ಬೀಜಿಂಗ್: ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಕಳೆದ ವಾರ ಕಲ್ಲಿದ್ದಲು ಗಣಿಗಾರಿಕೆ ವೇಳೆ ದುರಂತ ಸಂಭವಿಸಿದ್ದು ಕಣ್ಮರೆಯಾಗಿದ್ದ ಐದು ಜನ ಕಾರ್ಮಿಕರು ಇಂದು ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಶಾಂಕ್ಸಿ ಪ್ರಾಂತ್ಯದ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ ಕಲ್ಲಿದ್ದಲು ಗಣಿಗಾರಿಯಲ್ಲಿ ಈ ದುರಂತ ಸಂಭವಿಸಿದೆ. ಕಳೆದ ರಾತ್ರಿ 11:57ಕ್ಕೆ ಸಿಲುಕಿದ್ದ ಶವಗಳನ್ನು ಕಾರ್ಯಚರಣೆ ಮೂಲಕ ಹೊರ ತೆಗೆಯಲಾಗಿದೆ.
ನವೆಂಬರ್ 11 ರಂದು ಈ ದುರಂತ ಸಂಭವಿಸಿದ್ದು ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಒಟ್ಟು 91 ಕಾರ್ಮಿಕರ ಪೈಕಿ 86 ಕಾರ್ಮಿಕರನ್ನು ರಕ್ಷಿಸಿ ಸಾವಿನ ದವಡೆಯಿಂದ ಪಾರು ಮಾಡಲಾಗಿತ್ತು. ಆದರೆ, ಐವರು ಕಾರ್ಮಿಕರು ಸಿಲುಕಿದ್ದರು. ಇದೀಗ ಅವರ ಶವಗಳನ್ನು ಕಾರ್ಯಾಚರಣೆಯೊಂದಿಗೆ ಹೊರತೆಗೆಯಲಾಗಿದೆ.