ಲಂಡನ್(ಇಂಗ್ಲೆಂಡ್): ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ ಬಹುಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಲಂಡನ್ ಕೋರ್ಟ್ ಅಕ್ಟೋಬರ್ 17ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.
ಬಹುಕೋಟಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ನೀರವ್ ಮೋದಿಯನ್ನು ಬಂಧಿಸಲಾಗಿತ್ತು. ಭಾರತದಿಂದ ಪರಾರಿಯಾಗಿದ್ದ ನೀರವ್ ಮೋದಿ, ಲಂಡನ್ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆಯಲು ಮುಂದಾದಾಗ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದರು.
-
PNB case: Fugitive diamantaire Nirav Modi remanded to custody until 17th October by a UK court. (file pic) pic.twitter.com/km4plqluIN
— ANI (@ANI) September 19, 2019 " class="align-text-top noRightClick twitterSection" data="
">PNB case: Fugitive diamantaire Nirav Modi remanded to custody until 17th October by a UK court. (file pic) pic.twitter.com/km4plqluIN
— ANI (@ANI) September 19, 2019PNB case: Fugitive diamantaire Nirav Modi remanded to custody until 17th October by a UK court. (file pic) pic.twitter.com/km4plqluIN
— ANI (@ANI) September 19, 2019
ಬಂಧನ ಬಳಿಕ ನೀರವ್ ಮೋದಿಯನ್ನು ನೈರುತ್ಯ ಲಂಡನ್‌ನ ವಂಡ್ಸ್‌ವರ್ತ್ ಜೈಲಿನಲ್ಲಿ ಇರಿಸಲಾಗಿದೆ. ಬಂಧನವಾದ ತಕ್ಷಣವೇ ನೀರವ್ ಜಾಮೀನು ಕೋರಿ ಯುಕೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿತ್ತು.