ETV Bharat / international

ಉಕ್ರೇನ್​ ಮೇಲಿನ ಆಕ್ರಮಣಕ್ಕೆ ರಷ್ಯಾ ಟೆನಿಸ್​ ಆಟಗಾರ್ತಿ ವಿರೋಧ.. ಯುದ್ಧ ನಿಲ್ಲಿಸಲು ಕೋರಿಕೆ - ಯುದ್ಧ ನಿಲ್ಲಿಸಿದ ಎಂದ ರಷ್ಯಾ ಟೆನಿಸ್​ ಆಟಗಾರ್ತಿ

ಉಕ್ರೇನ್​ ಮೇಲಿನ ರಷ್ಯಾ ದಾಳಿಗೆ ಸ್ವದೇಶಿಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ರಷ್ಯಾದ ಟೆನಿಸ್ ಆಟಗಾರ್ತಿ ಅನಸ್ತಾಸಿಯಾ ಪಾವ್ಲ್ಯುಚೆಂಕೋವಾ 'ಉಕ್ರೇನ್ ಮೇಲಿನ ಆಕ್ರಮಣವನ್ನು ತಕ್ಷಣವೇ ಕೊನೆಗೊಳಿಸಿ, ಶಾಂತಿ ಕಾಪಾಡಿ' ಎಂದು ಕರೆ ನೀಡಿದ್ದಾರೆ.

anastasia
ಅನಸ್ತಾಸಿಯಾ
author img

By

Published : Mar 1, 2022, 1:21 PM IST

ಲಂಡನ್: ಉಕ್ರೇನ್​ ಮೇಲಿನ ರಷ್ಯಾ ದಾಳಿಗೆ ಸ್ವದೇಶಿಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ರಷ್ಯಾದ ಟೆನಿಸ್ ಆಟಗಾರ್ತಿ ಅನಸ್ತಾಸಿಯಾ ಪಾವ್ಲ್ಯುಚೆಂಕೋವಾ 'ಉಕ್ರೇನ್ ಮೇಲಿನ ಆಕ್ರಮಣವನ್ನು ತಕ್ಷಣವೇ ಕೊನೆಗೊಳಿಸಿ, ಶಾಂತಿ ಕಾಪಾಡಿ' ಎಂದು ಕರೆ ನೀಡಿದ್ದಾರೆ.

ಉಭಯ ದೇಶಗಳ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ವಿರೋಧಿಸಿ ತಮ್ಮ ಟ್ವಿಟರ್​ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, "ನಾನು ಬಾಲ್ಯದಿಂದಲೂ ಟೆನಿಸ್ ಆಡುತ್ತಿದ್ದೇನೆ. ನನ್ನ ಜೀವನದುದ್ದಕ್ಕೂ ನಾನು ರಷ್ಯಾ ಪ್ರತಿನಿಧಿಸುತ್ತೇನೆ. ಆದರೆ, ಯುದ್ಧದ ಆರಂಭದ ಬಳಿಕ ನನ್ನ ಕುಟುಂಬ, ಸ್ನೇಹಿತರು ಭಯಪಟ್ಟಂತೆ ನಾನೂ ಕೂಡ ಭೀತಿಯಲ್ಲಿದ್ದೇನೆ. ವೈಯಕ್ತಿಕ ಮಹತ್ವಾಕಾಂಕ್ಷೆ, ರಾಜಕೀಯಕ್ಕಾಗಿ ಹಿಂಸಾಚಾರ ನಡೆಸುವುದನ್ನು ನಾನು ಬೆಂಬಲಿಸುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ.

ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳಲು ನಾನು ಹೆದರುವುದಿಲ್ಲ. ನಾನು ಯುದ್ಧ ಮತ್ತು ಹಿಂಸಾಚಾರಕ್ಕೆ ವಿರುದ್ಧವಾಗಿದ್ದೇನೆ. ವೈಯಕ್ತಿಕ ಮಹತ್ವಾಕಾಂಕ್ಷೆಗಳು ಅಥವಾ ರಾಜಕೀಯ ಉದ್ದೇಶಗಳು ಹಿಂಸಾತ್ಮಕ ರೂಪ ಪಡೆಯಬಾರದು. ಇದು ನಮ್ಮ ಮತ್ತು ಮುಂದಿನ ಪೀಳಿಗೆಗೆ ಮಾರಕವಾಗಲಿದೆ ಎಂದಿದ್ದಾರೆ.

ನಾನು ರಾಜಕಾರಣಿಯೂ ಅಲ್ಲ, ಸಾರ್ವಜನಿಕ ವ್ಯಕ್ತಿಯೂ ಅಲ್ಲ. ನನಗೆ ಇಂತಹ ವಿಚಾರಗಳಲ್ಲಿ ಯಾವುದೇ ಅನುಭವವಿಲ್ಲ. ನಾನೊಬ್ಬ ಟೆನಿಸ್ ಕ್ರೀಡಾಪಟುವಷ್ಟೇ. ನನ್ನ ದೇಶ ತೆಗೆದುಕೊಂಡ ಈ ನಿರ್ಧಾರವನ್ನು ಸಾರ್ವಜನಿಕವಾಗಿ ಮತ್ತು ಧೈರ್ಯದಿಂದ ವಿರೋಧಿಸುತ್ತೇನೆ. ಕೂಡಲೇ ಯುದ್ಧ ಮತ್ತು ಹಿಂಸಾಚಾರವನ್ನು ನಿಲ್ಲಿಸಿ ಎಂದು ಅನಸ್ತಾಸಿಯಾ ಬರೆದುಕೊಂಡಿದ್ದಾರೆ.

ಉಕ್ರೇನ್​ ಮೇಲಿನ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಕ್ರೀಡಾ ಜಗತ್ತು ಖಂಡಿಸಿದೆ. ಟೆನಿಸ್​ ಆಟಗಾರರಾದ ಡೇನಿಯಲ್ ಮೆಡ್ವೆಡೆವ್, ಆಂಡ್ರೆ ರುಬ್ಲೆವ್ ಯುದ್ಧವನ್ನು ನಿಲ್ಲಿಸಲು ಕೋರಿದ್ದರು. ಇದೀಗ ಅನಸ್ತಾಸಿಯಾ ಪಾವ್ಲ್ಯುಚೆಂಕೋವಾ ಕೂಡ ತನ್ನ ದೇಶದ ನಿರ್ಧಾರದ ವಿರುದ್ಧ ಮಾತನಾಡಿದ್ದಾರೆ.

ಓದಿ: ರಷ್ಯಾ ವಿರುದ್ಧ ಹೆಚ್ಚಿದ ಆಕ್ರೋಶ.. ಪುಟಿನ್​ಗೆ ನೀಡಿದ 'ಗೌರವ ಬ್ಲ್ಯಾಕ್​ ಬೆಲ್ಟ್'​ ವಾಪಸ್​ಗೆ ವಿಶ್ವ ಟೇಕ್ವಾಂಡೋ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.