ETV Bharat / international

ಫೈಝರ್​​ಗೆ ಜೈ ಎಂದ ಬ್ರಿಟನ್​​: ಮುಂದಿನ ವಾರದಿಂದಲೇ ಕೋವಿಡ್ ಲಸಿಕೆ..ಭಾರತದಲ್ಲಿ ಯಾವಾಗ?

author img

By

Published : Dec 2, 2020, 1:29 PM IST

Updated : Dec 2, 2020, 10:42 PM IST

vaccine
ಕೋವಿಡ್ ಲಸಿಕೆ ಬಳಕೆ

13:22 December 02

ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕೊರೊನಾ ಲಸಿಕೆಗೆ ಬ್ರಿಟನ್​ ಅನುಮೋದನೆ ನೀಡಿದೆ.

ಇಂಗ್ಲೆಂಡ್: ಕೋಟ್ಯಂತರ ಜನರನ್ನು ಆತಂಕಕ್ಕೆ ದೂಡಿ, ಲಕ್ಷಾಂತರ ಜನರನ್ನು ಬಲಿ ಪಡೆದಿರುವ ಮಹಾಮಾರಿ ಕೋವಿಡ್​​ಗೆ ಬ್ರಿಟನ್​​ನಲ್ಲಿ ಮುಂದಿನ ವಾರದಲ್ಲೇ ಲಸಿಕೆ ಲಭ್ಯವಾಗಲಿದೆ.

ಬ್ರಿಟನ್​ ಸರ್ಕಾರ ಫೈಝರ್-ಬಯೋ &‌ ಟೆಕ್‌ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ವೈರಸ್ ಲಸಿಕೆಯ ಸಾರ್ವತ್ರಿಕ ಬಳಕೆಗೆ ಅನುಮೋದನೆ ನೀಡಿದೆ. ಈ ಮೂಲಕ ಕೊರೊನಾ ಲಸಿಕೆಯೊಂದರ ಸಾರ್ವತ್ರಿಕ ಬಳಕೆಗೆ ಒಪ್ಪಿಗೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಬ್ರಿಟನ್ ಪಾತ್ರವಾಗಿದೆ.

ಲಸಿಕೆಯ ಬಳಕೆಗೆ ಹಸಿರು ನಿಶಾನೆ ತೋರಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಬ್ರಿಟನ್ ಪಾತ್ರವಾಗಿದೆ. ಫೈಝರ್ ಬಯೋ​ ​​ಟೆಕ್​​​ನ ಲಸಿಕೆಗೆ ಅನುಮೋದನೆ ನೀಡುವಂತೆ ಮೆಡಿಸಿನ್ಸ್ ಆ್ಯಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್​​ ರೆಗ್ಯುಲೇಟರಿ ಏಜೆನ್ಸಿ (ಎಂಹೆಚ್​ಆರ್​ಎ) ಮಾಡಿದ್ಧ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿದ್ದು ಈ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹನ್​ಕಾಕ್ ತಿಳಿಸಿದ್ದಾರೆ.

ಲಸಿಕೆ ವಿತರಣೆಗೆ ದೇಶದಲ್ಲಿ ಸುಮಾರು 50 ಆಸ್ಪತ್ರೆಗಳು ಸಿದ್ಧವಾಗಿವೆ. ಇನ್ನೂ ಹಲವೆಡೆ ಲಸಿಕೆ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಎನ್​ಹೆಚ್​​ಎಸ್​​ನ ಮುಖ್ಯ ಕಾರ್ಯ ನಿರ್ವಾಹಕ ಸರ್​ ಸೈಮನ್ ಸ್ಟೀವನ್ಸ್ ತಿಳಿಸಿದ್ದಾರೆ. ಕೋವಿಡ್ ಲಸಿಕೆ ಲಭ್ಯವಿದ್ದರೂ, ಜನರು ಇನ್ನೂ ಜಾಗರೂಕತೆಯಿಂದಿರಬೇಕು ಅಂತಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಲಸಿಕೆಯನ್ನು ಮಾನವರ ಬಳಕೆಗೆ ಇನ್ನೂ ಅನುಮೋದಿಸಲಾಗಿಲ್ಲ. ಆದರೂ, ಜನತೆ ಪ್ರಾಯೋಗಿಕ ಪರೀಕ್ಷೆಗಳನ್ನು ಸ್ವೀಕರಿಸಿ ಉತ್ತಮ ಫಲಿತಾಂಶ ಕಂಡಿದ್ದಾರೆ. ವ್ಯಾಕ್ಸಿನ್​​ಅನ್ನು ಐಸ್ ತುಂಬಿದ ಬಾಕ್ಸ್​ಗಳಲ್ಲಿ ಸಾಗಿಸಲಾಗುತ್ತಿದ್ದು, ಐದು ದಿನಗಳವರೆಗೆ ಫ್ರಿಡ್ಜ್​ನಲ್ಲಿ ಸಂಗ್ರಹಿಸಿಡಬಹುದು. ಮೊದಲಿಗೆ ಈ ಲಸಿಕೆಯನ್ನು ಹೆಚ್ಚಿನ ಅಪಾಯದಲ್ಲಿರುವ ಜನರಿಗೆ, ಆರೋಗ್ಯ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ವಿತರಿಸಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಆದರೆ ಭಾರತದಲ್ಲಿ ಈ ಲಸಿಕೆ ಸದ್ಯಕ್ಕಂತೂ ಲಭ್ಯವಾಗುವುದಿಲ್ಲ. ಭಾರತದಲ್ಲಿ ಫೈಝರ್​ ಅಥವಾ ಅದರ ಸಹಭಾಗಿತ್ವ ಹೊಂದಿರುವ ಕಂಪೆನಿಗಳಿಗೆ ಪ್ರಯೋಗ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಭಾರತದಲ್ಲಿ ಈ ಲಸಿಕೆ ಬಹಳ ಬೇಗನೆ ಸಿಗುವುದು ಅನುಮಾನ.

Last Updated : Dec 2, 2020, 10:42 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.