ETV Bharat / international

ಮರಿಯುಪೋಲ್​ಗೆ ಮುತ್ತಿಗೆ ಹಾಕಿದ ರಷ್ಯಾ: ಶರಣಾಗಲು ನಿರಾಕರಿಸಿದ ಉಕ್ರೇನ್​​ ಸೇನೆ

ರಷ್ಯಾ ಸೇನೆ ಮರಿಯುಪೋಲ್​ಗೆ ಆಯಕಟ್ಟಿನ ಬಂದರಿಗೆ ಮುತ್ತಿಗೆ ಹಾಕಿದೆ. ಉಕ್ರೇನ್​​​ ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ನಗರದಿಂದ ನಿರ್ಮಿಸುವಂತೆ ರಷ್ಯಾ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ಇದನ್ನು ಉಕ್ರೇನ್​ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

Ukraine refuses to surrender besieged Mariupol
ರಷ್ಯಾಗೆ ಶರಣಾಗಲು ನಿರಾಕರಿಸಿದ ಉಕ್ರೇನ್​​ ಸೇನೆ
author img

By

Published : Mar 21, 2022, 7:39 AM IST

ಮರಿಯುಪೋಲ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಷ್ಯಾದ ಮಿಲಿಟರಿ ಪಡೆ ಮರಿಯುಪೋಲ್​ ಆಯಕಟ್ಟಿನ ಬಂದರಿಗೆ ಮುತ್ತಿಗೆ ಹಾಕಿದ್ದು, ಉಕ್ರೇನ್​​​ ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ನಗರದಿಂದ ನಿರ್ಮಿಸುವಂತೆ ಹೇಳಿತು. ಆದರೆ, ಈ ಪ್ರಸ್ತಾಪವನ್ನು ಉಕ್ರೇನ್​ ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ಮಾಡಿಕೊಂಡ ಒಪ್ಪಂದಂತೆ ಅಜೋವ್​​ ಸಮುದ್ರ ಬಂದರಿನ ಸುರಕ್ಷಿತ ಮಾರ್ಗಗಳನ್ನು ಬಳಸಿಕೊಂಡು ತಮ್ಮ ನಾಗರಿಕರನ್ನು ಕರೆದುಕೊಂಡು ಸೋಮವಾರದೊಳಗೆ ಉಕ್ರೇನ್​ ಸೈನಿಕರು ಬಂದರನ್ನು ತೊರೆಯಬಹುದು. ಒಂದೊಮ್ಮೆ ಸೈನಿಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾದರೆ ಮರಿಯುಪೋಲ್‌ನಿಂದ ಸುರಕ್ಷಿತವಾಗಿ ತೆರಳುವ ವ್ಯವಸ್ಥೆ ಮಾಡಲಾಗುವುದು ಎಂಬ ಪ್ರಸ್ತಾವನ್ನು ರಷ್ಯಾ ಕರ್ನಲ್ ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಉಕ್ರೇನ್​ ಮುಂದಿಟ್ಟಿದ್ದಾರೆ. ಆದರೆ ಈ ಪ್ರಸ್ತಾಪವನ್ನು ಉಕ್ರೇನ್​ ಸೈನಿಕರು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

ಉಕ್ರೇನ್​​ ಪಡೆಗಳು ಮಾರಿಯುಪೋಲ್ ಅನ್ನು ತೊರೆಯುವ ರಷ್ಯಾದ ಪ್ರಸ್ತಾಪಕ್ಕೆ ಕೈವ್​​ನಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಸೋಮವಾರದವರೆಗೆ ಕಾದು ನೋಡುತ್ತೇವೆ. ಒಂದೊಮ್ಮೆ ನಮ್ಮ ಪ್ರಸ್ತಾಪವನ್ನು ಉಕ್ರೇನ್​ ಪಡೆಗಳು ಒಪ್ಪಿಕೊಂಡರೆ, ಮಾನವೀಯ ನೆಲೆಯಲ್ಲಿ ಅಗತ್ಯ ಸಾಮಗ್ರಿಗಗಳನ್ನು ಒದಗಿಸಲಾಗುತ್ತದೆ. ಮರಿಯುಪೋಲ್ ಅನ್ನು ತೊರೆಯಬೇಕೆ ಅಥವಾ ನಗರದಲ್ಲಿ ಉಳಿಯಬೇಕೆ ಎಂಬುದನ್ನು ಆಯ್ಕೆ ಮಾಡಲು ನಾಗರಿಕರು ಸ್ವತಂತ್ರರು ಎಂದು ರಷ್ಯಾ ಪಡೆ ಹೇಳಿದೆ.

ಇನ್ನು ತಾವು ನೀಡಿದ ಪ್ರಸ್ತಾಪವನ್ನು ಉಕ್ರೇನ್​​​ ತಿರಸ್ಕರಿಸಿದರೆ ರಷ್ಯಾ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಇನ್ನೂ ದೃಢವಾಗಿಲ್ಲ

ಇದನ್ನೂ ಓದಿ: ಕೆಲಸ ಮುಗಿಸಿ ಮಧ್ಯರಾತ್ರಿ10 ಕಿ.ಮೀ ಓಡುತ್ತಲೇ ಮನೆ ಸೇರುವ ಯುವಕ: ಯಾಕೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.