ಸ್ಟಾಕ್ಹೋಮ್ : ಸಾಹಿತ್ಯ ಕ್ಷೇತ್ರದ 2020 ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ಅಮೆರಿಕದ ಕವಯತ್ರಿ ಲೂಯಿಸ್ ಗ್ಲಿಕ್ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ನೊಬೆಲ್ ಒಲಿದು ಬಂದಿದೆ.
ಸಾಹಿತ್ಯ ಕ್ಷೇತ್ರದ ನೊಬೆಲ್ ವಿಜೇತರನ್ನು ಆಯ್ಕೆ ಮಾಡುವ ಸ್ವೀಡಿಶ್ ಅಕಾಡೆಮಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಹಿನ್ನೆಲೆ 2018 ರ ಪ್ರಶಸ್ತಿಯನ್ನು ಮುಂದೂಡಲಾಗಿತ್ತು ಮತ್ತು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದರು.
ಸ್ವೀಡಿಶ್ ಅಕಾಡೆಮಿ ಮತ್ತೊಮ್ಮೆ ನೊಬೆಲ್ ಫೌಂಡೇಶನ್‌ನ ವಿಶ್ವಾಸವನ್ನು ಮರಳಿ ಪಡೆದ ಬಳಿಕ, ಕಳೆದ ವರ್ಷ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. 2018 ರ ಪ್ರಶಸ್ತಿ ಪೋಲೆಂಡ್‌ನ ಓಲ್ಗಾ ಟೋಕಾರ್ಕ್‌ಜುಕ್‌ಗೆ ಮತ್ತು 2019 ರ ಪ್ರಶಸ್ತಿ ಆಸ್ಟ್ರಿಯಾದ ಪೀಟರ್ ಹ್ಯಾಂಡ್ಕೆಗೆ ನೀಡಲಾಗಿದೆ.