ETV Bharat / international

ಸ್ಪೈವೇರ್​ ಭೀತಿ: ಹ್ಯಾಕರ್​ಗಳ ಗುರಿಯ ಸಂಭಾವ್ಯ ಪಟ್ಟಿಯಲ್ಲಿ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್ - NSO Group

ಸೋರಿಕೆಯಾದ 50,000 ಫೋನ್ ಸಂಖ್ಯೆಗಳ ಪಟ್ಟಿಯಲ್ಲಿ ಕಂಡು ಬರುವ ಸಂಭಾವ್ಯ ಗುರಿಗಳಲ್ಲಿ ಫ್ರಾನ್ಸ್​​ ಅಧ್ಯಕ್ಷ ಮ್ಯಾಕ್ರನ್​​, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ದಕ್ಷಿಣ ಆಫ್ರಿಕಾದ ಸಿರಿಲ್ ರಾಮಾಫೋಸಾ ಮತ್ತು ಇರಾಕ್‌ನ ಬರ್ಹಮ್ ಸಾಲಿಹ್ ಸೇರಿದ್ದಾರೆ. ಪ್ರಸ್ತುತ ಮೂವರು ಪ್ರಧಾನ ಮಂತ್ರಿಗಳು ಮತ್ತು ಮೊರಾಕೊ ರಾಜ ಮೊಹಮ್ಮದ್ VI ಸಹ ಈ ಪಟ್ಟಿಯಲ್ಲಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

Macron
ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್
author img

By

Published : Jul 21, 2021, 9:24 AM IST

Updated : Jul 21, 2021, 11:42 AM IST

ಬೋಸ್ಟನ್: ಕುಖ್ಯಾತ ಇಸ್ರೇಲಿ ಸ್ಪೈವೇರ್ ಸಂಸ್ಥೆ NSO ಗ್ರೂಪ್‌ನ ಗ್ರಾಹಕರು ಹ್ಯಾಕಿಂಗ್ ಮಾಡಲು ಮುಂದಾಗಬಹುದು ಎಂದು ಅಂದಾಜಿಸಿ, ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ 14 ಹಾಲಿ ಅಥವಾ ಮಾಜಿ ರಾಷ್ಟ್ರಗಳ ಮುಖ್ಯಸ್ಥರ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿ ಮಾಡಿದೆ.

ಸೋರಿಕೆಯಾದ 50,000 ಫೋನ್ ಸಂಖ್ಯೆಗಳ ಪಟ್ಟಿಯಲ್ಲಿ ಕಂಡು ಬರುವ ಸಂಭಾವ್ಯ ಗುರಿಗಳಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ದಕ್ಷಿಣ ಆಫ್ರಿಕಾದ ಸಿರಿಲ್ ರಾಮಾಫೋಸಾ ಮತ್ತು ಇರಾಕ್‌ನ ಬರ್ಹಮ್ ಸಾಲಿಹ್ ಸೇರಿದ್ದಾರೆ. ಪ್ರಸ್ತುತ ಮೂವರು ಪ್ರಧಾನ ಮಂತ್ರಿಗಳು ಮತ್ತು ಮೊರಾಕೊ ರಾಜ ಮೊಹಮ್ಮದ್ VI ಸಹ ಈ ಪಟ್ಟಿಯಲ್ಲಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಇಲ್ಲಿನ ಒಕ್ಕೂಟದ ಸದಸ್ಯರು ಭಾನುವಾರ ನೀಡಿದ ಮೊದಲ ವರದಿಗಳ ನಂತರ, ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿ, ಅನೇಕ ದೇಶಗಳಲ್ಲಿನ ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ರಾಜಕಾರಣಿಗಳನ್ನು ಗುರಿಯಾಗಿಸಲು ಎನ್‌ಎಸ್‌ಒನ ಮಿಲಿಟರಿ ದರ್ಜೆಯ ಪೆಗಾಸಸ್ ಸ್ಪೈವೇರ್ ಅನ್ನು ವ್ಯಾಪಕವಾಗಿ ಬಳಸುತ್ತಿರುವುದರ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದೆ.

ಹ್ಯಾಕರ್​ಗಳ ವಿರುದ್ಧ ರಷ್ಯಾ ಕ್ರಮ:

ಕಂಪ್ಯೂಟರ್ ರುಜುವಾತುಗಳನ್ನು ಕದಿಯಲು, ಸ್ಪ್ಯಾಮ್ ವಿತರಿಸಲು ಮತ್ತು ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ಸ್ಥಾಪಿಸಲು ಬಳಸುವ ಸಾಧನಗಳ ಜಾಲವನ್ನು ನಿರ್ವಹಿಸಿದ್ದಾರೆ ಎಂಬ ಫೆಡರಲ್ ಆರೋಪದ ಮೇಲೆ "ಬೋಟ್ ಮಾಸ್ಟರ್" ಎಂದು ಕರೆಯಲ್ಪಡುವ ರಷ್ಯಾದ ಹ್ಯಾಕರ್‌ಗೆ ಈಗಾಗಲೇ ರಷ್ಯಾ ನ್ಯಾಯಾಲಯವು 33 ತಿಂಗಳ ಶಿಕ್ಷೆ ವಿಧಿಸಿದೆ. ಆದರೆ, ಪ್ರಾಸಿಕ್ಯೂಟರ್​ಗಳು ಇಂತಹ ಹ್ಯಾಕರ್​ಗಳಿಗೆ 12 ರಿಂದ 14 ವರ್ಷಗಳ ವರೆಗೆ ಶಿಕ್ಷೆ ನೀಡಬೇಕೆಂದು ಮನವಿ ಮಾಡಿದ್ದರು.

Last Updated : Jul 21, 2021, 11:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.