ETV Bharat / international

ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ವಿಧಿಸುವುದಿಲ್ಲ: ಚೀನಾ ಸ್ಪಷ್ಟನೆ

ಉಕ್ರೇನ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡುತ್ತಿದ್ದಂತೆ ಜಗತ್ತಿನ ಅನೇಕ ದೇಶಗಳು ರಷ್ಯಾ ಮೇಲೆ ವಿವಿಧ ರೀತಿಯ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಚೀನಾ, ತಾನು ಆ ಸಾಲಿಗೆ ಸೇರಿಕೊಳ್ಳುವುದಿಲ್ಲ ಎಂದಿದೆ.

financial sanctions on Russia over Ukraine invasion

author img

By

Published : Mar 2, 2022, 7:35 PM IST

ಬೀಜಿಂಗ್​​(ಚೀನಾ): ಉಕ್ರೇನ್​ ವಿರುದ್ಧ ಯುದ್ಧ ಘೋಷಣೆ ಮಾಡಿರುವ ರಷ್ಯಾ ವಿರುದ್ಧ ಈಗಾಗಲೇ ಅನೇಕ ದೇಶಗಳು ಕಟುವಾಗಿ ಟೀಕೆ ವ್ಯಕ್ತಪಡಿಸುತ್ತಿದ್ದು ಫ್ರಾನ್ಸ್​​, ಬ್ರಿಟನ್​, ಐರೋಪ್ಯ ಒಕ್ಕೂಟ ಸೇರಿದಂತೆ ಹಲವು ದೇಶಗಳು ಆರ್ಥಿಕ, ರಾಜತಾಂತ್ರಿಕ ಹಾಗು ಸಾಂಸ್ಕೃತಿಕ ನಿರ್ಬಂಧಗಳನ್ನು ವಿಧಿಸುತ್ತಿವೆ.

ರಷ್ಯಾ ಮೇಲೆ ಆರ್ಥಿಕ ಸಮರ ಘೋಷಣೆ ಮಾಡಿರುವ ಇತರೆ ದೇಶಗಳೊಂದಿಗೆ ನಾವು ಸೇರಿಕೊಳ್ಳುವುದಿಲ್ಲ ಎಂದು ಚೀನಾ ಹೇಳಿಕೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಚೀನಾದ ಮುಖ್ಯ ಬ್ಯಾಂಕ್ ನಿಯಂತ್ರಕರು, ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುವಲ್ಲಿ ಚೀನಾ ಯಾವುದೇ ಕಾರಣಕ್ಕೂ ಯುರೋಪಿಯನ್​​ ದೇಶಗಳೊಂದಿಗೆ ಸೇರಿಕೊಳ್ಳುವುದಿಲ್ಲ ಎಂದು ತಿಳಿಸಿದೆ.

ರಷ್ಯಾದಲ್ಲಿ ಉತ್ಪಾದನೆಗೊಳ್ಳುವ ತೈಲ ಮತ್ತು ಅನಿಲ ಖರೀದಿ ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಚೀನಾ ಕೂಡ ಒಂದಾಗಿದ್ದು, ಉಕ್ರೇನ್​ ಮೇಲಿನ ದಾಳಿ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ರಷ್ಯಾ ವಿರುದ್ಧ ನಾವು ಆರ್ಥಿಕ ನಿರ್ಬಂಧ ಹೇರಲು ಸಾಧ್ಯವಿಲ್ಲ. ಎಲ್ಲ ದೇಶಗಳೊಂದಿಗೆ ಸಮನಾದ ಆರ್ಥಿಕ ಸಂಬಂಧ ಇಟ್ಟುಕೊಳ್ಳುವುದಾಗಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಉಕ್ರೇನ್‌ನ ಹಾಲಿ ಅಧ್ಯಕ್ಷರ ಪದಚ್ಯುತಗೊಳಿಸಿ ಮಾಜಿ ಅಧ್ಯಕ್ಷನಿಗೆ ಪಟ್ಟ ಕಟ್ಟಲು ರಷ್ಯಾ ತಯಾರಿ: ಯಾರಿವರು?

ಕಳೆದ ಏಳು ದಿನಗಳಿಂದ ಉಕ್ರೇನ್​​ನ ವಿವಿಧ ನಗರಗಳ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ, ಅನೇಕ ಪ್ರಮುಖ ಕಟ್ಟಡಗಳನ್ನು ನೆಲಸಮಗೊಳಿಸಿದೆ. ಈ ವಿಚಾರವಾಗಿ ಅಮೆರಿಕ, ಫ್ರಾನ್ಸ್​​, ಯುರೋಪಿಯನ್ ಒಕ್ಕೂಟಗಳು ವಾಡ್ಲಿಮಿರ್ ಪುಟಿನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರ ನಡೆಯನ್ನು ಕಟು ಶಬ್ದಗಳಲ್ಲಿ ವಿರೋಧಿಸಿದ್ದಾರೆ.

ಬ್ರಿಟನ್ ಅಧ್ಯಕ್ಷರ ವಾಗ್ದಾಳಿ: ಉಕ್ರೇನ್​ ಮೇಲಿನ ದಾಳಿ ವಿಚಾರವಾಗಿ ರಷ್ಯಾ ಅಧ್ಯಕ್ಷರ ವಿರುದ್ಧ ಬ್ರಿಟನ್​ ಅಧ್ಯಕ್ಷರು ವಾಗ್ದಾಳಿ ನಡೆಸಿದ್ದು, ರಷ್ಯಾ ತೆಗೆದುಕೊಂಡಿರುವ ನಿರ್ಧಾರಗಳು ಯುದ್ಧಾಪರಾಧಗಳಿಂದ ಕೂಡಿವೆ ಎಂದಿದ್ದಾರೆ. ಬ್ರಿಟನ್ ಸಂಸತ್​​ನಲ್ಲಿ ಮಾತನಾಡಿರುವ ಬೋರಿಸ್ ಜಾನ್ಸನ್​, ಅಮಾಯಕ ನಾಗರಿಕರ ಮೇಲೆ ರಷ್ಯಾ ಮಿಲಿಟರಿ ಪಡೆ ನಡೆಸುತ್ತಿರುವ ದಾಳಿ ಖಂಡನೀಯ ಎಂದು ದೂರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.