ಪ್ಯಾರಿಸ್: ಜಾಗತಿಕ ಸಾಂಕ್ರಾಮಿಕ ಕಾಯಿಲೆ ಕೋವಿಡ್-19ಗೆ ವಿಶ್ವದಾದ್ಯಂತ ಬಲಿಯಾದವರ ಸಂಖ್ಯೆ ಬರೋಬ್ಬರಿ 15,189ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲೇ 1,395 ಸಾವುಗಳು ವರದಿಯಾಗಿದ್ದು, ಇದರಲ್ಲಿ ಬಹುಪಾಲು ಯುರೋಪ್ನದ್ದಾಗಿದೆ.
ಚೀನಾ ಹಾಗೂ ಇಟಲಿ ಬಳಿಕ ಕೊರೊನಾ ಪೀಡಿತ ರಾಷ್ಟ್ರಗಳ ಸಾಲಲ್ಲಿ ಸ್ಪೇನ್ ಇದೆ. ಚೀನಾದಲ್ಲಿ ಸೋಂಕು ಮೊದಲು ಕಾಣಿಸಿಕೊಂಡಿದ್ದರೂ ಸಾವಿನ ಸಂಖ್ಯೆಯಲ್ಲಿ ಇಟಲಿ ಮೊದಲ ಸ್ಥಾನದಲ್ಲಿದೆ. ಚೀನಾದಲ್ಲಿ 3,270 ಮಂದಿ ಮೃತಪಟ್ಟಿದ್ದರೆ, ಇಟಲಿಯಲ್ಲಿ ನಿನ್ನೆಯವರೆಗೆ 5,476 ಸಾವುಗಳು ವರದಿಯಾಗಿದೆ. ಸ್ಪೇನ್ನಲ್ಲಿ 2,182 ಮಂದಿ ಮೃತಪಟ್ಟಿದ್ದಾರೆ.
ಇನ್ನು ನಾಲ್ಕನೇ ಸ್ಥಾನದಲ್ಲಿರುವ ಇರಾನ್ನಲ್ಲಿ ಇಂದು ಒಂದೇ ದಿನ 127 ಜನರು ಮೃತಪಟ್ಟಿದ್ದು, ಅಲ್ಲಿನ ಸಾವಿನ ಸಂಖ್ಯೆ 1,812ಕ್ಕೆ ಏರಿಕೆಯಾಗಿದೆ.