ಜಕಾರ್ತ(ಇಂಡೋನೇಷ್ಯಾ): ಹಣ ಗಳಿಸಲು ಹತ್ತಾರು ಹಾದಿಗಳಿವೆ. ಅದರಲ್ಲೂ ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಜಾಲತಾಣ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಂತೆ ಲಕ್ಷಾಂತರ ಜನರು ಇದರಿಂದಲೇ ಹಣ ಗಳಿಕೆ ಮಾಡ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಯೂಟ್ಯೂಬ್, ಇನ್ಸ್ಟಾಗ್ರಾಂ ಮುಖ್ಯವಾಗಿವೆ. ಇದರ ಮಧ್ಯೆ, ಇಂಡೋನೇಷ್ಯಾದ ವಿದ್ಯಾರ್ಥಿಯೋರ್ವ ಕಳೆದ ಐದು ವರ್ಷಗಳಲ್ಲಿ ಆನ್ಲೈನ್ ಮೂಲಕ ಸೆಲ್ಫಿ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿದ್ದಾನೆ.
-
It's been 3 days and left 331 NFT
— Ghozali_Ghozalu (@Ghozali_Ghozalu) January 12, 2022 " class="align-text-top noRightClick twitterSection" data="
sold out now because for the next few years I won't be listing
You can do anything like flipping or whatever but please don't abuse my photos or my parents will very disappointed to me
I believe in you guys so please take care of my photos. pic.twitter.com/oyGGR2Aben
">It's been 3 days and left 331 NFT
— Ghozali_Ghozalu (@Ghozali_Ghozalu) January 12, 2022
sold out now because for the next few years I won't be listing
You can do anything like flipping or whatever but please don't abuse my photos or my parents will very disappointed to me
I believe in you guys so please take care of my photos. pic.twitter.com/oyGGR2AbenIt's been 3 days and left 331 NFT
— Ghozali_Ghozalu (@Ghozali_Ghozalu) January 12, 2022
sold out now because for the next few years I won't be listing
You can do anything like flipping or whatever but please don't abuse my photos or my parents will very disappointed to me
I believe in you guys so please take care of my photos. pic.twitter.com/oyGGR2Aben
ಇಂಡೋನೇಷ್ಯಾದ ಸುಲ್ತಾನ್ ಗುಸ್ತಾಫ್ ಅಲ್(22) ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದು, ಕಳೆದ ಐದು ವರ್ಷಗಳಿಂದ ಸೆಲ್ಫಿ ತೆಗೆದುಕೊಂಡು ಅವುಗಳನ್ನ ಎನ್ಎಫ್ಟಿಗಳಾಗಿ ಪರಿವರ್ತನೆ ಮಾಡಿ ಮಾರಾಟ ಮಾಡಿದ್ದಾನೆ. ಯಾವುದೇ ರೀತಿಯ ಭಾವರಹಿತ(expressionless) ಸೆಲ್ಫಿ ಫೋಟೋ ತೆಗೆದುಕೊಂಡು ಇಲ್ಲಿಯವರೆಗೆ ಸಾವಿರಾರು ಸೆಲ್ಫಿ ಮಾರಾಟ ಮಾಡಿದ್ದಾನೆ. ಆರಂಭದಲ್ಲಿ ಈ ಪೋಟೋಗಳನ್ನ ತಮಾಷೆಗೋಸ್ಕರ ಎನ್ಎಫ್ಟಿಯಲ್ಲಿ ಹಾಕಿಕೊಂಡಿದ್ದರಂತೆ. ಆದರೆ, ಒಂದೇ ದಿನ 35 ಫೋಟೋ ಖರೀದಿಯಾಗಿದ್ದು, ಇದಾದ ಬಳಿಕ ಇವರ ಫೋಟೋಗಳಿಗೆ ಇನ್ನಿಲ್ಲದ ಬೇಡಿಕೆ ಬರಲು ಶುರುವಾಗಿವೆ. ಇದಾದ ನಂತರ ಪ್ರತಿದಿನ ನೂರಾರು ಸೆಲ್ಫಿ ಫೋಟೋ ಮಾರಾಟವಾಗಿವೆ.
ಇದನ್ನೂ ಓದಿರಿ: ರಶ್ಮಿಕಾ ಮಂದಣ್ಣ ಹೊಸ ಅವತಾರ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು!
ಎನ್ಎಫ್ಟಿ ಎಂಬುದು ಫೋಟೋಗಳ ನೈಜ ಮಾಲೀಕತ್ವ ಪ್ರತಿನಿಧಿಸುವ ವಿಶಿಷ್ಟ ಡಿಜಿಟಲ್ ತಂತ್ರಾಂಶವಾಗಿದ್ದು, ಆರಂಭದಲ್ಲಿ ತನ್ನ ಕಾಲೇಜ್ ದಿನಗಳನ್ನ ನೆನಪಿನಲ್ಲಿಟ್ಟುಕೊಳ್ಳಲು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ವಿದ್ಯಾರ್ಥಿ ನಂತರ ಅವುಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾನೆ. ಇದರಿಂದಲೇ ಕಳೆದ ಐದು ವರ್ಷಗಳಲ್ಲಿ ಕೋಟ್ಯಧಿಪತಿಯಾಗಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸುಲ್ತಾನ್, ತಾವು ಅಪ್ಲೋಡ್ ಮಾಡುವ ಸೆಲ್ಫಿ ಫೋಟೋ ಖರೀದಿ ಮಾಡುತ್ತಾರೆಂದು ಎಂದಿಗೂ ಯೋಚನೆ ಮಾಡಿರಲಿಲ್ಲ. ಎನ್ಎಫ್ಟಿಯಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳನ್ನ ದುರುಪಯೋಗ ಮಾಡಿಕೊಳ್ಳದಂತೆ ಮನವಿ ಸಹ ಮಾಡಿದ್ದಾರೆ.
ಸೆಲ್ಫಿ ಫೋಟೋಗಳಿಂದ ಇಲ್ಲಿಯವರೆಗೆ ವಿದ್ಯಾರ್ಥಿ 7.73 ಕೋಟಿ ರೂ. ಸಂಪಾದನೆ ಮಾಡಿದ್ದು, ಪ್ರತಿವೊಂದು ಫೋಟೋ 2.22 ಲಕ್ಷ ರೂ.ಗೆ ಮಾರಾಟವಾಗುತ್ತಿವೆ.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ