ಲಂಡನ್ (ಯುಕೆ): ಕೋವಿಡ್-19ರೊಂದಿಗೆ ಸಾಂಕ್ರಾಮಿಕವಲ್ಲದ ಇತರ ರೋಗಗಳು ಸೇರಿಕೊಳ್ಳುವುದರಿಂದ ಕೊರೊನಾ ವೈರಸ್ ಚಂಡಮಾರುತದಂತೆ ಅಪ್ಪಳಿಸಿದೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ತಿಳಿಸಿದೆ.
ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿರುವ ಜನರಿಗೆ ಕೋವಿಡ್-19 ಸೊಂಕು ತಗುಲುವ ಸಾಧ್ಯತೆ ಅಧಿಕವಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಲಾಕ್‌ಡೌನ್, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್-19ರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳು ಬಡವರ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿವೆ ಎಂದು ತಿಳಿಸಲಾಗಿದೆ.
ಕೊರೊನಾ ವೈರಸ್ ಹಿನ್ನೆಲೆ ಬಡವರ ಆರ್ಥಿಕತೆಯೂ ಹದಗೆಟ್ಟಿದ್ದು, ಅವರಿಗೆ ಆರ್ಥಿಕ ಬೆಂಬಲ ನಿಡುವುದರೊಂದಿಗೆ ಆರೋಗ್ಯ ರಕ್ಷಣೆಗೂ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.