ಮಾಸ್ಕೋ: ಯುದ್ಧಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿರುವ ಭಾರತೀಯರು ಸೇರಿದಂತೆ ಇತರ ದೇಶಗಳ ನಾಗರಿಕರ ರಕ್ಷಣೆಗೋಸ್ಕರ ಬುಧವಾರ ಬೆಳಗ್ಗೆ ರಷ್ಯಾ ಕದನ ವಿರಾಮ ಘೋಷಿಸಿದೆ. ಇಂದು ಬೆಳಗ್ಗೆ ರಷ್ಯಾ ತಾತ್ಕಲಿಕ ಕದನ ವಿರಾಮ ಘೋಷಿಸಿದೆ. ಕೀವ್ ಸೇರಿದಂತೆ ಹಲವಾರು ನಗರಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ಸ್ಥಾಪಿಸಲು ಸಿದ್ಧವಾಗಿದೆ ಎಂದು ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಮಾನವೀಯ ಸಮನ್ವಯ ಕೇಂದ್ರದ ಮುಖ್ಯಸ್ಥ ಮಿಖಾಯಿಲ್ ಮಿಜಿಂಟ್ಸೆವ್ ಚೆರ್ನಿಹಿವ್, ನಾಗರಿಕರನ್ನ ಸ್ಥಳಾಂತರಿಸುವ ಸಲುವಾಗಿ ಉಕ್ರೇನ್ಗೆ ರಷ್ಯಾ ಮತ್ತೊಂದು ಅವಕಾಶ ನೀಡಿದೆ. ಸುಮಿ, ಖಾರ್ಕಿವ್, ಮರಿಯುಪೋಲ್ ಮತ್ತು ಝಪೊರಿಝಿಯಾದಿಂದ ಮಾನವೀಯ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಿದ್ದು, ಜನರ ಸ್ಥಳಾಂತರಕ್ಕೆ ಅನುವು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಬುಧವಾರ ಮಾರ್ಚ್ 9 ರಂದು ಮಾಸ್ಕೋ ಕಾಲಮಾನ ಬೆಳಗ್ಗೆ 3 ಗಂಟೆಗೆ ಕದನ ವಿರಾಮ ಘೋಷಣೆ ಮಾಡೋದಾಗಿ ರಷ್ಯಾ ತಿಳಿಸಿದೆ. ರಷ್ಯಾದ ರಾಜಧಾನಿ ಮಾಸ್ಕೋ ಕಾಲಮಾನಕ್ಕಿಂತಾ ಭಾರತದ ಕಾಲಮಾನ ಎರಡೂವರೆ ಗಂಟೆ ಮುಂದಿದೆ. ನಿನ್ನೆ ಸಹ ಸುಮಿ ನಗರ ಸೇರಿದಂತೆ ಅನೇಕ ಪ್ರದೇಶಗಳಿಂದ ನಾಗರಿಕರ ಸ್ಥಳಾಂತರಿಸುವಿಕೆ ಕಾರ್ಯ ನಡೆಯಿತು.
ಇದನ್ನೂ ಓದಿ: ಸುಮಿಯಲ್ಲಿ ಸಿಲುಕಿದ 694 ಭಾರತೀಯರ ಸುರಕ್ಷಿತ ಸ್ಥಳಾಂತರ: ಕೇಂದ್ರ ಸರ್ಕಾರ