ETV Bharat / international

Swedish airplane crash : ಪೈಲಟ್​ ಸೇರಿ 9 ಮಂದಿ ದುರ್ಮರಣ - ಸ್ವೀಡಿಷ್

ವಿಮಾನ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಸ್ಟೀಫನ್ ಲೋಫ್ವೆನ್​​​, ಈ ಸಮಯದಲ್ಲಿ ಮೃತರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ, ಅವರ ಜತೆ ನಾವಿರುತ್ತೇವೆ..

author img

By

Published : Jul 9, 2021, 6:33 AM IST

ಸ್ಟಾಕ್‌ಹೋಮ್: ಸ್ವೀಡನ್‌ನ ಒರೆಬ್ರೊ ಪ್ರದೇಶದ ಹೊರವಲಯದಲ್ಲಿ ವಿಮಾನ ಅಪಘಾತವಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆಂದು ಸ್ವೀಡಿಷ್ ಪೊಲೀಸರು ತಿಳಿಸಿದ್ದಾರೆ. ‘ಇದು ತುಂಬಾ ಆಘಾತಕಾರಿ ವಿಚಾರ’ ಎಂದು ಸ್ವೀಡಿಷ್​ ಪೊಲೀಸರು ತಮ್ಮ ವೆಬ್​ಸೈಟ್​ನಲ್ಲಿ ತಿಳಿಸಿದ್ದಾರೆ.

ಡಿಎಚ್‌ಸಿ -2 ಟರ್ಬೊ ಬೀವರ್ ಎಂಬ ವಿಮಾನದಲ್ಲಿ ಎಂಟು ಸ್ಕೈ ಡೈವರ್‌ಗಳು ಮತ್ತು ಒಬ್ಬ ಪೈಲಟ್‌ ಪ್ರಯಾಣಿಸುತ್ತಿದ್ದರು. ಟೇಕ್‌ಆಫ್ ಆದ ಸ್ವಲ್ಪ ಸಮಯದ ನಂತರ ಒರೆಬ್ರೊ ವಿಮಾನ ನಿಲ್ದಾಣದ ಬಳಿ ಫ್ಲೈಟ್​​ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು ಹೊತ್ತಿ ಉರಿದಿದೆ. ಈ ಸಮಯದಲ್ಲಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಸ್ಟೀಫನ್ ಲೋಫ್ವೆನ್​​​, ಈ ಸಮಯದಲ್ಲಿ ಮೃತರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ, ಅವರ ಜತೆ ನಾವಿರುತ್ತೇವೆ ಎಂದಿದ್ದಾರೆ.

2019 ರಲ್ಲಿ ಉತ್ತರ ಸ್ವೀಡನ್‌ನಲ್ಲಿ ಒಂಬತ್ತು ಜನರು ಸ್ಕೈಡೈವರ್‌ಗಳನ್ನು ಹೊತ್ತ ವಿಮಾನ ಟೇಕ್‌ಆಫ್ ಆದ ಕೆಲವೇ ದಿನಗಳಲ್ಲಿ ಅಪಘಾತಕ್ಕೀಡಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.