ETV Bharat / international

ಕೊರೊನಾ ಭೀತಿ: 14 ರಾಷ್ಟ್ರಗಳನ್ನು ನಿಷೇಧಿತ​ ಪಟ್ಟಿಗೆ ಸೇರಿಸಿದ ಜಪಾನ್​​​

ಕೊರೊನಾ ವೈರಸ್ ಭೀತಿಯಿಂದ ಜಪಾನ್​ 14 ದೇಶಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಈ ಮೊದಲೇ 70 ಕ್ಕೂ ಹೆಚ್ಚು ದೇಶಗಳ ಪ್ರವೇಶವನ್ನು ನಿಷೇಧಿಸಿದೆ.

ಜಪಾನ್ ಪ್ರಧಾನಿ ಶಿಂಜೊ ಅಬೆ
ಜಪಾನ್ ಪ್ರಧಾನಿ ಶಿಂಜೊ ಅಬೆ
author img

By

Published : Apr 27, 2020, 5:40 PM IST

Updated : Apr 27, 2020, 7:10 PM IST

ಟೋಕಿಯೊ(ಜಪಾನ್​): ಜಪಾನ್​ನಲ್ಲಿ ಕೊರೊನಾ ವೈರಸ್​​ ವ್ಯಾಪಕವಾಗಿ ಹರಡುತ್ತಿರುವುದರಿಂದ ರಷ್ಯಾ, ಪೆರು ಮತ್ತು ಸೌದಿ ಅರೇಬಿಯಾ ಸೇರಿದಂತೆ 14 ದೇಶಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಹೇಳಿದ್ದಾರೆ.

ಜಪಾನ್ ಈಗಾಗಲೇ 70 ಕ್ಕೂ ಹೆಚ್ಚು ದೇಶಗಳ ಪ್ರವೇಶವನ್ನು ನಿಷೇಧಿಸಿದೆ. ಅಲ್ಲದೇ ವಿಶ್ವದ ಇತರೆ ಭಾಗಗಳಿಗೂ ವೀಸಾಗಳನ್ನು ಅಮಾನ್ಯಗೊಳಿಸಿದೆ. 14 ದೇಶಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ ಈ ದೇಶಗಳಿಂದ ಬರುವುದಕ್ಕೆ ಮತ್ತು ಅಲ್ಲಿಗೆ ಹೋಗುವುದಕ್ಕೆ ಯಾವುದೇ ಅವಕಾಶವಿಲ್ಲ ಎಂದು ಅಬೆ ಹೇಳಿದ್ದಾರೆ.

ಪ್ರವೇಶ ನಿಷೇಧ ಹಾಗೂ ವೀಸಾ ನಿರ್ಬಂಧಗಳು ಆರಂಭದಲ್ಲಿ ಏಪ್ರಿಲ್ 30ರ ವರೆಗೆ ಇರಲಿವೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಮೇ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ಜಪಾನ್​​ನಲ್ಲಿ ಮೇ 6 ರವರೆಗೆ ಒಂದು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇಲ್ಲಿಯವರೆಗೆ ದೇಶದಲ್ಲಿ 13,385 ಪಾಸಿಟಿವ್​​ ಪ್ರಕರಣಗಳಿದ್ದು, ಈ ವರ್ಷದ ಆರಂಭದಲ್ಲಿ ಟೋಕಿಯೋ ಬಳಿ ಸಂಪರ್ಕ ಹೊಂದಿದ್ದ ಕ್ರೂಸ್ ಹಡಗಿನ 712 ಪ್ರಕರಣಗಳಲ್ಲಿ 364 ಸಾವು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Last Updated : Apr 27, 2020, 7:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.