ಕೊರೊನಾ ವೈರಸ್​ನ ಹೊರಮೇಲ್ಮೈಗೆ ಹೊರಗಿನಿಂದ ಜೀನ್​ ಸೇರಿಸಿ ಮತ್ತೊಂದು ಅಪಾಯಕರವಲ್ಲದ ವೈರಸ್​ ಉತ್ಪಾದನೆಯಾಗುವಂತೆ ಮಾಡುವುದು ಸಂಶೋಧನೆಯ ತಿರುಳಾಗಿದೆ. ಯುಕೆಯಲ್ಲಿ ಸಂಭವನೀಯ ವ್ಯಾಕ್ಸಿನ್​ ತಯಾರಿಸುತ್ತಿರುವ ಪ್ರಥಮ ಸಂಶೋಧನೆ ಇದಾಗಿದೆ. ಜಗತ್ತಿನಾದ್ಯಂತ ವ್ಯಾಕ್ಸಿನ್​ ತಯಾರಿಕೆಗಾಗಿ ಸಂಶೋಧನೆಗಳು ಮುಂದುವರೆದಿದ್ದು, ವಿವಿಧ ಹಂತಗಳಲ್ಲಿ ತಪಾಸಣೆಗಳನ್ನು ಕೈಗೊಳ್ಳಲಾಗುತ್ತಿದೆ.

ಈಗಿನ ಸಂಶೋಧನೆಗಳು ಒಂದು ವೇಳೆ ಯಶಸ್ವಿಯಾದಲ್ಲಿ ಈ ವ್ಯಾಕ್ಸಿನ್ ಅಭಿವೃದ್ಧಿಪಡಿಸಿ ಎಲ್ಲರಿಗೂ ತಲುಪಿಸಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.