ಹೇಗ್ (ನೆದರ್ಲ್ಯಾಂಡ್): ಹಲವು ವರ್ಷಗಳ ಕಾಲ ಚಿತ್ರಹಿಂಸೆಗೊಳಗಾದ ಉಯಿಘರ್‌ಗಳು ನ್ಯಾಯ ಕೋರಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವನ್ನು (ಐಸಿಸಿ) ಸಂಪರ್ಕಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಚೀನಾ ಮತ್ತು ಅದರ ಉನ್ನತ ನಾಯಕರ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಉಯಿಘರ್ ಸಮುದಾಯದ ಪ್ರತಿನಿಧಿಗಳು ಐಸಿಸಿಗೆ ಸಾಕ್ಷ್ಯ ಸಲ್ಲಿಸಿದ್ದಾರೆ.
ಅಪರಾಧಗಳು ಸಾಮೂಹಿಕ ಪ್ರಮಾಣದಲ್ಲಿ ನಡೆದಿವೆ. ಆದ್ದರಿಂದ ಆಪಾದಿತ ಅಪರಾಧಿಗಳ ವಿರುದ್ಧ ಆರೋಪ ಹೊರಿಸಿ ವಿಚಾರಣೆ ನಡೆಸಿ ಎಲ್ಲವನ್ನೂ ತನಿಖೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಪರಾಧಗಳಿಗೆ ಕಾರಣರಾದ ಉನ್ನತ ನಾಯಕರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಹಿಂದಿನ ಅಧ್ಯಕ್ಷ ಹೂ ಜಿಂಟಾವೊ, ಜಿಂಜಿಯಾಂಗ್ ಪ್ರಾಂತ್ಯದ ಹಲವಾರು ಹಿರಿಯ ಅಧಿಕಾರಿಗಳು ಮತ್ತು ಮಿಲಿಟರಿ ಕಮಾಂಡರ್‌ಗಳು ಸೇರಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
"ಪ್ರಕರಣದ ವಿಚಾರಣೆ ಮತ್ತು ತನಿಖೆ ನಡೆಸಲು ಸ್ಪಷ್ಟವಾದ ಕಾನೂನು ಮಾರ್ಗವಿದೆ" ಎಂದು ಉಯಿಘರ್ ಅರ್ಜಿದಾರರನ್ನು ಪ್ರತಿನಿಧಿಸುವ ಲಂಡನ್ ವಕೀಲ ರೊಡ್ನಿ ಡಿಕ್ಸನ್ ಹೇಳಿದ್ದಾರೆ.
ಯಾರು ಈ ಉಯಿಘರ್‌ಗಳು?:
ಚೀನಾದಲ್ಲಿ ವಾಸಿಸುತ್ತಿರುವ ಅತಿದೊಡ್ಡ ವಿಭಿನ್ನ ಸಂಸ್ಕೃತಿ ಹೊಂದಿರುವ ಗುಂಪಾಗಿದೆ. ಚೀನಾದ ಪೀಪಲ್ಸ್ ಗುರುತಿಸಲ್ಪಟ್ಟ ಒಂದು ಜನಾಂಗೀಯ ಗುಂಪು ಇದಾಗಿದೆ. ಇದನ್ನು ಕೆಲವೊಮ್ಮೆ ಹಾನ್ ಚೈನೀಸ್ ಎಂದು ಕರೆಯಲಾಗುತ್ತದೆ. ಇಂತಹ ಅಲ್ಪಸಂಖ್ಯಾತರ ಗುಂಪನ್ನು ಕೇಂದ್ರೀಕರಿಸಿದ ಕೆಲವು ಪ್ರದೇಶಗಳಲ್ಲಿ, ಚೀನೀ ಸರ್ಕಾರವು ಅವರಿಗೆ "ಸ್ವಾಯತ್ತತೆ" ನೀಡಿದೆ.
ಉಯ್ಘರ್ (ಉಯ್ಗರ್ ಮತ್ತು ಉಯಿಘರ್ ಎಂದೂ ಉಚ್ಚರಿಸಲಾಗುತ್ತದೆ) ಜನರು ಜನಾಂಗೀಯವಾಗಿ ಯುರೋಪಿಯನ್ನರ ಮತ್ತು ಏಷ್ಯಾದ ಜನರ ಮಿಶ್ರಣವಾಗಿದ್ದು, ವಾಯುವ್ಯ ಚೀನಾದಲ್ಲಿ ತಾರಿಮ್ ಬೇಸಿನ್ ಸುತ್ತಲೂ ನೆಲೆಸಿದ್ದಾರೆ.