ಲಂಡನ್: ಕೋವಿಡ್-19 ವ್ಯಾಕ್ಸಿನೇಷನ್ ಪಡೆಯುವುದನ್ನು ಉತ್ತೇಜಿಸಲು ಪ್ರಮುಖ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ಗಳು ಬ್ರಿಟಿಷ್ ಸರ್ಕಾರದೊಂದಿಗೆ ಕೈಜೋಡಿಸಿವೆ ಎಂದು ಬ್ರಿಟಿಷ್ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆ ಸೋಮವಾರ ತಿಳಿಸಿದೆ.
ಟಿಂಡರ್, ಮ್ಯಾಚ್ ಮತ್ತು ಹಿಂಜ್ ಸೇರಿದಂತೆ ಡೇಟಿಂಗ್ ಬ್ರಾಂಡ್‌ಗಳು ಸರ್ಕಾರದ "ಪ್ರತಿ ವ್ಯಾಕ್ಸಿನೇಷನ್ ನಮಗೆ ಭರವಸೆ ನೀಡುತ್ತದೆ" ಅಭಿಯಾನವನ್ನು ಬೆಂಬಲಿಸಲು ತಮ್ಮ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ಹೊಸ ವೈಶಿಷ್ಟ್ಯತೆಗಳನ್ನು ಸೇರಿಸಿವೆ.
ಈ ಹೊಸ ವೈಶಿಷ್ಟ್ಯತೆಗಳು ಬಳಕೆದಾರರು ತಮ್ಮ ಡೇಟಿಂಗ್ ಪ್ರೊಫೈಲ್‌ಗಳಲ್ಲಿ ಲಸಿಕೆಗೆ ತಮ್ಮ ಬೆಂಬಲವನ್ನು ತೋರಿಸಲು ಮತ್ತು ಲಸಿಕೆ ಹಾಕಲಾಗಿದೆ ಎಂದು ಹೇಳುವವರಿಗೆ ಅಪ್ಲಿಕೇಶನ್‌ನಲ್ಲಿ ಬೋನಸ್ ನೀಡಲು ಅವಕಾಶ ನೀಡುತ್ತವೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಆನ್‌ಲೈನ್ ಡೇಟಿಂಗ್ ಅಸೋಸಿಯೇಶನ್‌ನ ಸಿಇಒ ಜಾರ್ಜ್ ಕಿಡ್, "ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳು ಎಲ್ಲಾ ಹೊಸ ಸಂಬಂಧಗಳಲ್ಲಿ ಮೂರನೇ ಒಂದು ಭಾಗದ ಪ್ರಾರಂಭದ ಹಂತವಾಗಿದೆ. ವೈಯಕ್ತಿಕವಾಗಿ ಭೇಟಿಯಾಗುವುದು ಸಾಧ್ಯವಾಗದಿದ್ದಾಗ, ಆನ್‌ಲೈನ್‌ನಲ್ಲಿ ಇತರರನ್ನು ಭೇಟಿ ಮಾಡುವ ಸೇವೆಗಳು ಪ್ರಮುಖ ಮಾರ್ಗವಾಗಿದೆ. ಸುರಕ್ಷಿತವಾಗಿದ್ದಾಗ ನಂತರ ಭೇಟಿಯಾಗುವ ಭರವಸೆ ಸಿಗುತ್ತದೆ " ಎಂದರು.
ಬ್ರಿಟನ್‌ನಲ್ಲಿ ಸುಮಾರು 10 ಮಿಲಿಯನ್ ಜನರು ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ಬಳಸುತ್ತಾರೆ ಎಂದು ಕಿಡ್ ಹೇಳಿದರು. ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, 40.3 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಅಥವಾ ಬ್ರಿಟನ್‌ನಲ್ಲಿ ಮುಕ್ಕಾಲು ಭಾಗದಷ್ಟು ವಯಸ್ಕರಿಗೆ ಮೊದಲ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ.