ETV Bharat / international

ಉಕ್ರೇನ್​​ನಿಂದ ಪಾಕ್​ ವಿದ್ಯಾರ್ಥಿನಿ ರಕ್ಷಣೆ.. ಮೋದಿ, ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಹೇಳಿದ ಅಸ್ಮಾ! - ಪಾಕಿಸ್ತಾನದ ವಿದ್ಯಾರ್ಥಿನಿ ಅಸ್ಮಾ

ಯುದ್ಧಪೀಡಿತ ಉಕ್ರೇನ್​​ನಲ್ಲಿ ಸಿಲುಕೊಂಡಿದ್ದ ಪಾಕ್​ ವಿದ್ಯಾರ್ಥಿ ರಕ್ಷಣೆ ಮಾಡಿ, ಸುರಕ್ಷಿತ ಜಾಗಕ್ಕೆ ಕರೆತರುವಲ್ಲಿ ಭಾರತೀಯ ರಾಯಭಾರ ಕಚೇರಿ ಯಶಸ್ವಿಯಾಗಿದ್ದು, ಪ್ರಧಾನಿ ಮೋದಿಗೆ ಪಾಕ್​​ನ ವಿದ್ಯಾರ್ಥಿನಿ ಅಸ್ಮಾ ಧನ್ಯವಾದ ತಿಳಿಸಿದ್ದಾರೆ.

Pakistan's Asma Shafique thanks PM
Pakistan's Asma Shafique thanks PM
author img

By

Published : Mar 9, 2022, 9:32 AM IST

ಇಸ್ಲಾಮಾಬಾದ್​​(ಪಾಕಿಸ್ತಾನ): ರಷ್ಯಾ-ಉಕ್ರೇನ್​ ಸಂಘರ್ಷದಿಂದಾಗಿ ಭಾರತ ಸೇರಿದಂತೆ ಅನೇಕ ದೇಶದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕೊಂಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಬಹುತೇಕ ವಿದ್ಯಾರ್ಥಿಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಇದರಲ್ಲಿ ಪಾಕಿಸ್ತಾನದ ವಿದ್ಯಾರ್ಥಿನಿ ಅಸ್ಮಾ ಶಫೀಕ್ ಸಹ ಸೇರಿಕೊಂಡಿದ್ದಾರೆ.

ಮೋದಿ, ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಹೇಳಿದ ಅಸ್ಮಾ

ಉಕ್ರೇನ್​​ ರಾಜಧಾನಿ ಕೀವ್​ನಲ್ಲಿ ವ್ಯಾಸಂಗ ಮಾಡ್ತಿದ್ದ ಪಾಕ್​ನ ಅಸ್ಮಾ ಶಫೀಕ್​ ಅವರನ್ನ ಭಾರತೀಯ ರಾಯಭಾರ ಕಚೇರಿ ಸುರಕ್ಷಿತವಾಗಿ ಸ್ಥಳಾಂತರ ಮಾಡಿದೆ. ಇದೀಗ ಪ್ರಧಾನಿ ಮೋದಿ ಹಾಗೂ ರಾಯಭಾರ ಕಚೇರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ನನ್ನನ್ನು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದು, ಆದಷ್ಟು ಬೇಗ ಕುಟುಂಬ ಸೇರಿಕೊಳ್ಳಲಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿರಿ: 'ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ..' ಶಸ್ತ್ರಾಸ್ತ್ರ ಹಿಡಿದ ಉಕ್ರೇನ್ ಮಹಿಳೆಯರು

ಕೇಂದ್ರ ಸರ್ಕಾರ ಭಾರತೀಯ ವಿದ್ಯಾರ್ಥಿಗಳ ಜೊತೆಗೆ ನೇಪಾಳ ಹಾಗೂ ಪಾಕಿಸ್ತಾನದ ಅನೇಕ ವಿದ್ಯಾರ್ಥಿಗಳನ್ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ತಮ್ಮ ದೇಶಗಳ ರಾಯಭಾರ ಕಚೇರಿ ಸರಿಯಾಗಿ ಸ್ಪಂದನೆ ನೀಡದ ಕಾರಣಕ್ಕಾಗಿ ವಿದ್ಯಾರ್ಥಿಗಳು ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ.

ಇನ್ನು ಉಕ್ರೇನ್​ನಲ್ಲಿ ಸಂಘರ್ಷ ಉಂಟಾಗುತ್ತಿದ್ದಂತೆ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ಭಾರತದ ಬಾವುಟ ಕೈಯಲ್ಲಿ ಹಿಡಿದು ಸುರಕ್ಷಿತ ಸ್ಥಳಗಳಿಗೆ ತೆರಳಿರುವ ಘಟನೆಗಳು ಸಹ ವರದಿಯಾಗಿದ್ದನ್ನು ನಾವೆಲ್ಲ ಕೇಳಿದ್ದೇವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.