ETV Bharat / international

ರಷ್ಯಾ ಆಕ್ರಮಣ ಶುರು: ಉಕ್ರೇನ್​ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ- ವಿಡಿಯೋ

ರಷ್ಯಾ ಇದೀಗ ಉಕ್ರೇನ್​ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದೆ. ಉಕ್ರೇನ್​ ನಗರಗಳನ್ನು ರಷ್ಯಾ ಪಡೆಗಳು ಆವರಿಸಿಕೊಂಡಿವೆ ಎಂಬ ವರದಿಗಳು ಲಭ್ಯವಾಗುತ್ತಿವೆ.

russia-attacks
ರಷ್ಯಾ ಆಕ್ರಮಣ
author img

By

Published : Feb 24, 2022, 11:41 AM IST

Updated : Feb 24, 2022, 12:07 PM IST

ಮಾಸ್ಕೋ(ರಷ್ಯಾ): ಉಕ್ರೇನ್​ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಬಳಿಕ ಆ ರಾಷ್ಟ್ರದ ಹಲವೆಡೆ ಸ್ಫೋಟದ ಸದ್ದು ಕೇಳಿ ಬಂದಿದೆ. ಇದರ ಜೊತೆಗೆ, ಉಕ್ರೇನ್​ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಶುರುವಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವರು ಹೇಳಿದ್ದಾರೆ.

ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ನಡೆದ ದಾಳಿಯ ದೃಶ್ಯ

ಉಕ್ರೇನ್​ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಲು ರಷ್ಯಾ ಮುಂದಾಗಿದೆ. ಇದರಲ್ಲಿ ವಿಶ್ವದ ಯಾವುದೇ ರಾಷ್ಟ್ರಗಳು ಮಧ್ಯಪ್ರವೇಶಿಸದಂತೆ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಇಂದು​ ಬೆಳಗ್ಗೆಯಷ್ಟೇ ಎಚ್ಚರಿಕೆ ನೀಡಿದ್ದರು.

ಅಲ್ಲದೇ, ಇದರಲ್ಲಿ ಭಾಗಿಯಾಗುವ ರಾಷ್ಟ್ರಗಳು ಹಿಂದೆಂದೂ ಕಂಡರಿಯದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಗುಡುಗಿದ್ದರು. ಇದೀಗ ಉಕ್ರೇನ್​ನ ರಾಜಧಾನಿ ಕೀವ್​ ಮತ್ತು ಹಲವು ನಗರಗಳಲ್ಲಿ ರಷ್ಯಾ ಪಡೆಗಳು ಕ್ಷಿಪಣಿ​ ದಾಳಿ ನಡೆಸಿವೆ.

ಇದಲ್ಲದೇ ಕೀವನ್​ ಮಧ್ಯಭಾಗದಲ್ಲಿ ವಾಯುದಾಳಿಯ ಸೈರನ್​ಗಳು ಮೊಳಗಿದ ಬಗ್ಗೆಯೂ ವರದಿಯಾಗಿವೆ. ಸ್ಫೋಟದ ಬಳಿಕ ಸಾವು ನೋವುಗಳ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ರಷ್ಯಾ ಇದೀಗ ಉಕ್ರೇನ್​ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದೆ. ಉಕ್ರೇನ್​ ನಗರಗಳಲ್ಲಿ ರಷ್ಯಾ ಪಡೆಗಳು ಆವರಿಸಿಕೊಂಡಿವೆ ಎಂದು ವಿದೇಶಾಂಗ ಇಲಾಖೆ ಟ್ವೀಟ್​ ಮಾಡಿದೆ.

ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್!

Last Updated : Feb 24, 2022, 12:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.