ETV Bharat / international

ತಿಂಗಳಿಗೆ 850 ಟನ್ ಕೋವಿಡ್ -19 ಲಸಿಕೆ ಪೂರೈಸಲಿರುವ ಯುನಿಸೆಫ್ - ವಿಶ್ವಸಂಸ್ಥೆಯ ಮಕ್ಕಳ ನಿಧಿ

ವಿಶ್ವಸಂಸ್ಥೆಯ ಮಕ್ಕಳ ನಿಧಿ 2021 ರಲ್ಲಿ ತಿಂಗಳಿಗೆ 850 ಟನ್ ಕೋವಿಡ್ -19 ಲಸಿಕೆಗಳನ್ನು ಪೂರೈಕೆ ಮಾಡಲಿದೆ. ಈ ಕುರಿತಂತೆ ಯುನಿಸೆಫ್ ಸಭೆಯಲ್ಲಿ ಕೋವಿಡ್ -19 ಲಸಿಕೆಗಳ ಸಂಗ್ರಹ ಮತ್ತು ಪೂರೈಕೆ ಕುರಿತಂತೆ ಮಾರ್ಗಸೂಚಿಗಳನ್ನು ಕೈಗೊಳ್ಳುವುದರ ಬಗ್ಗೆ ಚರ್ಚಿಸಲಾಯಿತು.

UNICEF
ಕೋವಿಡ್ -19 ಲಸಿಕೆ ಪೂರೈಕೆ
author img

By

Published : Dec 20, 2020, 8:22 AM IST

ನ್ಯೂಯಾರ್ಕ್​: ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) 2021 ರಲ್ಲಿ ತಿಂಗಳಿಗೆ 850 ಟನ್ ಕೋವಿಡ್ -19 ಲಸಿಕೆಗಳನ್ನು ಪೂರೈಕೆ ಮಾಡಲಿದೆ.

ಈ ಕುರಿತಂತೆ ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಅವರು ಮಾಹಿತಿ ನೀಡಿದ್ದು, ಇದು ಮಹತ್ತರವಾದ ಮತ್ತು ಐತಿಹಾಸಿಕ ಕಾರ್ಯವಾಗಿದೆ. ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ.

ಯುನಿಸೆಫ್ ಮೌಲ್ಯಮಾಪನದ ಪ್ರಕಾರ, 2021 ರಲ್ಲಿ ಕೋವಿಡ್ -19 ಲಸಿಕೆಗಳನ್ನು ಆರ್ಥಿಕವಾಗಿ ಹಿಂದುಳಿದ ಸುಮಾರು 92 ದೇಶಗಳಿಗೆ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಮೂಲಕ ಲಸಿಕೆಗಳನ್ನು ಆಯಾ ದೇಶಗಳಿಗೆ ತಲುಪಿಸಲು ನಿರ್ಧರಿಸಿದೆ. ಇದಕ್ಕೆ ಸುಮಾರು 70 ಮಿಲಿಯನ್ ಡಾಲರ್​ ವೆಚ್ಚ ತಗಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಶ್ವದಾದ್ಯಂತ ವಾಣಿಜ್ಯ ಮತ್ತು ಸರಕು ಮಾರ್ಗಗಳ ವಿರುದ್ಧ ಲಸಿಕೆ ಪರಿಮಾಣದ ಅಂದಾಜುಗಳನ್ನು ಹೋಲಿಸಿದರೆ, 92 ದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆಗೆ ಶೇಕಡಾ 20 ರಷ್ಟು ಜನಸಂಖ್ಯೆಯನ್ನು ತಲುಪಿಸುವ ವಿತರಣೆ ಮಾಡಲು ಪ್ರಸ್ತುತ ವಾಯು ಸರಕು ಸಾಮರ್ಥ್ಯವು ಸಾಕಾಗುತ್ತದೆ ಎಂದು ಮೌಲ್ಯಮಾಪನವು ಕಂಡು ಹಿಡಿದಿದೆ. ಕೋವಿಡ್ -19 ಲಸಿಕೆಗಳನ್ನು ಪ್ರಾಥಮಿಕವಾಗಿ ಅಸ್ತಿತ್ವದಲ್ಲಿರುವ ಪ್ರಯಾಣಿಕ ಮತ್ತು ಸರಕು ಹಾರಾಟದ ಸಾಮರ್ಥ್ಯವನ್ನು ಬಳಸಿಕೊಂಡು ರವಾನಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ವಿಶ್ವದಾದ್ಯಂತ ಕೋವಿಡ್ -19 ಲಸಿಕೆಗಳನ್ನು ವಿತರಿಸಲು ಆದ್ಯತೆ ನೀಡಲು ಯುನಿಸೆಫ್, ವಿಮಾನಯಾನ ಮತ್ತು ವ್ಯಾಪಕ ಲಾಜಿಸ್ಟಿಕ್ಸ್ ಉದ್ಯಮದೊಂದಿಗೆ ಕೆಲಸ ಮಾಡುತ್ತಿದೆ. ಸರ್ಕಾರಿ ಅಧಿಕಾರಿಗಳು ಸೇರಿದಂತೆ ಜಾಗತಿಕವಾಗಿ 300ಕ್ಕೂ ಹೆಚ್ಚು ಲಸಿಕೆ ಖರೀದಿ ತಜ್ಞರೊಂದಿಗೆ ಈ ವಾರ ಯುನಿಸೆಫ್ ಸಭೆ ನಡೆಯಿತು. ಈ ವೇಳೆ ಕೋವಿಡ್ -19 ಲಸಿಕೆಗಳನ್ನು ಸಂಗ್ರಹಣೆ ಮತ್ತು ಪೂರೈಕೆ ಕುರಿತಂತೆ ಮಾರ್ಗಸೂಚಿಗಳನ್ನು ಕೈಗೊಳ್ಳುವುದರ ಬಗ್ಗೆ ಚರ್ಚಿಸಲಾಯಿತು.

2021 ರಲ್ಲಿ ಲಸಿಕೆಗಳು, ಚಿಕಿತ್ಸಕ ಮತ್ತು ರೋಗನಿರ್ಣಯಕ ಸಾಧನಗಳ ವಿತರಣೆಯಲ್ಲಿ ದೇಶಗಳಿಗೆ ಸಹಾಯ ಮಾಡಲು ಯುನಿಸೆಫ್ 410 ಮಿಲಿಯನ್ ಡಾಲರ್‌ಗಳನ್ನು ವ್ಯಯಿಸಲು ಮುಂದಾಗಿದೆ. ಇದಲ್ಲದೆ ದೇಶದಲ್ಲಿನ ಲಸಿಕೆ ಲಾಜಿಸ್ಟಿಕ್ಸ್ ಮತ್ತು 92 ಬಡ ದೇಶಗಳಿಗೆ ಅಗತ್ಯವಾದ ಕೋಲ್ಡ್ ಚೈನ್ ಉಪಕರಣಗಳನ್ನು ಸರಿದೂಗಿಸಲು ಯುನಿಸೆಫ್ 133 ಮಿಲಿಯನ್ ಡಾಲರ್​ಗಳ ಹಣದ ಅಂತರವನ್ನು ಅಂದಾಜಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.