ETV Bharat / international

ಭಾರತಕ್ಕೆ ಚೋಕ್ಸಿ ಕರೆತರಲು ಡೊಮಿನಿಕಾದೊಂದಿಗೆ ನಿರಂತರ ಮಾತುಕತೆ: ವಿದೇಶಾಂಗ ಸಚಿವಾಲಯ

author img

By

Published : Jun 17, 2021, 7:31 PM IST

ಪಿಎನ್​ಬಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಅವರನ್ನ ಭಾರತಕ್ಕೆ ಕರೆತರುವ ಉದ್ದೇಶದಿಂದ ಡೊಮಿನಿಕಾದೊಂದಿಗೆ ಮಾತುಕತೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

Choksi
Choksi

ನವದೆಹಲಿ: ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಅವರನ್ನ ಭಾರತಕ್ಕೆ ಕರೆತರಲು ಭಾರತ ಸರ್ಕಾರ ಡೊಮಿನಿಕಾದೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಕ್ರಮ ಪ್ರವೇಶ ಪ್ರಕರಣದಲ್ಲಿ ಕೆರಿಬಿಯನ್​​ ದ್ವೀಪ ರಾಷ್ಟ್ರ ಡೊಮಿನಿಕಾ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಚೋಕ್ಸಿಯನ್ನ ಈಗಾಗಲೇ ಅಲ್ಲಿನ ಮ್ಯಾಜಿಸ್ಟ್ರೇಟ್​ ಮುಂದೆ ಹಾಜರುಪಡಿಸಲಾಗಿದೆ. ಆದರೆ, ಇದರ ವಿಚಾರಣೆ ಜೂನ್​ 25ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ, ಚೋಕ್ಸಿ ಸದ್ಯ ಡೊಮಿನಿಕಾ ಅಧಿಕಾರಿಗಳ ವಶದಲ್ಲಿದ್ದು, ಕಾನೂನು ರೀತಿಯ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. ಭಾರತಕ್ಕೆ ಗಡಿಪಾರು ಮಾಡುವ ವಿಚಾರವಾಗಿ ಭಾರತ ಸರ್ಕಾರ ಡೊಮಿನಿಕನ್ ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮೆಹುಲ್​ ಚೋಕ್ಸಿ ಭಾರತದಲ್ಲಿನ ಕ್ರಿಮಿನಲ್​​ ಆರೋಪ ಹಾಗೂ ಅವರ ಮೇಲಿನ ಕೇಸ್​ಗಳ ಬಗ್ಗೆ ಈಗಾಗಲೇ ಅಲ್ಲಿನ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.

ಇದನ್ನೂ ಓದಿ: ಚೋಕ್ಸಿ ಕೇಸ್​​ ವಿಚಾರಣೆ ಮುಂದೂಡಿಕೆ: ಮತ್ತೊಮ್ಮೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಮೋಸ್ಟ್​ ವಾಂಟೆಡ್​ ಆರೋಪಿ

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ 13 ಸಾವಿರ ಕೋಟಿ ರೂ. ವಂಚಿಸಿ 2018ರ ಜನವರಿಯಲ್ಲಿ ಚೋಕ್ಸಿ ಭಾರತದಿಂದ ತಲೆಮರೆಸಿಕೊಂಡಿದ್ದರು. ಆದರೆ, 2018 ರಿಂದಲೇ ಕೆರಿಬಿಯನ್ ದ್ವೀಪರಾಷ್ಟ್ರ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದು, ಚೋಕ್ಸಿ ಅಲ್ಲಿಯೇ ನೆಲೆಸಿದ್ದ. ಆಂಟಿಗುವಾದಿಂದ ಡೊಮಿನಿಕಾ ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಹಿನ್ನೆಲೆ, ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಮಧ್ಯೆ ಡೊಮಿನಿಕಾ ಪೊಲೀಸರು ಮೇ. 27ರಂದು ಆತನ ಬಂಧನ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.