ETV Bharat / international

ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್​​ಗೆ ಆಜೀವ ನಿಷೇಧ ಹೇರಿದ ಬ್ರಿಟನ್ ಪಬ್: ಕಾರಣವೇನು ಗೊತ್ತೇ? - ರಿಷಿ ಸುನಾಕ್ ಇತ್ತೀಚಿನ ಸುದ್ದಿ

ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ಊಟ ನೀಡುವ ತಾತ್ಕಾಲಿಕ ಯೋಜನೆ ಅನುಷ್ಠಾನಗೊಳಿಸಿತು. ರಿಷಿ ಸುನಾಕ್​, ಸಂಸದರಾದ ಮ್ಯಾಟ್​ ವಿಕರ್ಸ್​, ಸಿಮನ್ ಕ್ಲಾರ್ಕ್​ ಹಾಗೂ ಜೇಕಬ್​ ಯಂಗ್ ಅವರು ಈ ಯೋಜನೆ ಮುಂದುವರಿಸುವುದರ ವಿರುದ್ಧ ಮತ ಚಲಾಯಿಸಿದ್ದರು. ಇದಕ್ಕೆ ಪ್ರತಿಯಾಗಿ ಯಾರ್ಕ್​ಶೈರ್​ನ ಸ್ಟೋಕ್ಸ್​ಲಿಯಲ್ಲಿ ಇರುವ ದಿ ಮಿಲ್​ ಪಬ್​ನ ಮಾಲೀಕ, ಈ ನಾಲ್ವರಿಗೆ ನಿಷೇಧ ಹೇರಿದ್ದಾರೆ.

Rishi Sunak
ರಿಷಿ ಸುನಾಕ್
author img

By

Published : Oct 25, 2020, 5:46 AM IST

ಲಂಡನ್​: ಇಂಗ್ಲೆಂಡ್ ಹಣಕಾಸು ಸಚಿವ ಹಾಗೂ ಇನ್ಫೋಸಿಸ್​ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್​ ಮೇಲೆ ಪಬ್​ವೊಂದು ಆಜೀವ ನಿಷೇಧ ಹೇರಿದೆ.

ರಿಷಿ ಜೊತೆಗೆ ಆಡಳಿತರೂಢ ಕನ್ಸರ್ವೇಟಿವ್​ ಪಕ್ಷದ ಇತರೆ ಮೂವರು ಸಂಸದರ ಮೇಲೂ ಇದೇ ಕ್ರಮವನ್ನು ತೆಗೆದುಕೊಂಡಿದೆ. ವರ್ಷದ ಆರಂಭದಲ್ಲಿ ಯುಕೆ ಸರ್ಕಾರವು ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ಊಟ ನೀಡುವ ತಾತ್ಕಾಲಿಕ ಯೋಜನೆ ಅನುಷ್ಠಾನಗೊಳಿಸಿತ್ತು.

ಈ ಯೋಜನೆ ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಸಂಸತ್ತಿನಲ್ಲಿ ಇತ್ತೀಚೆಗೆ ಸುದೀರ್ಘ ಚರ್ಚೆ, ಸಂವಾದ, ವಾದ- ಪ್ರತಿವಾದ ನಡೆದಿತ್ತು.

ರಿಷಿ ಸುನಾಕ್​, ಸಂಸದರಾದ ಮ್ಯಾಟ್​ ವಿಕರ್ಸ್​, ಸಿಮನ್ ಕ್ಲಾರ್ಕ್​ ಹಾಗೂ ಜೇಕಬ್​ ಯಂಗ್ ಅವರು ಈ ಯೋಜನೆ ಮುಂದುವರಿಸುವುದರ ವಿರುದ್ಧ ಮತ ಚಲಾಯಿಸಿದ್ದರು. ಇದಕ್ಕೆ ಪ್ರತಿಯಾಗಿ ಯಾರ್ಕ್​ಶೈರ್​ನ ಸ್ಟೋಕ್ಸ್​ಲಿಯಲ್ಲಿ ಇರುವ ದಿ ಮಿಲ್​ ಪಬ್​ನ ಮಾಲೀಕ, ಈ ನಾಲ್ವರಿಗೆ ನಿಷೇಧ ಹೇರಿದ್ದಾರೆ.

ಬ್ರಿಟನ್ ಸರ್ಕಾರ ಶಾಲಾ ಮಕ್ಕಳಿಗೆ ಉಚಿತ ಊಟ ನೀಡುವ ಯೋಜನೆಯನ್ನು ಸ್ಥಗಿತಗೊಳಿಸುವುದರ ಪರ ಮತ ಚಲಾಯಿಸಿದ್ದು ವಿಪರ್ಯಾಸ ಎಂದು ಕುಕ್​ ಅಸಮಾಧಾನ ಹೊರಹಾಕಿ, ಹೀಗಾಗಿ ಈ ನಾಲ್ವರ ವಿರುದ್ಧ ಪಬ್ ಪ್ರವೇಶಕ್ಕೆ ನಿಷೇಧ ಹೇರಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.