ETV Bharat / international

ಉಕ್ರೇನ್‌ ಮೇಲೆ ರಷ್ಯಾ ಯುದ್ಧದ ವಿಚಾರದಲ್ಲಿ ಭಾರತದ ತಟಸ್ಥ ನಿಲುವೇಕೆ? ಇಲ್ಲಿದೆ ಉತ್ತರ - ರಷ್ಯಾ ಉಕ್ರೇನ್‌ ಯುದ್ಧ

ಉಕ್ರೇನ್‌ ಮೇಲೆ ರಷ್ಯಾ ನಿರಂತರವಾಗಿ ದಾಳಿ ಮಾಡುತ್ತಿರುವ ವಿಚಾರದಲ್ಲಿ ವ್ಲಾಡಿಮಿರ್‌ ಪುಟಿನ್‌ ಸರ್ಕಾರದ ಮೇಲೆ ನಿರ್ಬಂಧ ವಿಧಿಸುವಂತೆ ಅಮೆರಿಕ ಸೇರಿದಂತೆ ಜಗತ್ತಿನ ಇತರೆ ರಾಷ್ಟ್ರಗಳು ಭಾರತದ ಮೇಲೆ ಒತ್ತಡ ಹೇರುತ್ತಿವೆ. ಆದರೆ ಭಾರತ ಮಾತ್ರ ಇದಕ್ಕೆ ಯಾವುದೇ ರೀತಿಯಲ್ಲೂ ಮಣಿಯದೆ ದೇಶದ ಹಿತದೃಷ್ಟಿಯನ್ನು ಕಾಪಾಡಿಕೊಳ್ಳುತ್ತಾ ತನ್ನ ಹಳೆಯ ನಿಲುವಿಗೆ ಬದ್ಧವಾಗಿದೆ.

russia ukraine war why india supporting russia
ಉಕ್ರೇನ್‌ ಮೇಲೆ ಯುದ್ಧದ ವಿಚಾರದಲ್ಲಿ ಭಾರತದ ತಟಸ್ಥ ನಿಲುವು ಯಾಕೆ..? ರಷ್ಯಾದೊಂದಿಗೆ ಮೈತ್ರಿ ಕಾರಣವೇ..?
author img

By

Published : Mar 3, 2022, 6:40 PM IST

ಉಕ್ರೇನ್-ರಷ್ಯಾ ಯುದ್ಧವನ್ನು ಭಾರತ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಒತ್ತಡ, ಮನವಿಗಳಿಗೆ ಮಣಿಯದೆ ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಾಗರೂಕತೆಯಿಂದ ನಡೆದುಕೊಳ್ಳುತ್ತಿದೆ. ಆದ್ದರಿಂದಲೇ ರಷ್ಯಾ ವಿರುದ್ಧ ವಿಶ್ವಸಂಸ್ಥೆಯ ನಿರ್ಣಯಗಳ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದೆ.

ಮಾಸ್ಕೋ ಜೊತೆಗಿನ ಸುದೀರ್ಘಕಾಲದ ಅತ್ಯಂತ ಆತ್ಮೀಯ ಗೆಳೆತನವನ್ನು ಮುರಿದುಕೊಳ್ಳಲು ಯಾವುದೇ ಸನ್ನಿವೇಶದಲ್ಲೂ ಇಚ್ಛಿಸದ ಭಾರತ, ಶಾಂತಿ ಮಾತುಕತೆಯೇ ಸಮಸ್ಯೆಗೆ ಪರಿಹಾರ ಎಂದು ಪುನರುಚ್ಛರಿಸಿದೆ.

1. ಭಾರತಕ್ಕೆ ಶೇ.70ರಷ್ಟು ಶಸ್ತ್ರಾಸ್ತ್ರಗಳ ಪೂರೈಕೆದಾರ ರಷ್ಯಾ: ಭಾರತವು ರಷ್ಯಾದೊಂದಿಗೆ ಬಹಳ ಹಿಂದಿನಿಂದಲೂ ಉತ್ತಮ ರಾಜತಾಂತ್ರಿಕ, ಆರ್ಥಿಕ ಸಂಬಂಧವನ್ನು ಹೊಂದಿದೆ. ಸೇನೆ, ಶಸ್ತ್ರಾಸ್ತ್ರ, ವ್ಯಾಪಾರ ಸಂಬಂಧಗಳ ವಿಷಯದಲ್ಲಿ ರಷ್ಯಾ ಹಲವು ವರ್ಷಗಳಿಂದ ಭಾರತದ ಉತ್ತಮ ಮಿತ್ರರಾಷ್ಟ್ರವಾಗಿದೆ. ಭಾರತಕ್ಕೆ ರಕ್ಷಣಾ ಮತ್ತು ಶಸ್ತ್ರಾಸ್ತ್ರಗಳ ಅತಿದೊಡ್ಡ ಪೂರೈಕೆದಾರ ದೇಶ ರಷ್ಯಾ ಎನ್ನುವುದು ದೇಶದ ಬಹುತೇಕರಿಗೆ ಗೊತ್ತಿರದ ಸಂಗತಿಯೇನಲ್ಲ.

ಭಾರತ ರಷ್ಯಾದಿಂದ ಅತ್ಯಾಧುನಿಕ ಫೈಟರ್ ಜೆಟ್‌ಗಳು, ಜಲಾಂತರ್ಗಾಮಿಗಳು ಹಾಗೂ 1,300ಕ್ಕೂ ಹೆಚ್ಚು T-90 ಟ್ಯಾಂಕ್‌ಗಳನ್ನು ಖರೀದಿಸಿದೆ. ಅಮೆರಿಕದ ಒತ್ತಡದ ನಡುವೆಯೂ ರಷ್ಯಾದಿಂದ ಅತ್ಯಾಧುನಿಕ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖರೀದಿಸುತ್ತಿದೆ. ಈ ಬಗ್ಗೆ 2018ರಲ್ಲಿ $5 ಬಿಲಿಯನ್ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ್ದವು. ಭಾರತ ತನ್ನ ಶೇ.70ರಷ್ಟು ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಒತ್ತಡದಿಂದ ಭಾರತ ರಷ್ಯಾ ಮೇಲೆ ನಿರ್ಬಂಧ ಹೇರಿದರೆ ರಕ್ಷಣಾ ಉಪಕರಣಗಳ ನಿರ್ವಹಣೆ ಕಷ್ಟವಾಗಲಿದೆ. ಈ ಶಸ್ತ್ರಾಸ್ತ್ರಗಳ ನಿರ್ವಹಣೆಯಲ್ಲಿ ದೇಶಿ ಜ್ಞಾನವನ್ನು ಪಡೆಯಲು ಭಾರತಕ್ಕೆ ದಶಕಗಳೇ ಬೇಕು.

2. ಭಾರತಕ್ಕೆ ಆಪತ್ಬಾಂಧವ ರಷ್ಯಾ: ಉಕ್ರೇನ್ ವಿಚಾರದಲ್ಲಿ ಭಾರತದ ಬೆಂಬಲ ಕೋರಿರುವ ಅಮೆರಿಕ ಯಾವುದೇ ಯುದ್ಧದ ಸಂದರ್ಭದಲ್ಲೂ ನಮ್ಮ ಬೆಂಬಲಕ್ಕೆ ನಿಂತಿಲ್ಲ. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ವೇಳೆ ರಷ್ಯಾ ಭಾರತಕ್ಕೆ ನೆರವು ನೀಡಿತ್ತು. ಬಂಗಾಳಕೊಲ್ಲಿಯಲ್ಲಿ 70 ಯುದ್ಧವಿಮಾನಗಳನ್ನು ಹೊಂದಿದ್ದ ಅಮೆರಿಕದ ಯುದ್ಧನೌಕೆ ಮತ್ತು ಅರಬ್ಬಿ ಸಮುದ್ರದಲ್ಲಿ ಬ್ರಿಟನ್ನಿನ ಯುದ್ಧನೌಕೆ ಭಾರತಕ್ಕೆ ಧಕ್ಕೆ ತಂದಿದ್ದವು.

ಭಾರತದ ಕೋರಿಕೆಯ ಮೇರೆಗೆ ರಷ್ಯಾದ ಜಲಾಂತರ್ಗಾಮಿ ನೌಕೆಗಳು ಈ ಯುದ್ಧನೌಕೆಗಳನ್ನು ಮುನ್ನಡೆಯದಂತೆ ತಡೆದಿದ್ದವು. ಪಾಶ್ಚಿಮಾತ್ಯ ದೇಶಗಳು ಕೂಡ ಯಾವುದೇ ಯುದ್ಧದಲ್ಲಿ ಭಾರತದ ಪರವಾಗಿ ನಿಂತ ದಾಖಲೆಗಳಿಲ್ಲ. ಬದಲಾಗಿ ಭಾರತ ಪರಮಾಣು ಪರೀಕ್ಷೆಗಳನ್ನು ಮಾಡಿದಾಗ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ.

3. ಭಾರತ-ಪಾಕ್‌ ವಿಚಾರದಲ್ಲಿ ಅಮೆರಿಕ, ಬ್ರಿಟನ್‌ ದ್ವಂದ್ವ ನಿಲುವು: ದೇಶ ವಿಭಜನೆಯ ಸಂದರ್ಭದಲ್ಲಿ ಬ್ರಿಟನ್ ಕೈಗೊಂಡ ಕ್ರಮಗಳ ಫಲವಾಗಿ ಭಾರತ-ಪಾಕ್ ಸಂಘರ್ಷ ಉಲ್ಬಣಗೊಳ್ಳುತ್ತಾ ಸಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಿಂದಾಗಿ ಪಾಕಿಸ್ತಾನವು ಚೀನಾದೊಂದಿಗೆ ಪಾಕಿಸ್ತಾನದ ಗಡಿ ಹಂಚಿಕೊಂಡಿದ್ದು ಉಪಖಂಡದ ಭೌಗೋಳಿಕ ಪರಿಸ್ಥಿತಿ ಬದಲಾಗಿದೆ. ಭಾರತದಿಂದ 45 ಟ್ರಿಲಿಯನ್ ಡಾಲರ್ ಸಂಪತ್ತನ್ನು ಲೂಟಿ ಮಾಡಿದ ಬ್ರಿಟನ್, ಕೊಹಿನೂರ್ ವಜ್ರವನ್ನೂ ತೆಗೆದುಕೊಂಡು ಹೋಗಿದೆ. ಇನ್ನು ಭಾರತ-ಪಾಕ್ ಗಡಿ ಸಂಘರ್ಷದ ವಿವಾದದಲ್ಲಿ ಅಮೆರಿಕ ಹಾಗು ಬ್ರಿಟನ್ ದೇಶಗಳನ್ನು ಸ್ಪಷ್ಟವಾಗಿ ಭಾರತದ ಪರ ನಿಲುವು ತೆಗೆದುಕೊಂಡಿಲ್ಲ.

4. ವಿಶ್ವಸಂಸ್ಥೆಯಲ್ಲಿ ಭಾರತ ವಿರುದ್ಧ ಉಕ್ರೇನ್ ನಿಲುವು: ವಿಶ್ವಸಂಸ್ಥೆಯಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಉಕ್ರೇನ್ ಭಾರತದ ವಿರುದ್ಧ ಪಾಕಿಸ್ತಾನವನ್ನು ಬೆಂಬಲಿಸಿದ ನಿದರ್ಶನಗಳಿವೆ.

ಇದನ್ನೂ ಓದಿ: ಪುಟಿನ್‌ ಬಂಧಿಸುವ ರಷ್ಯಾ ಅಧಿಕಾರಿಗಳಿಗೆ ₹7.5 ಕೋಟಿ ಬಹುಮಾನ ಘೋಷಿಸಿದ ಉದ್ಯಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.