ಲಂಡನ್: ಲಂಡನ್ನಲ್ಲಿ ಸೆರೆಯಾಗಿರುವ ಬಹುಕೋಟಿ ರೂಪಾಯಿ ವಂಚಕ, ವಜ್ರದ ವ್ಯಾಪಾರಿ ನೀರವ್ ಮೋದಿ ಸರೆಯಾಗಲು ಇನ್ನೂ ಐದು ದಿನಗಳ ಸಮಯ ಇತ್ತು. ಆದರೂ, ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಅರೆಸ್ಟ್ ಆಗಿದ್ದು ಹೇಗೆ ಎಂಬುದು ಬಯಲಾಗಿದೆ.
ಮೂಲಗಳ ಪ್ರಕಾರ ಮಾರ್ಚ್ 25ರಂದು ನೀರವ್ ಮೋದಿ ಅವರನ್ನು ಬಂಧಿಸಬೇಕೆಂದು ವಾರೆಂಟ್ನಲ್ಲಿ ನಮೂದಿಸಿಲಾಗಿತ್ತು. ಆದರೆ, ಅದಕ್ಕೂ ಮುನ್ನ ಅವರು ಪೊಲಿಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಲಂಡನ್ನಲ್ಲಿ ಬ್ಯಾಂಕ್ ಖಾತೆ ಹೊಂದಬೇಕೆಂಬ ಅವರ ಆತುರ ಎನ್ನಲಾಗುತ್ತಿದೆ.
ಲಂಡನ್ನ ಮೆಟ್ರೋ ಬ್ಯಾಂಕ್ನಲ್ಲಿ ನೀರವ್ ಮೋದಿ ಖಾತೆ ತೆರೆಯಲು ಹೋಗಿದ್ದರು. ಅವರು ಭಾರತದಲ್ಲಿ ವಿತ್ತೀಯ ಅಪರಾಧಿ ಎಂಬುದನ್ನು ಬಲ್ಲ ಬ್ಯಾಂಕ್ ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ನೀರವ್ ಅವರನ್ನು ವಶಕ್ಕೆ ಪಡೆದರು.
ಅಂದಹಾಗೆ ವಿಜಯ್ ಮಲ್ಯ ಗಡಿಪಾರು ಕುರಿತು ವಿಚಾರಣೆ ನಡೆಸುತ್ತಿರುವ ಜಡ್ಜ್ ಎಮ್ಮಾ ಅರ್ಬುತ್ನಾಟ್ ಅವರೇ ನೀರವ್ ಮೋದಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.