ಲಂಡನ್: ಸೌತಾಲ್‌ನ ಹ್ಯಾವ್ಲಾಕ್ ರಸ್ತೆಗೆ ಸರ್ ಹೆನ್ರಿ ಹ್ಯಾವ್ಲಾಕ್ ಅವರ ಹೆಸರನ್ನು ಇಡಲಾಗಿತ್ತು. ಆದರೆ ಈ ರಸ್ತೆಯನ್ನು ಗುರುನಾನಕ್ ರಸ್ತೆ ಎಂದು ಮರುನಾಮಕರಣ ಮಾಡುವ ಸಾಧ್ಯತೆ ಇದೆ.
1857ರ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬ್ರಿಟಿಷ್ ಆರ್ಮಿ ಜನರಲ್ ಸರ್ ಹೆನ್ರಿ ಹ್ಯಾವ್ಲಾಕ್ ಅವರ ಹೆಸರಿನ ಪಶ್ಚಿಮ ಲಂಡನ್‌ನಲ್ಲಿರುವ ಈ ರಸ್ತೆಯನ್ನು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ.
ವೈವಿಧ್ಯತೆಯನ್ನು ಎತ್ತಿಹಿಡಿಯಲು ಮತ್ತು ಬ್ರಿಟನ್‌ನ ವಸಾಹತುಶಾಹಿಯ ಹಾನಿಕಾರಕ ಅಂಶಗಳನ್ನು ಪರಿಹರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಸೌತಾಲ್ ಸಿಖ್ ಸಮುದಾಯದ ಅತಿ ದೊಡ್ಡ ನೆಲೆಯಾಗಿದ್ದು, ಹ್ಯಾವ್ಲಾಕ್ ರಸ್ತೆ ಶ್ರೀ ಗುರು ಸಿಂಗ್ ಸಭೆಯ ನೆಲೆಯಾಗಿದೆ. ಇದನ್ನು ಭಾರತದ ಹೊರಗಿರುವ ವಿಶ್ವದ ಅತಿದೊಡ್ಡ ಗುರುದ್ವಾರವೆಂದು ಪರಿಗಣಿಸಲಾಗಿದೆ.
ಹೀಗಾಗಿ ಹ್ಯಾವ್ಲಾಕ್ ರಸ್ತೆಯನ್ನು ಗುರುನಾನಕ್ ರಸ್ತೆ ಎಂದು ಮರುನಾಮಕರಣ ಮಾಡುವ ಸಾಧ್ಯತೆ ದಟ್ಟವಾಗಿದೆ.