ETV Bharat / international

ಪ್ರವಾಸಿಗರಿಗಾಗಿ ಮತ್ತೆ ಸಜ್ಜಾಗುತ್ತಿದೆ ಜಗತ್​ವಿಖ್ಯಾತ ಐಫೆಲ್​ ಟವರ್​​

author img

By

Published : Jun 17, 2020, 1:23 PM IST

ಜೂನ್ 25 ರಿಂದ ಐಫೆಲ್ ಟವರ್ ಮತ್ತೆ ತೆರೆಯುತ್ತಿದೆ. ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶವಿರುತ್ತದೆ. ಪ್ರವಾಸಿಗರಿಗೆ ಯಾವುದೇ ಎಲಿವೇಟರ್‌ ಸೇವೆಗಳು ಇರುವುದಿಲ್ಲ.

Eiffel Tower
ವಿಶ್ವವಿಖ್ಯಾತ ಎಫೆಲ್​ ಟವರ್​​

ಪ್ಯಾರಿಸ್: ಪ್ಯಾರಿಸ್​ನಲ್ಲಿ ಪ್ರವಾಸೋದ್ಯಮ ಮತ್ತೆ ಆರಂಭವಾಗುತ್ತಿದೆ. ಕೊರೊನಾ ಕಾರಣದಿಂದ ಸ್ಥಗಿತವಾಗಿದ್ದ, ವಿಶ್ವವಿಖ್ಯಾತ ಐಫೆಲ್​ ಟವರ್​​ ಪ್ರವಾಸಿಗರಿಗಾಗಿ ಮತ್ತೆ ಸಜ್ಜುಗೊಳ್ಳುತ್ತಿದೆ.

Eiffel Tower
ವಿಶ್ವವಿಖ್ಯಾತ ಐಫೆಲ್​ ಟವರ್​​

ಜೂನ್ 25 ರಿಂದ 324 ಮೀಟರ್​ ಎತ್ತರದ ಐಫೆಲ್ ಟವರ್​​ ಪ್ರವಾಸಿಗರಿಗೆ ಮತ್ತೆ ತೆರೆಯಲಿದೆ. ಸೀಮಿತ ಸಂಖ್ಯೆಯ ಪ್ರವಾಸಿಗರಿಗೆ ಮಾತ್ರ ಅವಕಾಶವಿರುತ್ತದೆ. ಯಾವುದೇ ಎಲಿವೇಟರ್​​ ಸೇವೆಗಳು ಇರುವುದಿಲ್ಲ. ಟವರ್​ನ ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಇರಲಿದೆ.

"ಟವರ್​​ ಒಳಗೆ ಮೆಟ್ಟಿಲುಗಳ ಮೂಲಕ ಹೋಗಲು ಅವಕಾಶ ಕಲ್ಪಿಸಲಾಗಿದೆ" ಎಂದು ಗೋಪುರದ ನಿರ್ವಹಣೆಯ ವಕ್ತಾರ ವಿಕ್ಟೋರಿಯಾ ಕ್ಲಾರ್ ಹೇಳಿದ್ದಾರೆ.

Eiffel Tower
ವಿಶ್ವವಿಖ್ಯಾತ ಐಫೆಲ್​ ಟವರ್​​

ಹನ್ನೊಂದು ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಫೇಸ್ ಮಾಸ್ಕ್ ಧರಿಸಬೇಕು. ಜನಸಂದಣಿ ನಿಯಂತ್ರಣ ಕ್ರಮಗಳು ಜಾರಿಯಲ್ಲಿರುತ್ತವೆ. "ಹೊಸ ಪ್ರೋಟೋಕಾಲ್ ಇದೆ" ಎಂದು ಐಫೆಲ್ ಟವರ್ ನೈರ್ಮಲ್ಯ ವಿಭಾಗದ ಸಲಹೆಗಾರ ಅಲೈನ್ ಮಿರಲ್ಲೆಸ್ ಹೇಳಿದ್ದಾರೆ.

ಪ್ರವಾಸಿಗರು ಭೇಟಿ ನೀಡಲು ಟಿಕೆಟ್​ನನ್ನು ಆನ್​ಲೈನ್​ ಮೂಲಕ ಕಾಯ್ದಿರಿಸಬಹುದಾಗಿದೆ. ಗುರುವಾರದಿಂದ ಟಿಕೆಟ್​​ ಕೌಂಟರ್​ಗಳು​​ ತೆರೆಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.