ETV Bharat / international

ಎರಡೂ ಡೋಸ್​ ಪಡೆದೋರಿಗೂ 'ಒಮಿಕ್ರೋನ್' ರೂಪಾಂತರಿ ವಕ್ಕರಿಸಬಹುದು: ಬ್ರಿಟನ್​ ಪ್ರಧಾನಿ - ಯುನೈಟೆಡ್​ ಕಿಂಗ್​ಡಮ್​ನಲ್ಲಿ ಒಮಿಕ್ರಾನ್ ಪ್ರಕರಣಗಳು ವರದಿ

ಯುನೈಟೆಡ್​ ಕಿಂಗ್​ಡಮ್​ನಲ್ಲಿ ಒಮಿಕ್ರೋನ್ ರೂಪಾಂತರದ ಮೊದಲ ಎರಡು ಪ್ರಕರಣಗಳು ಪತ್ತೆಯಾಗುತ್ತಿದ್ದಂತೆಯೇ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಪತ್ರಿಕಾ ಗೋಷ್ಠಿ ನಡೆಸಿದ್ದು, ಎರಡೂ ಡೋಸ್​ ಪಡೆದೋರಿಗೂ ಇದು ಅಂಟಬಹುದು ಎಂದು ಹೇಳಿದ್ದಾರೆ.

Boris Johnson
ಬ್ರಿಟನ್​ ಪ್ರಧಾನಿ
author img

By

Published : Nov 28, 2021, 7:34 PM IST

ಲಂಡನ್ (ಯುಕೆ): ಕೊರೊನಾ ವೈರಸ್​ನ ಹೊಸ ರೂಪಾಂತರಿ ಆಗಿರುವ 'ಒಮಿಕ್ರೋನ್ ' ಸಂಪೂರ್ಣವಾಗಿ ಲಸಿಕೆ ಪಡೆದವರಲ್ಲೂ ಹರಡುವ ಸಾಧ್ಯತೆಗಳಿವೆ ಎಂದು ಯುನೈಟೆಡ್​ ಕಿಂಗ್​ಡಮ್​​ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

B.1.1.529 ಎಂದು ಕರೆಯಲ್ಪಡುವ ಹೊಸ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ. ವಿಶ್ವಸಂಸ್ಥೆ ಅದಕ್ಕೆ ' ಒಮಿಕ್ರೋನ್ ' ಎಂದು ಹೆಸರಿಟ್ಟಿದೆ. ಇದು ಮರುಸೋಂಕು, ಅಂದರೆ ಕೋವಿಡ್​ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ.

ಇದನ್ನೂ ಓದಿ: ಒಮಿಕ್ರೋನ್ ಬಾಧಿತ ದೇಶಗಳ ಪ್ರಜೆಗಳಿಗೆ ನಿರ್ಬಂಧ: ಕೇಂದ್ರಕ್ಕೂ ಮನವಿ ಮಾಡಿದ ಸಿಎಂ ಬೊಮ್ಮಾಯಿ

ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ತಳಿ ಪತ್ತೆಯಾಗುತ್ತಿದ್ದಂತೆಯೇ ಪ್ರಪಂಚದಾದ್ಯಂತ ಎಲ್ಲಾ ರಾಷ್ಟ್ರಗಳ ಸರ್ಕಾರಗಳು ಎಚ್ಚೆತ್ತುಕೊಂಡಿವೆ. ಹೊಸ ರೂಪಾಂತರಿ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬ್ರಿಟನ್​ ಪ್ರಧಾನಿ, ಯಾವಾಗಲೂ ಆರಂಭಿಕ ಹಂತದಲ್ಲಿ ಕೊರೊನಾ ಹೊಸ ರೂಪಾಂತರಗಳ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಆದರೆ ನಮ್ಮ ವಿಜ್ಞಾನಿಗಳು ಪ್ರತಿ ಘಳಿಗೆಯಲ್ಲೂ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಮಿಕ್ರೋನ್ ಬಹಳ ವೇಗವಾಗಿ ಹರಡಬಹುದು ಹಾಗೂ ಎರಡು ಬಾರಿ ಲಸಿಕೆ ಹಾಕಿಸಿಕೊಂಡವರಿಗೂ ಅಂಟಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಒಮಿಕ್ರಾನ್​' ರೂಪಾಂತರಿ ವಿರುದ್ಧ ಈಗಿರುವ ಕೋವಿಡ್​ ಲಸಿಕೆಗಳು ಹೋರಾಡುವ ಸಾಧ್ಯತೆಯಿದೆ : ದಕ್ಷಿಣಾ ಆಫ್ರಿಕಾ

ಯುನೈಟೆಡ್​ ಕಿಂಗ್​ಡಮ್​ನಲ್ಲಿ ಒಮಿಕ್ರೋನ್ ರೂಪಾಂತರದ ಮೊದಲ ಎರಡು ಪ್ರಕರಣಗಳು ಪತ್ತೆಯಾಗುತ್ತಿದ್ದಂತೆಯೇ ಬೋರಿಸ್ ಜಾನ್ಸನ್ ಮಾಧ್ಯಮಗೋಷ್ಠಿ ನಡೆಸಿ ಈ ಹೇಳಿಕೆ ನೀಡಿದ್ದಾರೆ. ಇಬ್ಬರು ಸೋಂಕಿತರೂ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.