ಲಾಸ್ ಏಂಜಲೀಸ್: ಸಿನಿಮಾ ಜಗತ್ತಿನ ಶ್ರೇಷ್ಠ ಪ್ರಶಸ್ತಿಯಾಗಿರುವ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕಪ್ಪು ಜನಾಂಗದ ನಟ, ನಿರ್ದೇಶಕ ಸಿಡ್ನಿ ಪೊಯ್ಟಿಯರ್ ಶುಕ್ರವಾರ ನಿಧನರಾಗಿದ್ದಾರೆ.
ನಾಗರಿಕ ಹಕ್ಕುಗಳ ಹೋರಾಟಕ್ಕೆ ಪ್ರೇರಣೆಯಾಗಿದ್ದ 1963 ರಲ್ಲಿ ಲಲೀಸ್ ಆಫ್ ದಿ ಫೀಲ್ಡ್ ಚಲನದಚಿತ್ರದ ಅಭಿನಯಕ್ಕಾಗಿ ಪೊಯ್ಟಿಯರ್ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಅವರು ಶುಕ್ರವಾರ ತಮ್ಮ 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಬಹಮಿಯನ್ ವಿದೇಶಾಂಗ ಸಚಿವಾಲಯ ಶುಕ್ರವಾರ ಸೂಚಿಸಿದೆ.
ಯುನೈಟೆಡ್ ಸ್ಟೇಟ್ಸ್‌ನ ಹೆಚ್ಚಿನ ಭಾಗಗಳಲ್ಲಿ ಪ್ರತ್ಯೇಕತೆಯ ಕೂಗು ಚಾಲ್ತಿಯಲ್ಲಿದ್ದ ಸಮಯದಲ್ಲಿ ಪೊಯ್ಟಿಯರ್ ಅವರು 1967ರಲ್ಲಿ ಮೂರು ಚಲನಚಿತ್ರಗಳೊಂದಿಗೆ ಒಂದೇ ವರ್ಷದಲ್ಲಿ ವಿಶಿಷ್ಟವಾದ ಚಲನಚಿತ್ರ ಪರಂಪರೆಯನ್ನು ಸೃಷ್ಟಿಸಿದ್ದರು. ಗೆಸ್ ಊಸ್ ಕಮಿಂಗ್ ಟು ಡಿನ್ನರ್, ಇನ್ ದ ಹೀಟ್ ಆಫ್ ದ ನೈಟ್ ಮತ್ತು ಟು ಸರ್ ವಿತ್ ಲವ್ ಎಂಬ ಚಲನ ಚಿತ್ರದ ಮೂಲಕ ಹಾಲಿವುಡ್ನಲ್ಲಿ ಖ್ಯಾತಿ ಪಡೆದಿದ್ದರು.
ಮರುಭೂಮಿಯಲ್ಲಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲು ಜರ್ಮನ್ ಸನ್ಯಾಸಿಗಳಿಗೆ ಸಹಾಯ ಮಾಡುವ ಕೈಗಾರಿಕೋದ್ಯಮಿಯಾಗಿ'ಲಿಲೀಸ್ ಆಫ್ ದಿ ಫೀಲ್ಡ್' ಚಿತ್ರದ ನಟನೆಗಾಗಿ ಪೊಯ್ಟಿಯರ್ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಇದನ್ನೂ ಓದಿ:15-18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆ ಮಾತ್ರ ಸೂಕ್ತ: ಆರೋಗ್ಯ ಕಾರ್ಯಕರ್ತರಿಗೆ ಭಾರತ್ ಬಯೋಟೆಕ್ ಸೂಚನೆ