ಕೀವ್(ಉಕ್ರೇನ್): ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಭೀಕರತೆ ಪಡೆದುಕೊಳ್ಳುತ್ತಿದೆ. ಜನಸಾಮಾನ್ಯರ ಮೇಲೂ ರಷ್ಯಾ ಪಡೆಗಳು ದಾಳಿ ಮಾಡಲು ಶುರುವಿಟ್ಟುಕೊಂಡಿವೆ. ಚಲಿಸುತ್ತಿದ್ದ ಕಾರಿನ ಮೇಲೆ ರಷ್ಯಾದ ಯುದ್ಧ ಟ್ಯಾಂಕರ್ ಹತ್ತಿ ನಜ್ಜುಗುಜ್ಜು ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ಘಟನೆಯಲ್ಲಿ ಕಾರು ಚಾಲಕ ಅದೃಷ್ಟವಶಾತ್ ಪಾರಾಗಿದ್ದಾನೆ.
-
Za sve one koji ne žele da vide šta Putin radi u Ukrajini.
— Balša Božović (@Balshone) February 25, 2022 " class="align-text-top noRightClick twitterSection" data="
Ruski narod ne stoji iza ovoga. Ovo je Putinov lični rat.
Na obraz medjunarodnoj zajednici koja ovo nemo posmatra.#Ukraine pic.twitter.com/aqfhpMuX9A
">Za sve one koji ne žele da vide šta Putin radi u Ukrajini.
— Balša Božović (@Balshone) February 25, 2022
Ruski narod ne stoji iza ovoga. Ovo je Putinov lični rat.
Na obraz medjunarodnoj zajednici koja ovo nemo posmatra.#Ukraine pic.twitter.com/aqfhpMuX9AZa sve one koji ne žele da vide šta Putin radi u Ukrajini.
— Balša Božović (@Balshone) February 25, 2022
Ruski narod ne stoji iza ovoga. Ovo je Putinov lični rat.
Na obraz medjunarodnoj zajednici koja ovo nemo posmatra.#Ukraine pic.twitter.com/aqfhpMuX9A
ಉಕ್ರೇನ್ ರಾಜಧಾನಿ ಕೀವ್ನ ಸಂಸತ್ ಭವನದ ಕೆಲವೇ ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ. ಈ ಘಟನೆಯನ್ನು ಗೂಗಲ್ ಮ್ಯಾಪ್ ಮತ್ತು ಫೋಟೋಗಳ ಸಹಾಯದಿಂದ ಪರಿಶೀಲಿಸಿದ ಬಳಿಕ ಇದು ಉಕ್ರೇನ್ನಲ್ಲಿಯೇ ನಡೆದ ದಾಳಿ ಎಂದು ಗುರುತಿಸಲಾಗಿದೆ.
ನಿರ್ಜನ ರಸ್ತೆಯಲ್ಲಿ ಕಾರು ಬರುತ್ತಿದ್ದಾಗ ಎದುರಿಗೆ ಬಂದ ಯುದ್ಧ ಟ್ಯಾಂಕರ್ ಏಕಾಏಕಿ ಕಾರಿನ ಮೇಲೆ ಹತ್ತುತ್ತದೆ. ಇದರಿಂದ ಕಾರು ಟ್ಯಾಂಕರ್ ಕೆಳಗೆ ಸಿಕ್ಕು ನುಜ್ಜುಗುಜ್ಜಾಗಿದೆ. ಈ ವೇಳೆ ಕಾರಿನ ಚಾಲಕ ಒಳಗಡೆ ಸಿಲುಕಿಕೊಂಡಿದ್ದಾಗ, ಇದನ್ನು ಕಂಡ ಜನರು ಸಹಾಯಕ್ಕೆ ಬಂದು ರಕ್ಷಿಸಿದ್ದಾರೆ. ಕಾರಿನ ಮೇಲ್ಛಾವಣಿ ಸಂಪೂರ್ಣವಾಗಿ ಕಿತ್ತು ಹೋಗಿದೆ.
ದಾಳಿ ಮಾಡಿದ ಈ ಯುದ್ಧ ವಾಹನ ಟ್ಯಾಂಕ್ ಸ್ಟ್ರೆಲಾ -10 ಆಗಿದ್ದು, ಇದನ್ನು ರಷ್ಯಾ ಮತ್ತು ಉಕ್ರೇನ್ ಸೇನಾ ಪಡೆಗಳೆರಡೂ ಬಳಸುತ್ತವೆ. ಕಾರಿನ ಮೇಲೆ ಟ್ಯಾಂಕ್ ಹತ್ತಿಸಿದ್ದು ರಷ್ಯಾ ಸೇನೆಯೇ ಎಂದು ಉಕ್ರೇನ್ ಆರೋಪಿಸಿದೆ. ಇನ್ನು ರಷ್ಯಾ ಸೇನೆಯು ಉಕ್ರೇನ್ ರಾಜಧಾನಿ ಕೀವ್ ಗಡಿ ಭಾಗ ತಲುಪಿದ್ದು, ಎರಡೂ ದೇಶಗಳ ಯೋಧರ ನಡುವೆ ತೀವ್ರ ಸೆಣಸಾಟ ನಡೆಯುತ್ತಿದೆ.
ಇದನ್ನೂ ಓದಿ: ಉಕ್ರೇನ್‌ನ ಗ್ಯಾಸ್ ಪೈಪ್‌ಲೈನ್ ಸ್ಫೋಟಿಸಿದ ರಷ್ಯಾ; ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾದ ಜರ್ಮನಿ