ಕೀವ್(ಉಕ್ರೇನ್): ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದಾಗಿನಿಂದಲೂ ನೂರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದ ಆತಂಕದ ಮಧ್ಯೆ ಉಕ್ರೇನ್ ರಾಜಧಾನಿ ಕೀವ್ನಲ್ಲಿ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿವೊಂದು ಇದೀಗ ದೇಶ ರಕ್ಷಣೆಗೆ ಕೈಯಲ್ಲಿ ಗನ್ ಹಿಡಿದು ನಿಂತಿದೆ.
ಕೀವ್ನಲ್ಲಿ 21 ವರ್ಷದ ಅರಿವಾ ಹಾಗೂ 24 ವರ್ಷದ ಸ್ವಾಟೋಪ್ಲಾವ್ ಫರ್ಸಿವ್ ನಿನ್ನೆ ವಿವಾಹವಾಗಿದ್ದರು. ಇದರ ಬೆನ್ನಲ್ಲೇ ಇದೀಗ ದೇಶ ರಕ್ಷಣೆಗೆ ಮುಂದಾಗಿದ್ದು, ಕೈಯಲ್ಲಿ ಗನ್ ಹಿಡಿದು ಎದುರಾಳಿಗಳ ವಿರುದ್ಧ ಹೋರಾಡಲು ಮುಂದಾಗಿದ್ದಾರೆ.
ಇದನ್ನೂ ಓದಿರಿ: ರಷ್ಯಾ ದಾಳಿ ತಡೆಗೆ ಸೇತುವೆ ಜೊತೆಗೆ ತನ್ನನ್ನೇ ಸ್ಫೋಟಿಸಿಕೊಂಡ ಉಕ್ರೇನ್ ಯೋಧ!
ರಷ್ಯಾ ಮಿಲಿಟರಿ ದಾಳಿ ಘೋಷಣೆ ಮಾಡುತ್ತಿದ್ದಂತೆ ಉಕ್ರೇನ್ ರಕ್ಷಣೆಗೋಸ್ಕರ ಹೋರಾಡಲು ಮುಂದಾಗುವ ಪ್ರತಿಯೊಬ್ಬರಿಗೂ ಆಯುಧ ನೀಡುವುದಾಗಿ ಉಕ್ರೇನ್ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಹೀಗಾಗಿ, ಸ್ವಯಂ ಪ್ರೇರಿತರಾಗಿ ಸಾವಿರಾರು ಜನರು ದೇಶದ ರಕ್ಷಣೆಗೆ ಮುಂದಾಗಿದ್ದಾರೆ.
ರಷ್ಯಾ ಮಿಲಿಟರಿ ಪಡೆಗಳು ಈಗಾಗಲೇ ಉಕ್ರೇನ್ನಲ್ಲಿ ಕಾಲಿಟ್ಟಿರುವ ಕಾರಣ ಪರಿಸ್ಥಿತಿ ಕೈಮೀರಿ ಹೋಗಿದ್ದು, ಇದರ ಹೊರತಾಗಿ ಕೂಡ ಅಲ್ಲಿನ ಸೈನಿಕರು ದಿಟ್ಟತನದಿಂದಲೇ ಹೋರಾಟ ಮುಂದುವರೆಸಿದ್ದಾರೆ.