ETV Bharat / international

ರಷ್ಯಾ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌ ಮೊರೆ ಹೋದ ಉಕ್ರೇನ್‌; ನರಮೇಧದ ದೂರು ದಾಖಲು

ಫೆಬ್ರವರಿ 24ರಿಂದ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ರಷ್ಯಾಗೆ ಆದೇಶಿಸಬೇಕು. ಪೂರ್ವ ಉಕ್ರೇನ್‌ನ ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ಸುಳ್ಳು ಮಾಹಿತಿ ನೀಡಿ ತನ್ನ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದೆ- ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಉಕ್ರೇನ್ ಮನವಿ.

top-court
ಅಂತಾರಾಷ್ಟ್ರೀಯ ಕೋರ್ಟ್​
author img

By

Published : Feb 28, 2022, 7:31 AM IST

ಹೇಗ್(ನೆದರ್ಲೆಂಡ್ಸ್‌): ರಷ್ಯಾ ತನ್ನ ಮೇಲೆ ಯೋಜಿಸಿದ ನರಮೇಧ ಆಕ್ರಮಣ ಯೋಜನೆಯನ್ನು ತಡೆಯಬೇಕು. ಈವರೆಗೂ ಆದ ಹಾನಿಯ ನಷ್ಟವನ್ನು ಭರಿಸುವಂತೆ ಆ ದೇಶಕ್ಕೆ ಸೂಚಿಸಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ(ಐಸಿಜೆ) ಉಕ್ರೇನ್​, ರಷ್ಯಾ ವಿರುದ್ಧ ದೂರು ದಾಖಲಿಸಿದೆ.

  • Ukraine has submitted its application against Russia to the ICJ. Russia must be held accountable for manipulating the notion of genocide to justify aggression. We request an urgent decision ordering Russia to cease military activity now and expect trials to start next week.

    — Володимир Зеленський (@ZelenskyyUa) February 27, 2022 " class="align-text-top noRightClick twitterSection" data=" ">

ಫೆಬ್ರವರಿ 24ರಿಂದ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ರಷ್ಯಾಗೆ ಆದೇಶಿಸಬೇಕು. ಪೂರ್ವ ಉಕ್ರೇನ್‌ನ ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ಸುಳ್ಳು ಮಾಹಿತಿ ನೀಡಿ ತನ್ನ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದೆ. ಈಗ ದೇಶದಲ್ಲಿ ನರಮೇಧವನ್ನು ನಡೆಸಲು ರಷ್ಯಾ ಯೋಜಿಸಿದೆ. ಇದನ್ನು ತಕ್ಷಣವೇ ನಿಲ್ಲಿಸಲು ಸೂಚಿಸಿ ಎಂದು ಐಸಿಜೆಗೆ ಸಲ್ಲಿಸಿದ ದೂರಿನಲ್ಲಿ ಉಕ್ರೇನ್‌ ಕೋರಿದೆ.

ಉಕ್ರೇನ್​ನ ಪೂರ್ವ ಪ್ರದೇಶಗಳಲ್ಲಿ ಯಾವುದೇ ಅಶಾಂತಿ ಉಂಟಾಗಿಲ್ಲ. ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಹೆಸರಲ್ಲಿ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಕೈಗೊಳ್ಳಲು ಆ ದೇಶಕ್ಕೆ ಯಾವುದೇ ಅಧಿಕಾರವಿಲ್ಲ. ತನ್ನ ದೇಶದ ಮೇಲೆ ಆಕ್ರಮಣ ಮಾಡುವುದೇ ಇದರ ಹಿಂದಿನ ಉದ್ದೇಶವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ಉಕ್ರೇನ್​ ಸಲ್ಲಿಸಿದ ದೂರಿನ ಆಧಾರದ ಮೇಲೆ ಅಂತಾರಾಷ್ಟ್ರೀಯ ನ್ಯಾಯಾಲಯ ಶೀಘ್ರದಲ್ಲೇ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎನ್ನಲಾಗಿದೆ.

ಇದನ್ನೂ ಓದಿ: ರಷ್ಯಾ ವಿರುದ್ಧ ಕ್ರಮಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ತುರ್ತು ಅಧಿವೇಶನ: ಮತದಾನದಿಂದ ದೂರ ಉಳಿದ ಭಾರತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.