ETV Bharat / international

ಫೆ.16ರಂದು ರಷ್ಯಾ ದಾಳಿ ಮಾಡಬಹುದು: ಸಂಚಲನ ಸೃಷ್ಟಿಸಿದ ಉಕ್ರೇನ್ ಅಧ್ಯಕ್ಷರ ಫೇಸ್‌ಬುಕ್‌ ಪೋಸ್ಟ್‌ - Ukrainian President Zelensky announces

ಫೆಬ್ರವರಿ 16ರಂದು ರಷ್ಯಾ ಪಡೆಗಳು ತನ್ನ ದೇಶದ ಮೇಲೆ ದಾಳಿ ಮಾಡಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆಯ ಮಧ್ಯೆ ಈ ಹೇಳಿಕೆ ನೀಡಿದ್ದು ಗಮನಾರ್ಹ ಸಂಗತಿ.

Ukrainian President Zelensky
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
author img

By

Published : Feb 15, 2022, 10:41 AM IST

ಕೀವ್(ಉಕ್ರೇನ್): ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸುವ ಭೀತಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ, ಫೆಬ್ರವರಿ 16 ರಂದು ರಷ್ಯಾ ಪಡೆಗಳು ತನ್ನ ದೇಶದ ಮೇಲೆ ದಾಳಿ ಮಾಡಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಝೆಲೆನ್ಸ್ಕಿ ಅವರು ಬುಧವಾರ ರಷ್ಯಾ ಆಕ್ರಮಣ ಮಾಡಬಹುದು ಎಂದು ಅಂದಾಜಿಸಿದ್ದಾರೆ. ಹೀಗಿದ್ದರೂ ಈ ದಿನವನ್ನು ನಾವು 'ಉಕ್ರೇನಿಯನ್ ರಾಷ್ಟ್ರೀಯ ಏಕತೆ'ಯ ದಿನವನ್ನು ಘೋಷಿಸುವುದಾಗಿ ಅವರು ಹೇಳಿದ್ದಾರೆ.

ಮಾಹಿತಿಯ ಪ್ರಕಾರ, ನ್ಯಾಟೋದ ಹೆಚ್ಚಿನ ಪಡೆಗಳು ಸೋಮವಾರ ಪೂರ್ವ ಯುರೋಪ್ ತಲುಪಿವೆ. ಆದರೆ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ರಷ್ಯಾದ ಉನ್ನತ ರಾಜತಾಂತ್ರಿಕರು ಸೋಮವಾರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ರಷ್ಯಾದ ಭದ್ರತಾ ಬೇಡಿಕೆಗಳ ಕುರಿತು ಪಶ್ಚಿಮದ ದೇಶಗಳೊಂದಿಗೆ ಮಾತುಕತೆ ಮುಂದುವರಿಸಲು ಒತ್ತಾಯಿಸಿದ್ದಾರೆ.

ಉಕ್ರೇನಿಯನ್ ಗಡಿಯ ಬಳಿ ರಷ್ಯಾ ಈಗಾಗಲೇ 100,000ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ. ಸೇನಾ ಪಡೆಗಳ ನಿಯೋಜನೆಯೊಂದಿಗೆ ಯುಎಸ್ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳ ನಡುವೆ ರಷ್ಯಾ ಮಿಲಿಟರಿ ಆಕ್ರಮಣವನ್ನು ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ರಷ್ಯಾ ಅಂತಹ ಯಾವುದೇ ಯೋಜನೆಗಳನ್ನು ಹೊಂದಿಲ್ಲ ಎಂದು ಆರೋಪವನ್ನು ನಿರಂತರವಾಗಿ ತಳ್ಳಿಹಾಕುತ್ತಿದೆ.

ಉಕ್ರೇನ್, ರಷ್ಯಾ ಮತ್ತು ನ್ಯಾಟೋ ರಾಷ್ಟ್ರಗಳ ಅಧಿಕಾರಿಗಳು ಈ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ತಗ್ಗಿಸುವ ಭರವಸೆಯೊಂದಿಗೆ ವಾರಗಳಿಂದ ರಾಜತಾಂತ್ರಿಕ ಚರ್ಚೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಚರ್ಚೆ ಯಾವುದೇ ಪ್ರಗತಿ ಸಾಧಿಸಿಲ್ಲ.

ಅಮೆರಿಕ ಎಚ್ಚರಿಕೆ: ಇದಕ್ಕೂ ಮೊದಲು, ಯುಎಸ್ ಅಧ್ಯಕ್ಷ ಜೋ ಬೈಡೆನ್ ಶನಿವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಲು ಮುಂದಾದರೆ ನಾವು, ನಮ್ಮ ಮಿತ್ರರಾಷ್ಟ್ರಗಳು ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತೇವೆ. ಸಂಭವನೀಯ ಹಾನಿಗೆ ನಿರ್ಬಂಧಗಳನ್ನು ಹೇರಲಾಗುವುದು, ಜೊತೆಗೆ ವೆಚ್ಚಗಳನ್ನು ಭರಿಸಬೇಕಾಗುತ್ತದೆ ಎಂದು ಪುಟಿನ್​ಗೆ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಉಕ್ರೇನ್ ಬಳಿ ಭಾರಿ ಪ್ರಮಾಣದಲ್ಲಿ ರಷ್ಯಾದ ಮಿಲಿಟರಿ ಪಡೆ ನಿಯೋಜನೆ: ಉಪಗ್ರಹ ಚಿತ್ರದಿಂದ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.