ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಶಿಕ್ಷಣ ಕಾರ್ಯಕರ್ತೆ ಮತ್ತು ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ಜೈ ಅವರು ಯುಕೆ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಮಾರ್ಕೆಲ್ ಅವರೊಂದಿಗೆ ವರ್ಚುವಲ್ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಅವರು ಮಹಿಳೆಯರ ಪರ ಧ್ವನಿ ಮತ್ತು ಅವರ ಹಕ್ಕುಗಳ ಕುರಿತು ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ವರ್ಚುವಲ್ ಚರ್ಚೆಯಲ್ಲಿ ಭಾಗಿಯಾದ ಮಲಾಲಾಗೆ ಧನ್ಯವಾದ ತಿಳಿಸಿದ ಮಾರ್ಕೆಲ್, "ಯುವತಿಯರಿಗೆ ಶಿಕ್ಷಣ ದೊರೆತರೆ ಅವರು ಗೆಲ್ಲುತ್ತಾರೆ ಮತ್ತು ಯಶಸ್ವಿಯಾಗುತ್ತಾರೆ. ಇದರಿಂದ ಸಾಮಾಜಿಕ ಯಶಸ್ಸಿನ ಬಾಗಿಲು ತೆರೆಯುತ್ತದೆ." ಎಂದು ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಬಾಲಕಿಯರ ದಿನಾಚರಣೆಯ ನೆನಪಿಗಾಗಿ ಈ ಚರ್ಚೆಯನ್ನು ನಡೆಸಲಾಯಿತು.