ETV Bharat / international

ರಷ್ಯಾದೊಂದಿಗೆ 'ಬೆಲಾರಸ್‌'ನಲ್ಲಿ ಶಾಂತಿ ಮಾತುಕತೆ ತಳ್ಳಿ ಹಾಕಿದ ಉಕ್ರೇನ್ ಅಧ್ಯಕ್ಷ

author img

By

Published : Feb 27, 2022, 2:01 PM IST

Updated : Feb 27, 2022, 2:10 PM IST

ರಷ್ಯಾ ಬೆಲಾರಸ್‌ಗೆ ತನ್ನ ನಿಯೋಗವನ್ನು ಕಳುಹಿಸಿ, ಅಲ್ಲಿನ ಗೋಮೆಲ್ ನಗರದಲ್ಲಿ ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಹೇಳಿದೆ. ಆದರೆ, ಈ ಪ್ರಸ್ತಾಪವನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತಿರಸ್ಕರಿಸಿದ್ದಾರೆ..

ಉಕ್ರೇನ್ ಅಧ್ಯಕ್ಷ
ಉಕ್ರೇನ್ ಅಧ್ಯಕ್ಷ

ಕೀವ್​(ಉಕ್ರೇನ್) : ರಷ್ಯಾ ಹಾಗೂ ಉಕ್ರೇನ್​ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆಯುತ್ತಿದೆ. ಶಾಂತಿ ಮಾತುಕತೆಗಾಗಿ ಬೆಲಾರಸ್‌ ರಾಷ್ಟ್ರಕ್ಕೆ ತಮ್ಮ ನಿಯೋಗವನ್ನು ಕಳುಹಿಸಿದೆ. ಆದರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬೆಲಾರಸ್​ನಲ್ಲಿ ಶಾಂತಿ ಮಾತುಕತೆಯನ್ನು ತಳ್ಳಿ ಹಾಕಿದ್ದಾರೆ.

ರಷ್ಯಾ ಬೆಲಾರಸ್‌ಗೆ ತನ್ನ ನಿಯೋಗವನ್ನು ಕಳುಹಿಸಿ, ಅಲ್ಲಿನ ಗೋಮೆಲ್ ನಗರದಲ್ಲಿ ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಹೇಳಿದೆ. ಈ ಪ್ರಸ್ತಾಪವನ್ನು ತಿರಸ್ಕರಿಸಿರುವ ಝೆಲೆನ್ಸ್ಕಿ, ತನ್ನ ದೇಶದ ಕಡೆಗೆ ಆಕ್ರಮಣಶೀಲತೆಯನ್ನು ತೋರಿಸದ ಸ್ಥಳಗಳಲ್ಲಿ ಮಾತ್ರ ಮಾತುಕತೆಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ. ಏಕೆಂದರೆ, ಬೆಲಾರಸ್‌ನಿಂದ ಉಕ್ರೇನ್‌ನ ಮೇಲೆ ರಷ್ಯಾ ತನ್ನ ಕೆಲವು ದಾಳಿಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ಉಕ್ರೇನ್‌ನ 2ನೇ ದೊಡ್ಡ ನಗರ ಕಾರ್ಕಿವ್​ಗೆ ರಷ್ಯಾ ಪಡೆ ಎಂಟ್ರಿ: ಎರಡು ನಗರಗಳಿಗೆ ಮುತ್ತಿಗೆ

ಇದಕ್ಕೂ ಮುನ್ನ ರಷ್ಯಾ ಅಧ್ಯಕ್ಷ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು, "ಗೋಮೆಲ್‌ನಲ್ಲಿ ಮಾತುಕತೆಗೆ ರಷ್ಯಾ ಈಗಾಗಲೇ ಸಿದ್ಧವಾಗಿದೆ. ಈಗ ಮಾಸ್ಕೋ ಉಕ್ರೇನಿಯನ್ನರಿಗಾಗಿ ಕಾಯುತ್ತಿದೆ" ಎಂದು ಹೇಳಿದ್ದರು.

Last Updated : Feb 27, 2022, 2:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.