ETV Bharat / international

ಆರೋಗ್ಯ ಸಿಬ್ಬಂದಿಗೆ ಧನ್ಯವಾದ; ಐಫೆಲ್​ ಟವರ್​ನಿಂದ ಶುಭ ಸಂದೇಶ

author img

By

Published : Mar 28, 2020, 1:05 PM IST

ಭಾರತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ವೈದ್ಯಕೀಯ ಸಿಬ್ಬಂದಿಗೆ ಜನತೆ ಧನ್ಯವಾದಗಳನ್ನು ತಿಳಿಸಿದ ರೀತಿಯಲ್ಲಿಯೇ ಫ್ರಾನ್ಸ್​ ಜನತೆ ಕೂಡ ತಮ್ಮ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದು ಅಭೂತಪೂರ್ವ.

Eiffel Tower, 'Merci' to health workers
Eiffel Tower

ಪ್ಯಾರಿಸ್​: ಕೊರೊನಾ ವೈರಸ್​ ಹಿಮ್ಮೆಟ್ಟಿಸಲು ಶತಪ್ರಯತ್ನ ಮಾಡುತ್ತಿರುವ ಫ್ರಾನ್ಸ್​ ತನ್ನ ದೇಶದ ಆರೋಗ್ಯ ಸಿಬ್ಬಂದಿಗೆ ಮನಃಪೂರ್ವಕ ಧನ್ಯವಾದಗಳನ್ನು ತಿಳಿಸಿದೆ. ಐತಿಹಾಸಿಕ ಐಫೆಲ್ ಟವರ್​ ಮೂಲಕ ಫ್ರಾನ್ಸ್​ನ ಸಮಸ್ತ ಜನತೆಯ ಪರವಾಗಿ ವೈದ್ಯಕೀಯ ಸಿಬ್ಬಂದಿಯ ಕಾರ್ಯಕ್ಕೆ ಕೃತಜ್ಱತೆಗಳನ್ನು ಸಲ್ಲಿಸಲಾಯಿತು.

ಶುಕ್ರವಾರ ರಾತ್ರಿ ಐಫೆಲ್​ ಟವರ್​ ಮೇಲೆ ಜಗಮಗಿಸುವ ವಿದ್ಯುದ್ದೀಪಗಳ ಅಲಂಕಾರದಲ್ಲಿ 'ಥ್ಯಾಂಕ್ ಯೂ' 'ಮನೆಯಲ್ಲೇ ಇರಿ' ಎಂಬ ಸಂದೇಶಗಳು ಮೂಡಿ ಬಂದವು. ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆಯಷ್ಟೊತ್ತಿಗೆ ಲಾಕ್​ಡೌನ್​ನಲ್ಲಿರುವ ಇಡೀ ಫ್ರಾನ್ಸ್ ಜನತೆ ತಮ್ಮ ಮನೆಗಳ ಮುಂದೆ, ಬಾಲ್ಕನಿಗಳಲ್ಲಿ ನಿಂತು ವೈದ್ಯಕೀಯ ಹಾಗೂ ಶುಶ್ರೂಷಕ ಸಿಬ್ಬಂದಿಯ ಸೇವೆಗೆ ಧನ್ಯವಾದಗಳನ್ನ ಅರ್ಪಿಸಿದರು. ಸರಿಯಾಗಿ ಇದೇ ಸಮಯದಲ್ಲಿ ಐಫೆಲ್​ ಟವರ್​ ಮೂಲಕ ಥ್ಯಾಂಕ್​ ಯೂ ಸಂದೇಶ ಸಾರಲಾಯಿತು.

ಇನ್ನು ಮುಂದೆ 324 ಮೀಟರ್​ ಎತ್ತರದ ಐಫೆಲ್ ಟವರ್​ ಮೂಲಕ ಪ್ರತಿದಿನ ಸಂಜೆ ದೀಪ ಸಂದೇಶಗಳನ್ನು ಬಿತ್ತರಿಸಲಾಗುವುದು ಎಂದು ಪ್ಯಾರಿಸ್ ಮೇಯರ್​ ಆ್ಯನೆ ಹಿಡಾಲ್ಗೊ ತಿಳಿಸಿದರು.

ಫ್ರಾನ್ಸ್​ನಲ್ಲಿ ಶುಕ್ರವಾರ ಒಂದೇ ದಿನ 2,000 ಜನ ಕೋವಿಡ್​ಗೆ ಬಲಿಯಾಗಿದ್ದಾರೆ. ಸುಮಾರು 3,800 ಐಸಿಯುಗಳಲ್ಲಿ ಭರ್ತಿಯಾಗಿರುವ ರೋಗಿಗಳ ಆರೈಕೆಗೆ ದೇಶದ ವೈದ್ಯಕೀಯ ಸಮುದಾಯ ಸತತವಾಗಿ ಶ್ರಮಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.