ETV Bharat / international

ಎಲ್ಲ ಕೋವಿಡ್‌ ರೂಪಾಂತರಿಗಳಿಗಿಂತ ಒಮಿಕ್ರಾನ್‌ 'ಅತಿ ಹೆಚ್ಚು ಅಪಾಯಕಾರಿ': ವಿಶ್ವ ಆರೋಗ್ಯ ಸಂಸ್ಥೆ - Omicron risk remains very high says WHO

ಕೋವಿಡ್‌ನ ಹೊಸ ರೂಪಾಂತರಿ ಒಮಿಕ್ರಾನ್​​ನಿಂದ ಅಪಾಯ ಈ ಹಿಂದಿನ ಎಲ್ಲ ರೂಪಾಂತರಿಗಳಿಗಿಂತ ಅತಿ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಡಬ್ಲ್ಯೂಹೆಚ್‌ಒ ಜಗತ್ತಿನ ಕೋವಿಡ್‌ ಕುರಿತ ವಾರದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

Omicron risk remains 'very high', says WHO
ಇತರೆ ಎಲ್ಲಾ ಕೋವಿಡ್‌ ರೂಪಾಂತರಿಗಳಿಗಿಂತ ಒಮಿಕ್ರಾನ್‌ 'ಅತಿ ಹೆಚ್ಚು ಅಪಾಯ' - ವಿಶ್ವ ಆರೋಗ್ಯ ಸಂಸ್ಥೆ
author img

By

Published : Dec 29, 2021, 3:27 PM IST

ಜಿನೀವಾ (ಸ್ವಿಟ್ಜರ್ಲೆಂಡ್): ಜಗತ್ತಿನಾದ್ಯಂತ ಕೋವಿಡ್‌ ಪ್ರಕರಣಗಳ ಹೆಚ್ಚಾಗುತ್ತಿರುವ ಬೆನ್ನಲ್ಲೇ ಹೊಸ ರೂಪಾಂತರಿ ಒಮಿಕ್ರಾನ್‌ ಅಪಾಯವೂ ಅತಿ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಡಬ್ಲ್ಯೂಹೆಚ್‌ಒನ ಸಾಪ್ತಾಹಿಕ ಎಪಿಡೆಮಿಯೊಲಾಜಿಕಲ್ ಡಿಸೆಂಬರ್ 20 ರಿಂದ 26ರ 1 ವಾರದ ಕೋವಿಡ್‌ ಅಂಕಿ - ಅಂಶಗಳನ್ನು ಬಹಿರಂಗಪಡಿಸಿದ್ದು, ಹಿಂದಿನ ವಾರಕ್ಕೆ ಹೋಲಿಸಿದರೆ ಜಾಗತಿಕ ಕೋವಿಡ್‌ ಪ್ರಕರಣಗಳು ಶೇ.11 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

ಒಮಿಕ್ರಾನ್ 2-3 ದಿನಗಳಲ್ಲಿ ದ್ವಿಗುಣಗೊಳ್ಳುವ ಮೂಲಕ ಡೆಲ್ಟಾಗಿಂತ ವೇಗವನ್ನು ಹೊಂದಿರುವ ಬಗ್ಗೆ ಸ್ಥಿರವಾದ ಪುರಾವೆಗಳು ಹೇಳುತ್ತಿವೆ. ಇದರ ಬೆನ್ನಲ್ಲೇ ಹಲವಾರು ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ರೂಪಾಂತರಿ ಪ್ರಬಲವಾದ ಮಾರ್ಪಟ್ಟಿದೆ. ಇದಕ್ಕೆ ಯುಕೆ, ಯುಎಸ್‌ ಉದಾಹರಣೆ ಎಂದು ತಿಳಿಸಿದೆ.

ಸದ್ಯ ಹೊಸ ವೈರಸ್‌ ಒಮಿಕ್ರಾನ್‌ ಮೊದಲ ಬಾರಿಗೆ ಪತ್ತೆಯಾಗಿದ್ದ ದಕ್ಷಿಣ ಆಫ್ರಿಕಾದಲ್ಲಿ ಈಗ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಯುಕೆ, ದಕ್ಷಿಣ ಆಫ್ರಿಕಾ ಮತ್ತು ಡೆನ್ಮಾರ್ಕ್‌ನ ಆರಂಭಿಕ ಮಾಹಿತಿಯು ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ ಒಮಿಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುವ ಹಾಗೂ ಅಪಾಯ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ ಎಂದು ವಾರದ ಅಪ್‌ಡೇಟ್‌ನಲ್ಲಿ ಹೇಳಿದೆ.

ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ದಕ್ಷಿಣ ಆಫ್ರಿಕಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇತರ ದೇಶಗಳ ಆರೋಗ್ಯ ತಜ್ಞರು, ಒಮಿಕ್ರಾನ್ ರೂಪಾಂತರವು ಹೆಚ್ಚು ಹರಡುತ್ತದೆ. ಆದರೆ ಸೌಮ್ಯವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯುರೋಪ್‌, ಯುಕೆ, ಯುಎಸ್‌ನಲ್ಲಿ ಒಮಿಕ್ರಾನ್‌ ಮತ್ತಷ್ಟು ಅಬ್ಬರ ; ಯಾವ ದೇಶದಲ್ಲಿ ಎಷ್ಟೆಷ್ಟು ಪ್ರಕರಣಗಳು?

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.