ಕೀವ್(ಉಕ್ರೇನ್): ರಷ್ಯಾದ ಗೂಢಚಾರನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಶಂಕೆಯ ಆಧಾರದ ಮೇಲೆ ಉಕ್ರೇನ್ ಸಂಧಾನ ನಿಯೋಗದ ಸದಸ್ಯನನ್ನು ಶನಿವಾರ ಸೆಕ್ಯುರಿಟಿ ಸರ್ವೀಸ್ ಆಫ್ ಉಕ್ರೇನ್ (SBU) ಕೊಂದಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದ್ದು, ಅಧಿಕೃತವಾಗಿ ದೃಢೀಕರಣಗೊಂಡಿಲ್ಲ.
ಡೆನಿಸ್ ಕಿರೀವ್ ಎಂಬಾತನನ್ನು ಹತ್ಯೆ ಮಾಡಲಾಗಿದ್ದು, ಆತನ ವಿರುದ್ಧ ದೇಶದ್ರೋಹ ಆರೋಪಗಳಿದ್ದು, ಆರೋಪಗಳಿಗೆ ಸಾಕ್ಷ್ಯಗಳಿವೆ ಎಂದು UNIAN ವರದಿ ಮಾಡಿದೆ. ಕಿರೀವ್ ಅವರ ಬಂಧನದ ವೇಳೆ ಸೆಕ್ಯುರಿಟಿ ಸರ್ವೀಸ್ ಆಫ್ ಉಕ್ರೇನ್ ಗುಂಡು ಹಾರಿಸಿ ಕೊಂದಿದೆ ಎಂದು ಹೇಳಲಾಗುತ್ತಿದೆ.
ಉಕ್ರೇನ್ನ ಮಾಜಿ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಅವರ ಸ್ನೇಹಿತರ ಬಳಗದಲ್ಲಿ ಡೆನಿಸ್ ಕಿರೀವ್ ಗುರುತಿಸಿಕೊಂಡಿದ್ದು, ವಿಕ್ಟರ್ ಯಾನುಕೋವಿಚ್ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಮಿತ್ರನಾಗಿದ್ದಾರೆ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: 10 ದಿನಗಳ ಯುದ್ಧದಲ್ಲಿ ರಷ್ಯಾ ಪಡೆಗಳ 10 ಸಾವಿರ ಮಂದಿ ಸಾವು: ಉಕ್ರೇನ್
ಕಿರೀವ್ ಅವರನ್ನು ಕೀವ್ ನಗರದ ಮಧ್ಯಭಾಗದಲ್ಲಿ ಕೊಲ್ಲಲಾಗಿದೆ. ಅವರಿಗೆ ಅಕ್ಷರಶಃ ಮರಣದಂಡನೆ ವಿಧಿಸಲಾಗಿದೆ. ಪೆಚೆರ್ಸ್ಕ್ ನ್ಯಾಯಾಲಯದ ಪ್ರವೇಶದ್ವಾರದಲ್ಲಿ ಕಿರೀವ್ ತಲೆಗೆ ಗುಂಡು ಹಾರಿಸಲಾಗಿದೆ ಎಂದು ರಾಜಕೀಯ ವಿಶ್ಲೇಷಕರಾದ ಮಾರಿಯೋ ದುಬೋವಿಕೊವಾ ಹೇಳಿದ್ದಾರೆ.
2006ರಿಂದ 2008ರವರೆಗೆ, ಕಿರೀವ್ ಎಸ್‌ಸಿಎಂ ಫೈನಾನ್ಸ್ ಎಂಬಲ್ಲಿ ಕೆಲಸ ಮಾಡಿದ್ದು, ಅಲ್ಲಿ ಡೆಪ್ಯೂಟಿ ಜನರಲ್ ಡೈರೆಕ್ಟರ್ ಹುದ್ದೆಯನ್ನು ಹೊಂದಿದ್ದರು. ನಂತರ ಅವರು ಆಸ್ಟ್ರಿಯನ್ ಕಂಪನಿಯಾದ GROUP SLAV AG Klyuyev ಎಂಬಲ್ಲಿ ಕೆಲಸ ಮಾಡಿದರು. 2006ರಿಂದ 2012ರವರೆಗೆ, ಅವರು ಉಕ್ರೆಕ್ಸಿಂಬ್ಯಾಂಕ್‌ನ ಮೇಲ್ವಿಚಾರಣಾ ಮಂಡಳಿಯ ಸದಸ್ಯರಾಗಿದ್ದರು ಎಂದು ತಿಳಿದುಬಂದಿದೆ.