ಲಂಡನ್(ಬ್ರಿಟನ್): ಬಡತನ, ಮನೆಯಿಲ್ಲದಿರುವಿಕೆ, ವ್ಯಸನ ಅಥವಾ ಇತರ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಜನರಿಗೆ ಸಹಾಯ ಮಾಡುವ ಕೇಂದ್ರ ಲ್ಯಾಂಕಾಷೈರ್ ಚಾರಿಟಿ ಕೇಂದ್ರಕ್ಕೆ ಬ್ರಿಟನ್ನ ಯುವರಾಜ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು. ಚಾರಿಟಿಯಿಂದ ನೆರವು ಪಡೆದ ಶಾಲಾ ಬಾಲಕ ಮತ್ತು ಅವನ ಮುತ್ತಜ್ಜಿ ಕ್ಯಾರೊಲ್ ಎಲ್ಲಿಸ್ ಅವರೊಂದಿಗೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿ ಧೈರ್ಯ ತುಂಬಿದರು.
1997ರಲ್ಲಿ ವೇಲ್ಸ್ ರಾಜಕುಮಾರಿ ಡಯಾನಾ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಆಗ ನಾನು ದಿಕ್ಕು ತೋಚದಂತಾಗಿದ್ದೆ, ಆಗ ನನಗೆ ಕೇವಲ 15 ವರ್ಷ ವಯಸ್ಸಾಗಿತ್ತು. ಈಗ ನಿನಗೆ ಎಷ್ಟು ನೋವಾಗಿದೆ ಎಂಬುದು ನನಗೆ ಅರಿವಾಗುತ್ತೆ ಎಂದು ಪ್ರಿನ್ಸ್ ವಿಲಿಯಂ, 11 ವರ್ಷದ ಬಾಲಕ ಡಿಕಾನ್ ಗ್ಲೋವರ್ನನ್ನು ಸಮಾಧಾನಗೊಳಿಸಿದರು.
ಬಳಿಕ ದಂಪತಿಗಳು ಅಲ್ಲಿದ್ದ ಅನೇಕ ಕುಟುಂಬಸ್ಥರ ಜೊತೆ ಫೋಟೋಗಳನ್ನು ತೆಗೆಸಿಕೊಂಡು ಸಂತಸ ವ್ಯಕ್ತಪಡಿಸಿದರು. ಈ ವೇಳೆ, ಕೇಟ್ ಮೂರೂವರೆ ತಿಂಗಳ ಹೆಣ್ಣು ಮಗುವನ್ನು ಮಡಲಿನಲ್ಲಿ ಎತ್ತಿಕೊಂಡು ಮುದ್ದಾಡಿದರು. ಮಗುವನ್ನು ನೋಡುತ್ತಿರುವ ತನ್ನ ಹೆಂಡತಿಯನ್ನು ನೋಡುತ್ತಾ, ಅವಳಿಗೆ ಯಾವುದೇ ಆಲೋಚನೆಗಳನ್ನು ನೀಡಬೇಡ ಎಂದು ನಗುತ್ತಾ ಹೇಳಿದರು.
ಓದಿ:ಇದೆಂಥಾ ಅಚ್ಚರಿ!!.. ಮಂಗಳೂರು ಆಸ್ಪತ್ರೆಯಲ್ಲಿ ಸಾವು.. ಆ್ಯಂಬುಲನ್ಸ್ನಲ್ಲಿ ಸಾಗಿಸುವಾಗ ಕಣ್ಣುಬಿಟ್ಟ!
ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಬರ್ನ್ಲಿಯ ಅತ್ಯಂತ ಅಸಾಹಯಕ ಜನರೊಂದಿಗೆ ಮಾಡಿದ ಕೆಲಸದ ಬಗ್ಗೆ ಡಿಸೆಂಬರ್‌ನಲ್ಲಿ ಪ್ರಸಾರವಾದ ವರದಿ ವೀಕ್ಷಿಸಿದ ನಂತರ ರಾಯಲ್ ದಂಪತಿ ಚಾರಿಟಿಗೆ ಭೇಟಿ ನೀಡಿ ಶಹಬ್ಬಾಸ್ಗಿರಿ ಕೊಟ್ಟರು.
ನಿರಾಶ್ರಿತರಿಗೆ ಅನುಕೂಲ ಮಾಡಲು ಸ್ಥಾಪಿತವಾದ ಚಾರಿಟಿ: ಬರ್ನ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ವಸತಿ ನಿರಾಶ್ರಿತರು ಮತ್ತು ಅನಾನುಕೂಲಿತರಿಗೆ ಸಹಾಯ ಮಾಡಲು 2019 ರಲ್ಲಿ ಚರ್ಚ್ ಬೀದಿಯಲ್ಲಿ ಪಾಸ್ಟರ್ ಮಿಕ್ ಫ್ಲೆಮಿಂಗ್ ಅವರು ಸ್ಥಾಪಿಸಿದ ಚಾರಿಟಿ ಬಗ್ಗೆ ದೂರದರ್ಶನದಲ್ಲಿ ವರದಿಯಾಗಿತ್ತು. ಇದನ್ನು ನೋಡಿದ ನಂತರ ವಿಲಿಯಂ ಮತ್ತು ಕೇಟ್ ಬರ್ನ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ಚಾರಿಟಿ ಮಾಡುತ್ತಿರುವ ಕೆಲಸವೇನು?: ಮಾನಸಿಕ ಆರೋಗ್ಯದ ಸಮಸ್ಯೆಗಳಿರುವವರು ಸೇರಿದಂತೆ ಕಷ್ಟದಲ್ಲಿರುವವರಿಗೆ ಆಶ್ರಯ ಮತ್ತು ಸುರಕ್ಷೆತೆ ನೀಡುವುದು ಈ ಚಾರಿಟಿಯ ಕೆಲಸವಾಗಿದೆ. ದೇಣಿಗೆಗಳ ಮೂಲಕ ಧನಸಹಾಯ, ಆಹಾರ ಬ್ಯಾಂಕ್, ಬಟ್ಟೆ ಬ್ಯಾಂಕ್, ಬಿಸಿ ಸ್ನಾನ, ಲಾಂಡ್ರಿ, ಕೆಫೆ, ವ್ಯಸನ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಸಹಾಯ ಹಾಗೂ ಯಾವುದೇ ಸಮಯದಲ್ಲಿ 200 ಜನರಿಗೆ ಅಗತ್ಯ ನೆರವು ನೀಡುವುದು ಈ ಚಾರಿಟಿಯ ಆದ್ಯತೆ ಆಗಿದೆ.
ಓದಿ: ಸಾವಿರಾರು ಕಾರ್ಯಕರ್ತರ ಜೊತೆ ನಾಳೆ ಬೆಳಗಾವಿಗೆ ನುಗ್ತಾರಂತೆ ಮಹಾರಾಷ್ಟ್ರದ ಶಿವಸೇನೆ ಮುಖಂಡ
ಯುವರಾಜರ ಭೇಟಿಗೆ ಫಾಸ್ಟರ್ ಖುಷ್: ಚರ್ಚ್ ಸೇವೆಗಳನ್ನು ಮುನ್ನಡೆಸುವ ಫಾಸ್ಟರ್ ಮಿಕ್ ಮಾತನಾಡಿ, ರಾಯಲ್ ದಂಪತಿಯ ಭೇಟಿಯು ತಮ್ಮ ಸೇವೆ ಮತ್ತಷ್ಟು ವಿಸ್ತರಿಸಲು ಮಾನಸಿಕ ಬಲ ತುಂಬಿದೆ ಎಂದು ಸಂತಷ ಹಂಚಿಕೊಂಡಿದ್ದಾರೆ.
ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾವು ಏನು ಮಾಡುತ್ತಿದ್ದೇವೆ ಎಂಬುದರ ಕುರಿತು ಹೆಚ್ಚಿನ ಜನರು ತಿಳಿದುಕೊಳ್ಳಲು ಅನುಕೂಲವಾಗಿದೆ. ನಾವು ದೇಣಿಗೆಗಳ ಮೇಲೆ ಅವಲಂಬಿತರಾಗಿದ್ದೇವೆ ಮತ್ತು ನಮ್ಮ ಸೇವೆಗಳಿಗೆ ನಾವು ಒಂದು ಪೈಸೆಯನ್ನೂ ವಿಧಿಸುವುದಿಲ್ಲ ಎಂದು ಫಾಸ್ಟರ್ ಮಿಕ್ ಇದೇ ವೇಳೆ ಸ್ಪಷ್ಟ ಪಡಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ