ETV Bharat / international

ಆಸ್ಟ್ರೇಲಿಯಾದಲ್ಲಿ ಅನಾವರಣಗೊಂಡ ಕೆಲ ಗಂಟೆಗಳಲ್ಲಿ ಗಾಂಧಿ ಕಂಚಿನ ಪ್ರತಿಮೆ ಧ್ವಂಸ - Gandhi Statue

ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ಅನಾವರಣಗೊಂಡಿದ್ದ ಮಹಾತ್ಮ ಗಾಂಧಿಯವರ ಬೃಹತ್ ಕಂಚಿನ ಪ್ರತಿಮೆ(Gandhi Statue Vandalised) ಧ್ವಂಸಗೊಳಿಸಲಾಗಿದೆ. ಇದಕ್ಕೆ ಅಲ್ಲಿನ ಪ್ರಧಾನಿ ಸ್ಕಾಟ್​ ಮಾರಿಸನ್​​ ಬಲವಾಗಿ ಖಂಡಿಸಿದ್ದಾರೆ..

Gandhi Statue Vandalised In Melbourne
Gandhi Statue Vandalised In Melbourne
author img

By

Published : Nov 15, 2021, 8:00 PM IST

ಮೆಲ್ಬೋರ್ನ್(ಆಸ್ಟ್ರೇಲಿಯಾ)​: ಕೇಂದ್ರ ಸರ್ಕಾರ(Central Govt) ನೀಡಲಾಗಿದ್ದ ಗಾಂಧಿ ಪ್ರತಿಮೆ ಅನಾವರಣ(statue of Mahatma Gandhi) ಮಾಡಿದ ಕೆಲ ಗಂಟೆಗಳಲ್ಲಿ ಅದನ್ನ ಧ್ವಂಸ ಮಾಡಿರುವ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್​​ನಲ್ಲಿ ನಡೆದಿದೆ. ಈ ಪ್ರಕರಣವೀಗ ಇನ್ನಿಲ್ಲದ ಆಕ್ರೋಶಕ್ಕೆ ಕಾರಣವಾಗ್ತಿದೆ.

ಭಾರತ ಸರ್ಕಾರ ಆಸ್ಟ್ರೇಲಿಯಾಗೆ ಬೃಹತ್ ಕಂಚಿನ ಪ್ರತಿಮೆ ಉಡುಗೊರೆಯಾಗಿ ನೀಡಿತ್ತು. ಇದನ್ನ ಅನಾವರಣ ಮಾಡಿದ ಕೆಲ ಗಂಟೆಗಳಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಕಳೆದ ಶುಕ್ರವಾರ ಸಂಜೆ 5.30ರಿಂದ ಶನಿವಾರ ಸಂಜೆ 5.30ರ ನಡುವೆ ದುಷ್ಕರ್ಮಿಗಳು ಪ್ರತಿಮೆಯ ಶಿರಚ್ಛೇದ ಮಾಡಲು ವಿದ್ಯುತ್ ಉಪಕರಣ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಲ್ಲಿನ ಪ್ರಧಾನಿ ಸ್ಕಾಟ್​ ಮಾರಿಸನ್​​ ಖಂಡನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: 16 ವರ್ಷದ ಅಪ್ರಾಪ್ತ ವಿವಾಹಿತೆಯ ಮೇಲೆ 400ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ!

ಭಾರತ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ಇದರ ಪ್ರಯುಕ್ತ ಮೆಲ್ಬೋರ್ನ್​​ನ ರೌವಿಲ್ಲೆಯಲ್ಲಿರುವ ಆಸ್ಟ್ರೇಲಿಯನ್​​ ಇಂಡಿಯನ್​ ಸಮುದಾಯ(Indian-Australian community) ಸೆಂಟರ್​​ನಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್(Prime Minister Morrison), ಭಾರತದ ರಾಯಭಾರಿ ರಾಜ್ ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಪ್ರತಿಮೆ ಅನಾವರಣಗೊಂಡ ಕೆಲ ಗಂಟೆಗಳಲ್ಲಿ ಗಾಂಧಿ ಪ್ರತಿಮೆ ಧ್ವಂಸಗೊಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್,​ ಈ ರೀತಿ ಅಗೌರವ ತೋರಿರುವುದು ನಿಜಕ್ಕೂ ಅವಮಾನಕರ. ಈ ದಾಳಿ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.