ಹೈದರಾಬಾದ್: ಇಂಧನ ಮಿತವ್ಯಯ ಹಾಗೂ ಸುಖಕರ ಪ್ರಯಾಣಕ್ಕೆ ಸೂಕ್ತ ಮಾದರಿ ಎಂದೇ ಬಿಂಬಿತವಾಗಿರುವ ಜರ್ಮನಿ ನಿರ್ಮಿತ 'ಫ್ಲೈ-ವಿ' ವಿಮಾನ ಭಾನುವಾರ ಯಶಸ್ವಿ ಹಾರಾಟ ನಡೆಸಿದೆ.
ವಿಮಾನದ ವಿಶೇಷತೆ: ಈ ವಿಮಾನವು ತನ್ನ ರೆಕ್ಕೆಯ ಮುಂಭಾಗದಲ್ಲಿ ಪ್ರಯಾಣಿಕರು ಕೂರುವ ಕ್ಯಾಬಿನ್ ಇದೆ. ಅಷ್ಟೇ ಅಲ್ಲದೆ ಸರಕು ತುಂಬುವ ಸ್ಥಳ ಮತ್ತು ಇಂಧನ ಟ್ಯಾಂಕ್ ಕೂಡ ಇದರ ರೆಕ್ಕೆಯಲ್ಲಿ ಇರಲಿದೆ. ಗಾಳಿಯಲ್ಲಿ ಸುಲಭವಾಗಿ ಹಾರಾಡಬಲ್ಲ ಈ ವಿಮಾನ ಇಂಧನ ಉಳಿತಾಯ ಮಾಡಲಿದೆ. ಇನ್ನು ಬೇರೆ ವಿಮಾನಗಳಿಗೆ ಹೋಲಿಸಿದರೆ ಶೇ. 20ರಷ್ಟು ಇಂಧನ ಉಳಿತಾಯವಾಗಲಿದೆ.
-
Successful maiden flight for the Flying-V scaled flight model, the energy-efficient aircraft design by @tudelft together with @klm and @Airbus. https://t.co/y7Pp4pDBtG #flyingv pic.twitter.com/p9s77khb2F
— TU Delft (@tudelft) September 1, 2020 " class="align-text-top noRightClick twitterSection" data="
">Successful maiden flight for the Flying-V scaled flight model, the energy-efficient aircraft design by @tudelft together with @klm and @Airbus. https://t.co/y7Pp4pDBtG #flyingv pic.twitter.com/p9s77khb2F
— TU Delft (@tudelft) September 1, 2020Successful maiden flight for the Flying-V scaled flight model, the energy-efficient aircraft design by @tudelft together with @klm and @Airbus. https://t.co/y7Pp4pDBtG #flyingv pic.twitter.com/p9s77khb2F
— TU Delft (@tudelft) September 1, 2020
'ವಿ' ಆಕೃತಿಯ ಈ ವಿಮಾನ ಜರ್ಮನಿಯ ವಾಯುನೆಲೆಯಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಇದನ್ನು ಡಚ್ ಏರ್‌ಲೈನ್ಸ್ ಕೆಎಲ್‌ಎಂ ಸಹಯೋಗದಲ್ಲಿ ನೆದರ್‌ಲೆಂಡ್‌ನ ಡೆಲ್ಫ್ ಯುನಿವರ್ಸಿಟಿಯ ತಂತ್ರಜ್ಞಾನ ವಿಭಾಗ ಅಭಿವೃದ್ಧಿ ಮಾಡಿದೆ.
ಕುರಿತು ಡೆಲ್ಫ್ ಯುನಿವರ್ಸಿಟಿಯ ಪ್ರೊ. ರಾಲೋಫ್ ವೋಸ್ ಮಾತನಾಡಿದ್ದು, 'ಈ ವಿಮಾನದ ಹಾರಾಟದಲ್ಲಿ ಕೆಲ ಸಮಸ್ಯೆಗಳು ಕಂಡು ಬಂದಿವೆ. ಟರ್ನಿಂಗ್ ಹಂತದಲ್ಲಿ ಸ್ವಲ್ವ ಮಟ್ಟಿನ ಸಮಸ್ಯೆ ಕಂಡು ಬಂದಿದೆ. ಹಾಗೆಯೇ ರೆಕ್ಕೆಗಳೇ ವಿಮಾನದ ದೇಹಾಕೃತಿಯಾಗಿರುವುದರಿಮದ ರನ್ ವೇನಲ್ಲಿ ಭೂ ಸ್ಪರ್ಶ ಮಾಡುವಾಗ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಮುಂದಿನ ಹಂತದಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುವುದು' ಎಂದು ಹೇಳಿದ್ದಾರೆ.
ಈ ವಿಮಾನ 22.5 ಕೆಜಿ ತೂಕವಿದ್ದು, 3 ಮೀಟರ್ ಉದ್ದವಿದೆ.