ETV Bharat / international

ಕ್ರೈಸ್ಟ್​ಚರ್ಚ್ ಮಾರಣಹೋಮ ಪ್ರಕರಣ; ತಪ್ಪೊಪ್ಪಿಕೊಂಡ ಕೊಲೆಗಾರ - ಬ್ರೆಂಟನ್ ಹ್ಯಾರಿಸನ್ ಟೆರಂಟ್

ಕಳೆದ ವರ್ಷ ನ್ಯೂಜೆಲೆಂಡ್​ನ ಕ್ರೈಸ್ಟ್​ಚರ್ಚ್​ ಮಸೀದಿಗಳ ಮೇಲೆ ಗುಂಡಿನ ದಾಳಿ ನಡೆಸಿ 51 ಜನರನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿದ ಪ್ರಕರಣ ಜಗತ್ತನ್ನೇ ತಲ್ಲಣಗೊಳಿಸಿತ್ತು. ಅಲ್ಲದೆ ಈ ಭೀಭತ್ಸ ಘಟನೆಯನ್ನು ಫೇಸ್ಬುಕ್​ನಲ್ಲಿ ಲೈವ್​ ಆಗಿ ಕೋಟ್ಯಂತರ ಜನ ವೀಕ್ಷಿಸಿದ್ದರು.

gunman-pleads-guilty
ತಪ್ಪೊಪ್ಪಿಕೊಂಡ ಕೊಲೆಗಾರ
author img

By

Published : Mar 26, 2020, 11:54 AM IST

ವೆಲ್ಲಿಂಗ್ಟನ್: ನ್ಯೂಜಿಲೆಂಡ್​ನ ಕ್ರೈಸ್ಟ್​ಚರ್ಚ್​ನ ಎರಡು ಮಸೀದಿಗಳಿಗೆ ನುಗ್ಗಿ, ಪ್ರಾರ್ಥನಾ ನಿರತ 51 ಜನರನ್ನು ಗುಂಡಿಕ್ಕಿ ಸಾಯಿಸಿದ್ದ ವ್ಯಕ್ತಿ ನ್ಯಾಯಾಲಯದ ಮುಂದೆ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಇಷ್ಟು ದಿನ ತಾನು ಯಾವುದೇ ತಪ್ಪು ಮಾಡಿಯೇ ಇಲ್ಲವೆಂದು ವಾದಿಸುತ್ತಿದ್ದ ಆರೋಪಿ ಈಗ ದಿಢೀರನೆ ತಪ್ಪೊಪ್ಪಿಕೊಂಡಿದ್ದು ಆಶ್ಚರ್ಯ ಮೂಡಿಸಿದೆ.

ವರ್ಷದ ಹಿಂದೆ, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಹಠಾತ್ತಾಗಿ ಗುಂಡಿನ ಸುರಿಮಳೈಗೈದು 51 ಜನರ ಸಾವಿಗೆ ಈ ವ್ಯಕ್ತಿ ಕಾರಣನಾಗಿದ್ದ. ಈ ಘಟನೆ ನ್ಯೂಜಿಲೆಂಡ್ ಮಾತ್ರವಲ್ಲದೆ ಇಡೀ ವಿಶ್ವವೇ ತಲ್ಲಣಗೊಳ್ಳುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣದ ನಂತರ ನ್ಯೂಜಿಲೆಂಡ್​ ದೇಶದಲ್ಲಿ ಸೆಮಿ ಅಟೊಮ್ಯಾಟಿಕ್​ ಗನ್ ನಿರ್ಬಂಧಿಸಲು ಹೊಸ ಕಾನೂನುಗಳನ್ನೇ ಜಾರಿಗೆ ತರಲಾಗಿತ್ತು. ಅಲ್ಲದೆ ಕೊಲೆ ಮಾಡುವ ದೃಶ್ಯವನ್ನು ಈತ ಫೇಸ್ಬುಕ್​ ಮೂಲಕ ಲೈವ್ ಆಗಿ ಸ್ಟ್ರೀಮ್ ಮಾಡಿದ್ದ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಲೈವ್​ ಸ್ಟ್ರೀಮಿಂಗ್ ಕುರಿತಾಗಿಯೂ ಹಲವಾರು ಪ್ರಶ್ನೆಗಳು ಉದ್ಭವಿಸಿದ್ದವು. ಕೊಲೆ ಮಾಡುವ ಮುನ್ನ ತಾನ್ಯಾಕೆ ಈ ಕೃತ್ಯ ಎಸಗುತ್ತಿರುವೆ ಎಂಬ ಕುರಿತಾಗಿ 74 ಪುಟಗಳ ಬರಹವನ್ನು ಕೂಡ ಈತ ಅಪ್ಲೋಡ್ ಮಾಡಿದ್ದ.

ಕೊಲೆ ಆರೋಪಿ, ಜನಾಂಗೀಯ ಮೂಲಭೂತವಾದಿ ಬ್ರೆಂಟನ್ ಹ್ಯಾರಿಸನ್ ಟೆರಂಟ್ ಈಗ ತಾನಾಗಿಯೇ ತಪ್ಪೊಪ್ಪಿಕೊಂಡಿರುವುದರಿಂದ ಸಂತ್ರಸ್ತರ ಬಂಧು ಬಳಗದವರಲ್ಲಿ ತುಸು ನೆಮ್ಮದಿ ಮೂಡಿಸಿದೆ.

ಆರೋಪಿ ಟೆರಂಟ್​ (29 ವರ್ಷ), 51 ಕೊಲೆ ಹಾಗೂ 40 ಕೊಲೆ ಯತ್ನ ಮತ್ತು ಒಂದು ಭಯೋತ್ಪಾದನಾ ಕೃತ್ಯಗಳಲ್ಲಿ ಈಗ ಅಪರಾಧಿಯಾಗಿದ್ದಾನೆ ಎಂದು ಕ್ರೈಸ್ಟ್​​ಚರ್ಚ್ ಹೈಕೋರ್ಟ್ ತೀರ್ಪು ನೀಡಿದೆ. ಈ ಮುನ್ನ ತಾನು ತಪ್ಪು ಮಾಡಿಲ್ಲ ಎಂದೇ ವಾದಿಸುತ್ತ ಬಂದಿದ್ದ ಈತನ ಪ್ರಕರಣದ ವಿಚಾರಣೆ ಜೂನ್​ನಲ್ಲಿ ಆರಂಭವಾಗಬೇಕಿತ್ತು.

ಅಮೆರಿಕದಲ್ಲಿ ನಡೆದ ಭಯೋತ್ಪಾದನಾ ದಾಳಿಗಳ ನಂತರ ನ್ಯೂಜೆಲೆಂಡ್​ 2001, ಸೆಪ್ಟೆಂಬರ್​ 11 ರಂದು ಭಯೋತ್ಪಾದನಾ ನಿಗ್ರಹ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆಯಡಿ ಅಪರಾಧಿಯಾಗಿ ಘೋಷಿಸಲ್ಪಟ್ಟ ಪ್ರಥಮ ವ್ಯಕ್ತಿ ಟೆರಂಟ್​ ಆಗಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.