ETV Bharat / international

183 ದೇಶಗಳಲ್ಲಿ 7 ಲಕ್ಷ ಕೊರೊನಾ ಪೀಡಿತರು, ಸಾವಿನ ಸಂಖ್ಯೆ 33,568ಕ್ಕೆ ಏರಿಕೆ - ಡೆಡ್ಲಿ ವೈರಸ್​

ಡೆಡ್ಲಿ ವೈರಸ್​ನಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ವಿಶ್ವದಾದ್ಯಂತ ಇದರ ಸಂಖ್ಯೆ ಈಗ 7 ಲಕ್ಷದ ಗಡಿ ದಾಟಿ ಮುನ್ನುಗ್ಗುತ್ತಿದೆ.

Global declared coronavirus cases
Global declared coronavirus cases
author img

By

Published : Mar 30, 2020, 4:12 PM IST

ಪ್ಯಾರಿಸ್​( ಫ್ರಾನ್ಸ್​)​​: ಮಹಾಮಾರಿ ಕೊರೊನಾ ವಿಶ್ವದಾದ್ಯಂತ ರುದ್ರತಾಂಡವ ಆಡ್ತಿದ್ದು, ಈಗಾಗಲೇ ಸಾವಿರಾರು ಜನರ ಪ್ರಾಣ ಬಲಿ ಪಡೆದುಕೊಂಡಿರುವ ರಕ್ಕಸ ಸೋಂಕು ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹು ವಿಸ್ತಾರ ಮಾಡುತ್ತಿದೆ.

ಸರ್ಕಾರಿ ಅಂಕಿ ಅಂಶಗಳ ಪ್ರಕಾರ 183 ದೇಶಗಳಲ್ಲಿ ಈ ಮಹಾಮಾರಿಯಿಂದ ಬಳಲುತ್ತಿರುವವರ ಸಂಖ್ಯೆ 7 ಲಕ್ಷ ದಾಟಿದ್ದು, ಸಾವಿನ ಸಂಖ್ಯೆ 33,568 ಆಗಿದೆ. ಅಮೆರಿಕದ​ಲ್ಲಿ 143,025 ಜನರು ಈ ಸೋಂಕಿನಿಂದ ಬಳಲುತ್ತಿದ್ದು, 2,514 ಜನರು ಸಾವನ್ನಪ್ಪಿದ್ದಾರೆ.

ಇನ್ನು ಇಟಲಿಯಲ್ಲಿ 97,689 ಕೇಸ್​ಗಳಿಂದ ಸಾವಿನ ಸಂಖ್ಯೆ 10,779 ಆಗಿದೆ. ಇಟಲಿಯಲ್ಲೇ ಅತಿ ಹೆಚ್ಚು ಜನರು ಸಾವನ್ನಪ್ಪಿದ್ದು, ಸೋಂಕು ಹುಟ್ಟಿಕೊಂಡಿರುವ ಚೀನಾದಲ್ಲಿ 81,470 ಜನರು ಈ ವೈರಸ್​​ನಿಂದ ಬಳಲುತ್ತಿದ್ದು, ಸಾವಿನ ಸಂಖ್ಯೆ 3,304 ಆಗಿದೆ.

ಈ ಮಹಾಮಾರಿಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಭಾರತದಲ್ಲೂ ವೈರಸ್​​ ಸೋಂಕಿತರ ಸಂಖ್ಯೆ ಈಗಾಗಲೇ ಸಾವಿರ ಗಡಿ ದಾಟಿದ್ದು, 28 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣ ಕಂಡು ಬಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.