ಕೀವ್(ಉಕ್ರೇನ್): ರಷ್ಯಾ ಮಿಲಿಟರಿ ದಾಳಿಗೆ ಉಕ್ರೇನ್ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಯೋಧರು ಸೇರಿದಂತೆ ಅನೇಕ ನಾಗರಿಕರು ಈಗಾಗಲೇ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಯೋಧನೊಬ್ಬನ ಭಾವುಕ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
-
A video of a Ukrainian soldier after the shelling appeared on social networks
— fazil Mir (@Fazilmir900) February 24, 2022 " class="align-text-top noRightClick twitterSection" data="
Mom, Dad, I love you."
#UkraineRussiaCrisis #Ukraine pic.twitter.com/Itz413EhHU
">A video of a Ukrainian soldier after the shelling appeared on social networks
— fazil Mir (@Fazilmir900) February 24, 2022
Mom, Dad, I love you."
#UkraineRussiaCrisis #Ukraine pic.twitter.com/Itz413EhHUA video of a Ukrainian soldier after the shelling appeared on social networks
— fazil Mir (@Fazilmir900) February 24, 2022
Mom, Dad, I love you."
#UkraineRussiaCrisis #Ukraine pic.twitter.com/Itz413EhHU
ಉಕ್ರೇನ್ನ ಪ್ರಮುಖ ನಗರಗಳನ್ನ ಗುರಿಯಾಗಿಸಿಕೊಂಡು ರಷ್ಯಾ ಮಿಲಿಟರಿ ಪಡೆಗಳು ದಾಳಿ ನಡೆಸುತ್ತಿದ್ದು, ಪರಿಣಾಮ ನೂರಾರು ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಉಕ್ರೇನ್ ಯೋಧ ಮಮ್ಮಿ, ಡ್ಯಾಡಿ ಐ ಲವ್ ಯೂ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ರಷ್ಯಾ ಮಿಲಿಟರಿ ಪಡೆ ದಾಳಿ ನಡೆಸುವುದಕ್ಕೂ ಸ್ವಲ್ಪ ಸಮಯದ ಮುಂಚೆ ಯೋಧ ಈ ವಿಡಿಯೋ ಮಾಡಿದ್ದಾನೆ ಎನ್ನಲಾಗ್ತಿದ್ದು, ಆತನ ಮೇಲೆ ಸಹ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಯೋಧನ 13 ಸೆಕೆಂಡ್ಗಳ ವಿಡಿಯೋ ಇದೀಗ ವೈರಲ್ ಆಗಿದ್ದು, ಆತನ ಭಾವುಕ ಮಾತುಗಳಿಗೆ ಅನೇಕರು ಮರುಗಿದ್ದಾರೆ.
ಇದನ್ನೂ ಓದಿರಿ: ಉಕ್ರೇನ್ ಶಸ್ತ್ರಾಸ್ತ್ರ ಕೆಳಗಿಳಿಸಿದರೆ ಮಾತುಕತೆಗೆ ಸಿದ್ಧ: ರಷ್ಯಾ ವಿದೇಶಾಂಗ ಸಚಿವ
ರಷ್ಯಾ ಮಿಲಿಟರಿ ಪಡೆ ಉಕ್ರೇನ್ ಮೇಲೆ ದಾಳಿ ಮಾಡಲು ಶುರು ಮಾಡಿದಾಗಿನಿಂದಲೂ ಇಲ್ಲಿಯವರೆಗೆ 137 ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಾಯಗೊಂಡಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಅನೇಕ ಪ್ರಮುಖ ನಗರಗಳ ಮೇಲೆ ರಷ್ಯಾ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಇದರಿಂದ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ.