ETV Bharat / international

ಆಕ್ರಮಣಕಾರಿ ರಷ್ಯಾಗೆ ನಿರ್ಬಂಧ ಹೇರಲು ಕ್ವಾಡ್‌ ದೇಶಗಳ ಪೈಕಿ ಭಾರತ ಸ್ವಲ್ಪ ಹಿಂದೇಟು ಹಾಕ್ತಿದೆ - ಬೈಡನ್‌ - russia ukraine conflict

ಕ್ವಾಡ್‌ ದೇಶಗಳ ಪೈಕಿ ಭಾರತ ಮಾತ್ರವೇ ರಷ್ಯಾ ಪರವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದು, ಉಕ್ರೇನ್‌ ಮೇಲೆ ದಾಳಿ ಮಾಡುತ್ತಿರುವ ಪುಟಿನ್‌ ಸರ್ಕಾರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಭಾರತ ಸ್ವಲ್ಪ ಮಟ್ಟಿಗೆ ಅಲುಗಾಡುತ್ತಿದೆ ಎಂದಿದ್ದಾರೆ.

India 'somewhat shaky' on punishing Russia for invasion of Ukraine: Biden
ಆಕ್ರಮಣಕಾರಿ ರಷ್ಯಾಗೆ ನಿರ್ಬಂಧ ಹೇರಲು ಕ್ವಾಡ್‌ ದೇಶಗಳ ಪೈಕಿ ಭಾರತ ಸ್ವಲ್ಪ ಅಲುಗಾಡುತ್ತಿದೆ - ಬೈಡನ್‌
author img

By

Published : Mar 22, 2022, 8:51 AM IST

ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ಶಿಕ್ಷಿಸುವ ಪಾಶ್ಚಿಮಾತ್ಯ ನಿರ್ಬಂಧಗಳ ಬಗ್ಗೆ ಭಾರತವು 'ಸ್ವಲ್ಪ ಅಲುಗಾಡಿದೆ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಸೋಮವಾರ ನಡೆದ ಬ್ಯುಸಿನೆಸ್ ರೌಂಡ್‌ಟೇಬಲ್‌ನ ಸಿಇಒ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿರುವ ರಷ್ಯಾ ಅಧ್ಯಕ್ಷ ಪುಟಿನ್‌ ಅವರನ್ನು ಪ್ರತ್ಯೇಕಿಸಲು ಕ್ವಾಡ್‌ನಲ್ಲಿರುವ ಭಾರತ ಸ್ವಲ್ಪ ಮಟ್ಟಿಗೆ ಅಲುಗಾಡುತ್ತಿದೆ. ಆದರೆ, ಪುಟಿನ್ ಅವರ ಆಕ್ರಮಣಶೀಲತೆ ನಿಭಾಯಿಸುವ ವಿಷಯದಲ್ಲಿ ಜಪಾನ್, ಆಸ್ಟ್ರೇಲಿಯಾ ಅತ್ಯಂತ ಪ್ರಬಲವಾಗಿದೆ ಎಂದು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ವರ್ಚುಯಲ್ ಕ್ವಾಡ್ ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಜಪಾನ್ ಮತ್ತು ಯುಎಸ್ ನಾಯಕರು ರಷ್ಯಾದ ಆಕ್ರಮಣವನ್ನು ಖಂಡಿಸಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳುವ ಅಗತ್ಯವನ್ನು ಪುನರುಚ್ಚರಿಸಿದ್ದರು.

ರಷ್ಯಾ ಆಕ್ರಮಣವನ್ನು ಖಂಡಿಸದ ಕ್ವಾಡ್‌ನ ಏಕೈಕ ಸದಸ್ಯ ಭಾರತವಾಗಿದೆ. ಭಾರತವನ್ನು ಹೊರತುಪಡಿಸಿ ಕ್ವಾಡ್‌ನ ಎಲ್ಲ ಸದಸ್ಯ ರಾಷ್ಟ್ರಗಳು ಸಹ ರಷ್ಯಾದ ಮೇಲೆ ಗಮನಾರ್ಹ ನಿರ್ಬಂಧಗಳನ್ನು ವಿಧಿಸಿವೆ. ಭಾರತವು ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆಯ ಪ್ರಮುಖ ಸಭೆ ಹಾಗೂ ಮತದಾನಗಳಿಂದ ದೂರವಿದ್ದು, ಬದಲಿಗೆ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಹಾಗೂ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ಕರೆ ನೀಡಿದೆ.

ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳು ಯುದ್ಧವನ್ನು ಪ್ರಾರಂಭಿಸಿದ್ದವು. ಉಕ್ರೇನ್‌ನಿಂದ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಗಣರಾಜ್ಯಗಳಾಗಿ ಗುರುತಿಸಿದ ಮೂರು ದಿನಗಳ ನಂತರ ಉಕ್ರೇನ್ ಅನ್ನು ಸೈನ್ಯೀಕರಣಗೊಳಿಸಲು ವಿಶೇಷ ಸೇನಾ ಕಾರ್ಯಾಚರಣೆ ಘೋಷಿಸಿತ್ತು.

ಇದನ್ನೂ ಓದಿ: ಮರಿಯುಪೋಲ್​ಗೆ ಮುತ್ತಿಗೆ ಹಾಕಿದ ರಷ್ಯಾ: ಶರಣಾಗಲು ನಿರಾಕರಿಸಿದ ಉಕ್ರೇನ್​​ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.