ETV Bharat / international

ಒಂದು ಬಿಲಿಯನ್​ ಕೋವಿಡ್​ ಲಸಿಕೆ ನೀಡಲು ಜಿ-7 ರಾಷ್ಟ್ರಗಳು ಮುಂದೆ ಬರಲಿವೆ : ಯುಕೆ - G7 countries to provide COVID-19 vaccine

ಶೃಂಗಸಭೆಯಲ್ಲಿ ವಿಶ್ವ ನಾಯಕರು ಕನಿಷ್ಠ ಒಂದು ಶತಕೋಟಿ ಕೊರೊನಾ ವೈರಸ್ ಲಸಿಕೆ ಪ್ರಮಾಣವನ್ನು ಜಗತ್ತಿಗೆ ನೀಡುವುದಾಗಿ ಘೋಷಿಸುವ ನಿರೀಕ್ಷೆಯಿದೆ ಮತ್ತು ಆ ಗುರಿಯನ್ನು ಸಾಧಿಸಲು ಲಸಿಕೆ ತಯಾರಿಕೆಯನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಡೌನಿಂಗ್ ಸ್ಟ್ರೀಟ್ ತಿಳಿಸಿದೆ..

COVID-19
ಕೋವಿಡ್​ ಲಸಿಕೆ
author img

By

Published : Jun 11, 2021, 9:12 AM IST

ಬ್ರಿಟನ್ ​: ಜಗತ್ತಿಗೆ ಕನಿಷ್ಠ ಒಂದು ಶತಕೋಟಿ ಪ್ರಮಾಣದ ವ್ಯಾಕ್ಸಿನ್​ ಒದಗಿಸಲು ಜಿ7 ನಾಯಕರು ಒಪ್ಪುತ್ತಾರೆ ಎಂದು ಬ್ರಿಟನ್ ಗುರುವಾರ ತಿಳಿಸಿದೆ. 92 ಬಡ ಮತ್ತು ಕಡಿಮೆ-ಮಧ್ಯಮ-ಆದಾಯದ ರಾಷ್ಟ್ರಗಳಿಗೆ 500 ಮಿಲಿಯನ್ ಉದ್ಯೋಗಗಳನ್ನು ನೀಡುವುದಾಗಿ ಅಮೆರಿಕ ಹೇಳಿದ ನಂತರ ಈ ಪ್ರಕಟಣೆ ಹೊರ ಬಿದ್ದಿದೆ.

ನೈರುತ್ಯ ಇಂಗ್ಲೆಂಡ್‌ನಲ್ಲಿ ದೊಡ್ಡ ಶಕ್ತಿಗಳ ಕೂಟವನ್ನು ಆಯೋಜಿಸುತ್ತಿರುವ ಯುಕೆ, ಮುಂದಿನ ವರ್ಷದೊಳಗೆ ಕನಿಷ್ಠ 100 ಮಿಲಿಯನ್ ಹೆಚ್ಚುವರಿ ಕೋವಿಡ್​ ವ್ಯಾಕ್ಸಿನ್​ ದಾನ ಮಾಡುವುದಾಗಿ ಹೇಳಿದ್ದು, ಮುಂಬರುವ ವಾರಗಳಲ್ಲಿ ಐದು ಮಿಲಿಯನ್ ಪ್ರಮಾಣದ ವ್ಯಾಕ್ಸಿನ್​ ಹಂಚಿಕೆ ಆರಂಭವಾಗುತ್ತದೆ ಎಂದು ತಿಳಿಸಲಾಗಿದೆ.

ಈ ಹಿಂದೆ 400 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬಡರಾಷ್ಟ್ರಗಳಿಗೆ ವ್ಯಾಕ್ಸಿನ್​ ನೀಡುವ ಗುರಿ ಹೊಂದಿದ್ದ ಬ್ರಿಟನ್, ಅದರಲ್ಲಿ ವಿಫಲವಾದ ಕಾರಣ ಟೀಕೆಗೆ ಗುರಿಯಾಗಿತ್ತು. ಹೀಗಾಗಿ, ಶ್ರೀಮಂತ ರಾಷ್ಟ್ರಗಳ ಗುಂಪಿನಿಂದ ವಿಶ್ವ ನಾಯಕರನ್ನು ತಮ್ಮ ಮೊದಲ ಶೃಂಗಸಭೆಗೆ ಸ್ವಾಗತಿಸುವ ಮುನ್ನ, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಶೀಘ್ರದಲ್ಲೇ ಇದು ಬದಲಾಗಲಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಯುಕೆ ಲಸಿಕೆ ಕಾರ್ಯಕ್ರಮದ ಯಶಸ್ಸಿನ ಪರಿಣಾಮವಾಗಿ ನಾವು ಈಗ ನಮ್ಮ ಹೆಚ್ಚುವರಿ ಪ್ರಮಾಣವನ್ನು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳುವ ಸ್ಥಿತಿಯಲ್ಲಿದ್ದೇವೆ ಎಂದು ತಿಳಿಸಿದ ಅವರು, ಜಿ7 ಶೃಂಗಸಭೆಯಲ್ಲಿ, ನನ್ನ ಸಹ ನಾಯಕರು ಇದೇ ರೀತಿಯ ಪ್ರತಿಜ್ಞೆಗಳನ್ನು ಮಾಡುತ್ತಾರೆಂದು ನಾನು ಭಾವಿಸುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶೃಂಗಸಭೆಯಲ್ಲಿ ವಿಶ್ವ ನಾಯಕರು ಕನಿಷ್ಠ ಒಂದು ಶತಕೋಟಿ ಕೊರೊನಾ ವೈರಸ್ ಲಸಿಕೆ ಪ್ರಮಾಣವನ್ನು ಜಗತ್ತಿಗೆ ನೀಡುವುದಾಗಿ ಘೋಷಿಸುವ ನಿರೀಕ್ಷೆಯಿದೆ ಮತ್ತು ಆ ಗುರಿಯನ್ನು ಸಾಧಿಸಲು ಲಸಿಕೆ ತಯಾರಿಕೆಯನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಡೌನಿಂಗ್ ಸ್ಟ್ರೀಟ್ ತಿಳಿಸಿದೆ.

'ಮಾನವೀಯ ಬಾಧ್ಯತೆ'- ಈ ಮಧ್ಯೆ ಯುರೋಪಿಯನ್​ ಸದಸ್ಯರು 2021ರ ಅಂತ್ಯದ ವೇಳೆಗೆ ಕನಿಷ್ಠ 100 ಮಿಲಿಯನ್ ಡೋಸೇಜ್ ನೀಡಲು ಒಪ್ಪಿದ್ದಾರೆ. ಜೊತೆಗೆ ಫ್ರಾನ್ಸ್ ಮತ್ತು ಜರ್ಮನಿಗಳು ತಲಾ 30 ಮಿಲಿಯನ್ ಒದಗಿಸಲು ಬದ್ಧವಾಗಿವೆ ಎಂಬುದಾಗಿ ತಿಳಿದು ಬಂದಿದೆ.

ಓದಿ: ಯೆಮೆನ್​ನಲ್ಲಿ ಹೌತಿ ಬಂಡುಕೋರರ ಅಟ್ಟಹಾಸ: 3 ಸಾವು, 16 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.