ಬಾಗ್ದಾದ್: ಪಶ್ಚಿಮ ಇರಾಕ್‌ನಲ್ಲಿ ಯುಎಸ್ ಸೈನಿಕರಿಗೆ ಆತಿಥ್ಯ ವಹಿಸಿರುವ ಇರಾಕಿ ವಾಯುನೆಲೆಯ ಬಳಿ ರಾಕೆಟ್ ದಾಳಿ ನಡೆಸಲಾಗಿದೆ. ಈ ವೇಳೆ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಮೆರಿಕ ನೇತೃತ್ವದ ಒಕ್ಕೂಟದ ವಕ್ತಾರರು ತಿಳಿಸಿದ್ದಾರೆ.
ಅನ್ಬರ್ ಪ್ರಾಂತ್ಯದ ವಿಸ್ತಾರವಾದ ಸಂಕೀರ್ಣವಾದ ಐನ್ ಅಲ್ - ಅಸಾದ್ ಏರ್ ಬೇಸ್ ಬಳಿ ಮಧ್ಯಾಹ್ನ 1: 35 ಕ್ಕೆ ರಾಕೆಟ್ ಅಪ್ಪಳಿಸಿದೆ ಎಂದು ಕರ್ನಲ್ ವೇಯ್ನ್ ಮಾರೊಟ್ಟೊ ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಹಾಗೆ ಹಾನಿಯಾದ ಬಗ್ಗೆ ಮತ್ತು ಈ ಸಂಬಂಧ ತನಿಖೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ದಾಳಿಯ ಜವಾಬ್ದಾರಿಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೆ, ಬಾಗ್ದಾದ್‌ನಲ್ಲಿನ ಯುಎಸ್ ರಾಯಭಾರ ಕಚೇರಿ ಮತ್ತು ಅಮೆರಿಕದ ಪಡೆಗಳಿಗೆ ಆತಿಥ್ಯ ವಹಿಸುವ ಇತರ ಮಿಲಿಟರಿ ನೆಲೆಗಳ ವಿರುದ್ಧ ಹಲ್ಲೆ ನಡೆಸಿದ ಕಾರಣಕ್ಕಾಗಿ ಇರಾನ್ ಬೆಂಬಲಿತ ಇರಾಕಿ ಸೇನೆಯ ಗುಂಪುಗಳನ್ನು ಯುಎಸ್ ಅಧಿಕಾರಿಗಳು ಈ ಹಿಂದೆ ದೂಷಿಸಿದ್ದರು.