ETV Bharat / international

ಇಂಗ್ಲೆಂಡ್​​​​​​ನಲ್ಲಿ ಲಾಕ್‌ಡೌನ್‌ ಸಡಿಲ: ಜಾನ್ಸನ್‌ರ 3 ಹಂತದ ಪ್ಲಾನ್ ಆಗುತ್ತಾ ಸಕ್ಸಸ್​​​​!​​​​​​

ಇಂಗ್ಲೆಂಡ್​​ನಲ್ಲಿ​​​​​​ ಬುಧವಾರದಿಂದ ಲಾಕ್‌ಡೌನ್‌ ಅನ್ನು ಮೂರು ಹಂತದಲ್ಲಿ ತೆರವುಗೊಳಿಸಲಿದ್ದು, ಸಾರ್ವಜನಿಕ ಚಟುವಟಿಕೆಯ ಮೇಲೆ ನಿರ್ಬಂಧ ವಿಧಿಸಿದೆ. ಸೋಂಕು ಪ್ರಮಾಣದಲ್ಲಿ ಪುನಃ ಹೆಚ್ಚಳವಾಗದಿದ್ದರೆ ಜೂನ್ ವೇಳೆಗೆ ಶಾಲೆ ತೆರೆದು ಮಕ್ಕಳನ್ನು ಶಾಲೆಗೆ ಕಳುಹಿಸುವ ಯೋಜನೆ ರೂಪಿಸಲಾಗಿದೆ. ಅಲ್ಲದೇ, ಅಗತ್ಯವಲ್ಲದ ಮಳಿಗೆಗಳನ್ನು ತೆರೆಯಲು ಮತ್ತು ನಾಲ್ಕು ಗೋಡೆಗಳ ಮಧ್ಯೆ ಚಿತ್ರೀಕರಿಸಿದ ಕ್ರೀಡೆಯನ್ನು ಪ್ರಸಾರ ಮಾಡಲು ಅವಕಾಶ ನೀಡಲಾಗುತ್ತದೆ. ಮೂರನೇ ಹಂತವನ್ನು ಜುಲೈಗೆ ನಿಗದಿ ಪಡಿಸಲಾಗಿದ್ದು, ರೆಸ್ಟೋರೆಂಟ್‌ಗಳು, ಕೆಫೆಗಳು, ಪಬ್‌ಗಳು, ಹೇರ್‌ಡ್ರೆಸರ್‌ಗಳು ಮತ್ತು ಇತರ ವಹಿವಾಟುಗಳು ಪುನಃ ತೆರೆಯಲಿವೆ.

Reopening UK
ಯುಕೆ
author img

By

Published : May 14, 2020, 7:20 PM IST

ಲಂಡನ್: ಮುಂದಿನ ಕೆಲವು ತಿಂಗಳುಗಳಲ್ಲಿ ಬ್ರಿಟನ್‌ ಅನ್ನು ಪುನಃ ತೆರೆಯುವ ಷರತ್ತುಬದ್ದ ಯೋಜನೆಯನ್ನು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್‌ ಭಾನುವಾರ ಪ್ರಕಟಿಸಿದ್ದಾರೆ. ಇದರಲ್ಲಿ ಜೂನ್ ಆರಂಭದಲ್ಲಿ ಶಾಲೆ ತೆರೆಯುವುದು ಮತ್ತು ಇಂಗ್ಲೆಂಡ್‌ನಲ್ಲಿ ಕೆಲವು ಇತರ ಲಾಕ್‌ಡೌನ್‌ ನಿಯಮಗಳ ಸಡಿಲಗೊಳಿಸುವ ಪ್ರಸ್ತಾಪವೂ ಇದೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಜಾನ್ಸನ್‌ “ಈ ವಾರವೇ ಸಂಪೂರ್ಣ ಲಾಕ್‌ಡೌನ್‌ ಕೈಬಿಡುವುದು ಸೂಕ್ತವಲ್ಲ.” ಆದರೆ ಕೆಲವು ಬದಲಾವಣೆಗಳನ್ನು ಮಾಡಲಿದ್ದೇವೆ. ಮನೆಯಿಂದ ಮಾಡಲು ಸಾಧ್ಯವಾಗದ ಕೆಲಸಗಳಿಗೆ ಕಚೇರಿಗೆ ಹೋಗಲು ಜನರಿಗೆ ಅವಕಾಶ ಮಾಡಲಾಗುತ್ತದೆ ಎಂದಿದ್ದಾರೆ. ನಿರ್ಬಂಧವನ್ನು ಎಚ್ಚರಿಕೆಯಿಂದ ಸಡಿಲಗೊಳಿಸುವ ಬಗ್ಗೆ ಸರ್ಕಾರ 50 ಪುಟಗಳ ವರದಿಯನ್ನು ಬಿಡುಗಡೆ ಮಾಡಿದ್ದು “ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲದ ಪ್ರದೇಶದಲ್ಲಿ ಮತ್ತು ತಮಗೆ ಪರಿಚಯವಿಲ್ಲದ ಜನರ ಜೊತೆಗೆ ಸಂಪರ್ಕಕ್ಕೆ ಬರುವಂತಹ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರೆ ಜನರು ಮಾಸ್ಕ್ ಧರಿಸಬೇಕು. ಉದಾಹರಣೆಗೆ ಸಾರ್ವಜನಿಕ ಸಾರಿಗೆ ಬಳಕೆ ಮಾಡುವಾಗ ಮತ್ತು ಅಂಗಡಿಗಳಿಗೆ ಹೋಗುವಾಗ ಮಾಸ್ಕ್ ಧರಿಸಬೇಕು.”

ಇದು ನಿಯಮ ಎಂಬುದಕ್ಕಿಂತ ಹೆಚ್ಚಾಗಿ ಶಿಫಾರಸು ಆಗಿದೆ. ಮಾಸ್ಕ್ ಧರಿಸದೇ ಇದ್ದರೆ ಜನರಿಗೆ ದಂಡ ವಿಧಿಸುವುದಿಲ್ಲ. ಲಾಕ್‌ಡೌನ್‌ ಸಡಿಲಕ್ಕೆ ಮೂರು ಹಂತದ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ. ಬುಧವಾರದಿಂದ ಸಾರ್ವಜನಿಕ ಪ್ರದೇಶದಲ್ಲಿ ಸೀಮಿತ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತದೆ. ಜನರು ಈಗ ದಿನಕ್ಕೆ ಒಮ್ಮೆ ಹೊರಗೆ ಹೋಗಲು ಅವಕಾಶ ಹೊಂದಿದ್ದರು.

ಆದರೆ ಇನ್ನು ವ್ಯಾಯಾಮಕ್ಕೆ ನಿರ್ಬಂಧವಿಲ್ಲದೇ ಹೊರಗೆ ಹೋಗಬಹುದು ಮತ್ತು ಹೊರಗೆ ಸೂರ್ಯನ ಬಿಸಿಲನ್ನೂ ಆನಂದಿಸಬಹುದು. ಪಾರ್ಕ್ ಅಥವಾ ಬೀಚ್‌ಗೆ ಡ್ರೈವ್ ಮಾಡಿಕೊಂಡು ಹೋಗಬಹುದು ಮತ್ತು ಗಾಲ್ಫ್‌ ಕೋರ್ಸ್‌ಗಳು ಮತ್ತು ಟೆನಿಸ್ ಕೋರ್ಟ್‌ಗಳನ್ನು ಪುನಃ ತೆರೆಯಲಾಗಿದೆ. ಸೋಂಕು ಪುನಃ ಹೆಚ್ಚಳವಾಗದಿದ್ದರೆ, ಕೆಲವು ಶಾಲೆಗಳನ್ನು ಜೂನ್‌ ವೇಳೆಗೆ ತೆರೆಯಲಾಗುತ್ತದೆ. ಅಗತ್ಯವಿಲ್ಲದ ಅಂಗಡಿಗಳನ್ನು ತೆರೆಯಲಾಗುತ್ತದೆ ಮತ್ತು ನಾಲ್ಕು ಗೋಡೆಗಳ ಮಧ್ಯೆ ಚಿತ್ರೀಕರಿಸಿದ ಕ್ರೀಡಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಅವಕಾಶ ನೀಡಲಾಗುತ್ತದೆ. ಮೂರನೇ ಹಂತವನ್ನು ಜುಲೈಗೆ ನಿಗದಿ ಮಾಡಲಾಗಿದ್ದು, ರೆಸ್ಟೋರೆಂಟ್‌ಗಳು, ಕೆಫೆಗಳು, ಪಬ್‌ಗಳು, ಹೇರ್‌ಡ್ರೆಸರ್‌ಗಳು ಮತ್ತು ಇತರ ವಹಿವಾಟುಗಳನ್ನು ತೆರೆಯಲು ಅನುವು ಮಾಡಲಾಗುತ್ತದೆ.

ಸೋಂಕು ಹೆಚ್ಚಿದರೆ ಕಠಿಣ ಕ್ರಮ ಅನಿವಾರ್ಯ:

ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ನಾವು ವಿಧಿಯಿಲ್ಲದೇ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಜಾನ್ಸನ್‌ ಹೇಳಿದ್ದಾರೆ. ಕೋವಿಡ್ 19 ಕಾಣಿಸಿಕೊಂಡಿದ್ದರಿಂದ ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದ ಜಾನ್ಸನ್‌, ವಿಮಾನ ಪ್ರಯಾಣದ ಮೂಲಕ ದೇಶಕ್ಕೆ ಆಗಮಿಸುವವರಿಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಗುತ್ತದೆ ಎಂದಿದ್ದಾರೆ. ಐರ್ಲೆಂಡ್ ಮತ್ತು ಫ್ರಾನ್ಸ್‌ನಿಂದ ಬರುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಲಾಕ್‌ಡೌನ್‌ ಸಡಿಲಗೊಳಿಸುವ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ಗೊಂದಲವೂ ಇದೆ. ಈ ಕ್ರಮಗಳ ಬಗ್ಗೆ ಜಾನ್ಸನ್‌ ಪ್ರಕಟಿಸಿದ 24 ಗಂಟೆಗಳ ನಂತರ ಸಾರ್ವಜನಿಕವಾಗಿ ವಿವರವಾಗಿ ಪ್ರಕಟಿಸಲಾಯಿತು.

ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷದ ಏಟು

ಸದ್ಯ ನಮ್ಮ ದೇಶಕ್ಕೆ ಸ್ಪಷ್ಟತೆ ಮತ್ತು ವಿಶ್ವಾಸ ಅಗತ್ಯವಿದೆ. ಆದರೆ ಸದ್ಯದ ಮಟ್ಟಿಗೆ ಇವೆರಡೂ ನಮ್ಮಲ್ಲಿ ಕೊರತೆಯಿದೆ ಎಂದು ಪ್ರಮುಖ ವಿಪಕ್ಷ ಲೇಬರ್ ಪಾರ್ಟಿಯ ನಾಯಕ ಕೀರ್‌ ಸ್ಟಾರ್ಮರ್‌ ಸರ್ಕಾರದ ನಿರ್ಧಾರವನ್ನ ಟೀಕಿಸಿದ್ದಾರೆ.

ಮಾರ್ಚ್‌ 23 ರಿಂದ ಹಲವು ಕಠಿಣ ಕ್ರಮಗಳನ್ನು ಜಾನ್ಸನ್‌ ವಿಸ್ತರಿಸುತ್ತಲೇ ಇದ್ದರು. ಶಾಲೆಗಳು, ರೆಸ್ಟೋರೆಂಟ್‌ಗಳು ಮತ್ತು ಬಹುತೇಕ ಅಂಗಡಿಗಳನ್ನು ಮುಚ್ಚಲಾಗಿತ್ತು. ಯುರೋಪ್‌ನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ 32,065 ಜನರು ಕೊರೊನಾ ವೈರಸ್‌ನಿಂದ ಬ್ರಿಟನ್‌ನಲ್ಲಿ ಸಾವನ್ನಪ್ಪಿದ್ದಾರೆ. ಅಮೆರಿಕದ ನಂತರದಲ್ಲಿ ಇಲ್ಲೇ ಹೆಚ್ಚು ಸಾವು ಸಂಭವಿಸಿದೆ. ಸಾವಿನ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಲಾಕ್‌ಡೌನ್‌ ಸಡಿಲ ಮಾಡುವುದು ಹುಚ್ಚಾಟವಾಗುತ್ತದೆ ಎಂದಿದ್ದಾರೆ. ಆದರೆ ಆರ್ಥಿಕತೆ ಚೇತರಿಸಿಕೊಳ್ಳಲು ಮಹತ್ವದ ಕ್ರಮಗಳನ್ನು ಅವರು ಘೋಷಿಸಿದ್ದಾರೆ.

ಕೆಲಸಗಾರರು ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು

ಮಾರ್ಚ್‌ 23 ರಿಂದಲೂ ಕೆಲಸಗಾರರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿತ್ತು. ಆದರೆ ಈಗ ಮನೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲದವರು, ಉದಾಹರಣೆಗೆ ನಿರ್ಮಾಣ ಅಥವಾ ಉತ್ಪಾದನೆ ವಿಭಾಗದವರು ಕಚೇರಿಗೆ ಹೋಗಲು ಅವಕಾಶ ನೀಡಲಾಗುತ್ತದೆ. ಕಚೇರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಜನರು ಸಾಧ್ಯವಾದರೆ ಸಾರ್ವಜನಿಕ ಸಾರಿಗೆ ಬಳಸಬಾರದು. ಜನರು ಕಾರು ಬಳಸಬಹುದು. ವಾಕಿಂಗ್ ಅಥವಾ ಸೈಕ್ಲಿಂಗ್ ಕೂಡ ಉತ್ತಮ ಎಂದು ಹೇಳಲಾಗಿದೆ. ಉದ್ಯೋಗಿಗಳು, ಉದ್ಯಮ ಮಾಲೀಕರು ಮತ್ತು ವ್ಯಾಪಾರಿ ಸಂಘಟನೆಗಳು ಈ ಬದಲಾವಣೆಯ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಬಹುತೇಕ ಜನರು ಕಾರುಗಳನ್ನು ಹೊಂದಿಲ್ಲ. ಬಸ್ ವ್ಯವಸ್ಥೆಯು ಸಾಮಾನ್ಯಕ್ಕಿಂತ ಅತಿ ಕಡಿಮೆ ಸಂಖ್ಯೆಯಲ್ಲಿ ಸಂಚರಿಸುತ್ತಿವೆ.

ಕಡಿಮೆ ಸಂಬಳದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ ಇಲ್ಲದ್ದರಿಂದ ಅವರ ಉದ್ಯೋಗ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಸೆಕ್ಯುರಿಟಿ ಗಾರ್ಡ್‌ಗಳು, ನಿರ್ಮಾಣ ಕೆಲಸಗಾರರು, ಸಾರಿಗೆ ಕೆಲಸಗಾರರು ಮತ್ತು ಶಾಪ್ ಅಸಿಸ್ಟೆಂಟ್‌ಗಳಾಗಿ ಕೆಲಸ ಮಾಡುವವರು ಈ ಸಾಂಕ್ರಾಮಿಕ ರೋಗದಲ್ಲಿ ಅತಿ ಹೆಚ್ಚು ಮರಣ ಪ್ರಮಾಣವನ್ನು ದಾಖಲಿಸಿರುವುದು ತಿಳಿದುಬಂದಿದೆ. ಮಹಿಳೆಯರಿಗಿಂತ ದುಪ್ಪಟ್ಟು ಸಂಖ್ಯೆಯ ಪುರುಷರು ಕೊರೊನಾವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಲಂಡನ್‌ನ ವಾಟರ್‌ಲೂ ಸ್ಟೇಷನ್‌ ಸಾಮಾನ್ಯವಾಗಿ ಅತಿ ಹೆಚ್ಚು ಗಿಜಿಗುಡುವ ಟ್ರೇನ್ ಹಬ್‌ ಆಗಿದ್ದು, ಸೋಮವಾರ ಬೆಳಗ್ಗೆ ಬಹುತೇಕ ಶಾಂತವಾಗಿತ್ತು. ಕೆಲಸಕ್ಕೆ ವಾಪಸಾಗುವ ಜನರು ಟ್ರೇನ್ ಸೇವೆಗಳನ್ನು ಪುನಃ ಆರಂಭಿಸುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ನ ನಂತರ ಮೊದಲ ಬಾರಿಗೆ ನಿರ್ಮಾಣ ಕೆಲಸಕ್ಕೆ ಹೊರಟಿದ್ದ 45 ವರ್ಷದ ಪೀಟರ್ ಒಸು ಮನಸು ಭಾರವಾಗಿದೆ ಎಂದಿದ್ದಾರೆ. ಸಬ್‌ವೇಯಲ್ಲಿ ಜನರು ಹತ್ತಿರ ಹತ್ತಿರವೇ ಕುಳಿತಿರುತ್ತಾರೆ. 2 ಮೀಟರ್ ಅಂತರ ಇಲ್ಲ. ಇದು ಮೊದಲನೆಯ ದಿನ. ಈ ವಾರದ ಕೊನೆಯ ವೇಳೆಗೆ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಸ್ಕಾಟ್ಲೆಂಡ್​​‌, ವೇಲ್ಸ್ ಮತ್ತು ನಾರ್ದರ್ನ್‌ ಐರ್ಲೆಂಡ್‌ ಸರ್ಕಾರಗಳು ಜಾನ್ಸನ್‌ ಭಾಷಣಕ್ಕೂ ಮೊದಲೇ ಲಾಕ್‌ಡೌನ್‌ ಸಡಿಲಗೊಳಿಸಿವೆ ಮತ್ತು ಇಂಗ್ಲೆಂಡ್‌ಗೆ ಪ್ರಧಾನಿ ಘೋಷಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಿರ್ಬಂಧ ಸಡಿಲ ಮಾಡಿವೆ. ಹೀಗಾಗಿ, ಮುಂದಿನ ಕೆಲವು ತಿಂಗಳಲ್ಲಿ ಒಂದೊಂದು ಪ್ರದೇಶದಲ್ಲೂ ಒಂದೊಂದು ರೀತಿಯ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ. ಈವರೆಗೆ, ವೈರಸ್‌ ನಿಯಂತ್ರಣದಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಜಾನ್ಸನ್‌ ಈಗ ಮನೆಯಲ್ಲೇ ಇರಿ ಎಂಬ ಘೋಷಣೆಯನ್ನು ಎಚ್ಚರಿಕೆಯಿಂದಿರಿ ಎಂಬ ಸಂದೇಶಕ್ಕೆ ಬದಲಿಸಿದ್ದಾರೆ. ಇದಕ್ಕೆ ಸ್ಕಾಟ್ಲೆಂಡ್, ವೇಲ್ಸ್ ಮತ್ತು ನಾರ್ದರ್ನ್‌ ಐರ್ಲೆಂಡ್‌ನ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿವೆ. ಇದು ಮಿಶ್ರ ಸಂದೇಶವನ್ನು ರವಾನಿಸುವ ಆತಂಕವನ್ನೂ ಹುಟ್ಟುಹಾಕಿದೆ. ಹೀಗಾಗಿ ಈ ಸರ್ಕಾರಗಳು ಮನೆಯಲ್ಲೇ ಇರಿ ಎಂಬ ಸಂದೇಶವನ್ನೇ ಉಳಿಸಿಕೊಳ್ಳುವುದಾಗಿ ಹೇಳಿವೆ.

ಸ್ಕಾಟ್ಲೆಂಡ್, ವೇಲ್ಸ್ ಮತ್ತು ನಾರ್ದರ್ನ್‌ ಐರ್ಲೆಂಡ್‌ನ ಅರೆ ಸ್ವಾಯತ್ತ ಪ್ರಾಧಿಕಾರಗಳು ಇಂಗ್ಲೆಂಡ್‌ಗಾಗಿ ಜಾನ್ಸನ್‌ ಹೊರಡಿಸಿದ ಕ್ರಮಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವುದಿಲ್ಲ ಎಂದು ಹೇಳಿವೆ. ಸ್ಕಾಟ್ಲೆಂಡ್‌ನ ಸ್ವಾತಂತ್ರ್ಯ ಪರ ಫರ್ಸ್ಟ್ ಮಿನಿಸ್ಟರ್ ನಿಕೊಲಾ ಸ್ಟ್ರುಜನ್‌ ಈ ಹಿಂದೆಯೂ ಹಲವು ಬಾರಿ ಜಾನ್ಸನ್‌ ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈಗ ಲಾಕ್‌ಡೌನ್‌ ಸಡಿಲಗೊಳಿಸುವುದು ತುಂಬಾ ಅಪಾಯಕಾರಿ ಎಂದಿದ್ದಾರೆ. ಸಾರ್ವಜನಿಕ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ನೀಡುತ್ತೇವೆ. ಆದರೆ ಇನ್ನೂ ಕೆಲವು ದಿನಗಳವರೆಗೆ ನಾವು ಲಾಕ್‌ಡೌನ್‌ಗೆ ಬದ್ಧವಾಗಿರುತ್ತೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.