ETV Bharat / international

ರಷ್ಯಾದಲ್ಲಿ ಹಣಕಾಸು ಸೇವೆ ಸ್ಥಗಿತಗೊಳಿಸಿದ ಅಮೆರಿಕದ ವೀಸಾ, ಮಾಸ್ಟರ್​ಕಾರ್ಡ್ - ರಷ್ಯಾದಲ್ಲಿ ಸೇವೆ ಸ್ಥಗಿತಗೊಳಿಸಿದ ವೀಸಾ

ಉಕ್ರೇನ್​ ಮೇಲಿನ ದಾಳಿಯನ್ನು ವಿರೋಧಿಸಿ ಅಮೆರಿಕ ಮೂಲದ ವೀಸಾ ಮತ್ತು ಮಾಸ್ಟರ್ ಕಾರ್ಡ್​ ರಷ್ಯಾದಲ್ಲಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದು ರಷ್ಯಾದ ಬ್ಯಾಂಕಿಂಗ್ ವ್ಯವಸ್ಥೆ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ.

Mastercard, Visa suspend operations in Russia after invasion
Russia-Ukraine War: ರಷ್ಯಾದಲ್ಲಿ ಸೇವೆ ರದ್ದುಗೊಳಿಸಿದ ಮಾಸ್ಟರ್​ಕಾರ್ಡ್ ಮತ್ತು ವೀಸಾ
author img

By

Published : Mar 6, 2022, 7:20 AM IST

ಕ್ಯಾಲಿಫೋರ್ನಿಯಾ(ಅಮೆರಿಕ): ರಷ್ಯಾದ ಮೇಲೆ ವಿವಿಧ ರಾಷ್ಟ್ರಗಳು ವಿಧಿಸುತ್ತಿರುವ ಆರ್ಥಿಕ, ರಾಜತಾಂತ್ರಿಕ ಹಾಗು ಸಾಂಸ್ಕೃತಿಕ ನಿರ್ಬಂಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗ ಅಮೆರಿಕದ ಪಾವತಿ ಮತ್ತು ಕ್ರೆಡಿಟ್ ಕಾರ್ಡ್ ಸೇವಾ ಕಂಪನಿಗಳಾದ ಮಾಸ್ಟರ್​​ಕಾರ್ಡ್​ ಮತ್ತು ವೀಸಾ ಕಂಪನಿಗಳು ರಷ್ಯಾದಲ್ಲಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.

ರಷ್ಯಾದ ಬ್ಯಾಂಕ್​ಗಳಿಂದ ವಿತರಣೆ ಮಾಡಲ್ಪಟ್ಟ ಎಲ್ಲಾ ಮಾಸ್ಟರ್ ಕಾರ್ಡ್ ಮತ್ತು ವೀಸಾ ಕಾರ್ಡ್​ಗಳು ದೇಶದ ಹೊರಗೆ ಬಳಸಲು ಸಾಧ್ಯವಾಗದಂತೆ ನಿರ್ಬಂಧ ಹೇರಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವೀಸಾ, 'ರಷ್ಯಾದೊಳಗಿನ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಲು ತನ್ನ ಪಾಲುದಾರರೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಹಿವಾಟಿಗೆ ನಿರ್ಬಂಧ ಹೇರಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಷ್ಯಾದ ಹಣಕಾಸು ಸಂಸ್ಥೆಗಳಿಂದ ವಿತರಣೆ ಮಾಡಲ್ಪಟ್ಟ ವೀಸಾ ಕಾರ್ಡ್​ಗಳು ದೇಶದ ಹೊರಗೆ ಸೇವೆಯನ್ನು ಒದಗಿಸುವುದಿಲ್ಲ. ಇದರ ಜೊತೆಗೆ ರಷ್ಯಾದ ಹೊರಗೆ ವಿತರಣೆ ಮಾಡಲಾದ ವೀಸಾ ಕಾರ್ಡ್​ಗಳು ರಷ್ಯಾದೊಳಗೆ ಕಾರ್ಯ ನಿರ್ವಹಣೆ ಮಾಡುವುದಿಲ್ಲ' ಎಂದಿದೆ.

ಉಕ್ರೇನ್ ಮತ್ತು ರಷ್ಯಾದ ಯುದ್ಧ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯಾಗಿದ್ದು, ಮೌಲ್ಯಗಳಿಗೆ ಅನುಗುಣವಾಗಿ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವೀಸಾ ಇಂಕ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲ್ ಕೆಲ್ಲಿ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಮಾಸ್ಟರ್‌ಕಾರ್ಡ್ ಕೂಡಾ ರಷ್ಯಾದಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇತ್ತೀಚೆಗೆ ಜಾಗತಿಕವಾಗಿ ರಷ್ಯಾದ ವಿರುದ್ಧ ವ್ಯಕ್ತವಾಗುತ್ತಿರುವ ಅಸಮಾಧಾನದ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಸಂಸ್ಥೆ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ. ರಷ್ಯಾದ ಹೊರಗೆ ನೀಡಲಾದ ಕಾರ್ಡ್​ಗಳು ಇನ್ನು ಮುಂದೆ ರಷ್ಯಾದೊಳಗೆ ಕಾರ್ಯನಿರ್ವಹಣೆ ಮಾಡುವುದಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: ರಷ್ಯಾ ಪರ ಗೂಢಚಾರಿಕೆ ಶಂಕೆ: ಉಕ್ರೇನ್​ ಸಂಧಾನ ನಿಯೋಗದ ಸದಸ್ಯನ ಹತ್ಯೆ

ಮಾಸ್ಟರ್ ಕಾರ್ಡ್ ಮತ್ತು ವೀಸಾ ಕಾರ್ಡ್ ನಿರ್ಬಂಧಕ್ಕೆ ಪ್ರತಿಕ್ರಿಯೆ ನೀಡಿದ ರಷ್ಯಾದ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಸ್ಬರ್‌ಬ್ಯಾಂಕ್ (Sberbank), 'ಆ ಕಂಪನಿಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರ ದೇಶದೊಳಗೆ ರಷ್ಯಾದ ಸ್ಬರ್‌ಬ್ಯಾಂಕ್ ನೀಡಿದ ಕಾರ್ಡ್‌ಗಳ ಬಳಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದೆ.

ಎರಡು ಕಂಪನಿಗಳು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ರಷ್ಯಾದ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಕಂಪನಿಯು ದೇಶದಲ್ಲಿ ವೀಸಾ ಮತ್ತು ಮಾಸ್ಟರ್‌ಕಾರ್ಡ್ ಸೇವೆಗಳನ್ನು ಸ್ಥಗಿತಗೊಳಿಸುವುದರಿಂದ ದೇಶದೊಳಗೆ ರಷ್ಯಾದ ಸ್ಬರ್‌ಬ್ಯಾಂಕ್ ನೀಡಿದ ಕಾರ್ಡ್‌ಗಳ ಬಳಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.