ETV Bharat / international

Insight: ಐರೋಪ್ಯ ಒಕ್ಕೂಟಕ್ಕೆ 'ವಿಚ್ಛೇದನ': ಬ್ರಿಟನ್ನಿನಲ್ಲಿ ಮೂಡಿಬಂದ ಜನಾದೇಶದ ಸುತ್ತ!

ದಕ್ಷಿಣ ಕೊರಿಯಾ, ಕೆನಡಾದ ಮಾಜಿ ರಾಯಭಾರಿ ಮತ್ತು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ, ವಿದೇಶಾಂಗ ವ್ಯವಹಾರಗಳ ವಿಶ್ಲೇಷಕ ಮತ್ತು ಬರಹಗಾರ ರಾಯಭಾರಿ ವಿಷ್ಣು ಪ್ರಕಾಶ್ ಅವರು ಬರೆದು ಲೇಖನ.

British electorate mandate
British electorate mandate
author img

By

Published : Dec 25, 2019, 1:42 PM IST

2017ರ ಜೂನ್ ತಿಂಗಳಲ್ಲಿ ಯುನೈಟೆಡ್ ಕಿಂಗ್​ಡಮ್​ (ಯುಕೆ) ಕಡೆಯ ಸಾರ್ವತ್ರಿಕ ಚುನಾವಣೆ ಎದುರಿಸಿತ್ತು. ಅದಾದ ಕೇವಲ 30 ತಿಂಗಳ ಬಳಿಕ ಅಂದರೆ 2019ರ ಡಿಸೆಂಬರ್ 12ರಂದು ಮತ್ತೊಮ್ಮೆ ಚುನಾವಣೆಯಲ್ಲಿ ಪಾಲ್ಗೊಂಡಿತು. ಕನ್ಸರ್ವೇಟಿವ್ ಪಕ್ಷ (ಟೋರಿಗಳು), ಲೇಬರ್ ಪಕ್ಷ, ಲಿಬರಲ್ ಡೆಮೊಕ್ರಾಟ್ಸ್, ಸ್ಕಾಟಿಷ್ ನ್ಯಾಷನಲ್ ಮತ್ತಿತರ ಪಕ್ಷಗಳ ಮುಖಂಡರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಯಶಾಲಿಯಾದದ್ದು ಮಾತ್ರ ಬ್ರೆಕ್ಸಿಟ್. 'ಭಾರತದ ಅಳಿಯ' ಬೋರಿಸ್ ಜಾನ್ಸನ್ ಅವರ ನೇತೃತ್ವದಲ್ಲಿ ಕನ್ಸರ್ವೇಟಿವ್‌ ಪಕ್ಷ, ಬ್ರೆಕ್ಸಿಟ್ ಅಲೆಯಲ್ಲಿ ತೇಲುತ್ತಾ ಚುನಾವಣಾ ಗೆಲುವು ಸಾಧಿಸಿತು. ಒಟ್ಟು 650 ಕ್ಷೇತ್ರಗಳಲ್ಲಿ 365 ಸ್ಥಾನಗಳನ್ನು ಪಕ್ಷ ತನ್ನದಾಗಿಸಿಕೊಂಡಿತು. ಕಳೆದ ಬಾರಿಗೆ ಹೋಲಿಸಿದರೆ, ಈ ಪಕ್ಷ 47 ಸೀಟುಗಳಷ್ಟು ಹೆಚ್ಚು ಲಾಭ ಗಳಿಸಿತು. ಬ್ರೆಕ್ಸಿಟ್ ಕುರಿತಂತೆ ಗೊಂದಲಮಯ ನಿಲುವು ತಳೆದಿದ್ದ ಲೇಬರ್ ಪಕ್ಷದ ಅನುಭವಿ ನೇತಾರ 70 ವರ್ಷದ ಜೆರೆಮಿ ಕಾರ್ಬಿನ್, 59 ಕ್ಷೇತ್ರಗಳಲ್ಲಿ ಸೋಲು ಅನುಭವಿಸಿ 203 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 1935ರ ಬಳಿಕ ಪಕ್ಷ ಗಳಿಸಿದ ಅತಿ ಕಡಿಮೆ ‘ಅಂಕ’ ಇದು.

ಜನಾಭಿಪ್ರಾಯ ಸಂಗ್ರಹ ಒಮ್ಮಿಂದೊಮ್ಮೆಲೆ ಸಾರ್ವಜನಿಕರ ಮನಸ್ಥಿತಿಯನ್ನು ನಿಖರವಾಗಿ ಸೆರೆಹಿಡಿಯಿತು. ಪ್ರಧಾನಿ ಜಾನ್ಸನ್ ಅವರ ಪರವಾಗಿ ಬಂದ ಮಹತ್ವದ ಜನಾದೇಶ, ಐರೋಪ್ಯ ಒಕ್ಕೂಟಕ್ಕೆ (ಇಯು) ವಿಚ್ಛೇದನ ನೀಡುವಂತೆ ಸಾರ್ವಜನಿಕರು ಬ್ರಿಟನ್ ಸರ್ಕಾರಕ್ಕೆ ನೀಡಿದ ಸೂಚನೆ ಆಗಿದೆ. 2016ರ ಜೂನ್​​ನಿಂದಲೂ ತೂಗುಗತ್ತಿಯಾಗಿದ್ದ ಬ್ರೆಕ್ಸಿಟ್​ನ ನಿರ್ಣಯಗಳು ಈಗಾಗಲೇ ಇಬ್ಬರು ಪ್ರಧಾನ ಮಂತ್ರಿಗಳ ತಲೆದಂಡಕ್ಕೂ ಕಾರಣ ಆಗಿದ್ದವು. ಜನವರಿ 31 ರ ಗಡುವು ಅಂತಹ ಅನೇಕ ನಿರ್ಣಯಗಳಲ್ಲಿ ಇತ್ತೀಚಿನದಾಗಿದ್ದು, ಅದೇ ಕೊನೆಯ ತೀರ್ಮಾನ ಆಗಲಿದೆ ಎಂಬ ಮಾತಿದೆ. ಇದು ಐರೋಪ್ಯ ಒಕ್ಕೂಟದ ಬಿರುಕಿಗೆ ಮುನ್ನುಡಿ ಬರೆಯಲಿದೆಯೇ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

ಆದರೂ, ಬಹು ಯಶಸ್ವಿ ಪ್ರಾದೇಶಿಕ ಸಂಘಟನೆ ಎಂಬ ಅಗ್ಗಳಿಕೆಗೆ ಪಾತ್ರವಾದ ಐರೋಪ್ಯ ಒಕ್ಕೂಟಕ್ಕೆ ಇದು ಹೊಸ ತಿರುವು ನೀಡಲಿದೆ ಎಂಬುದನ್ನು ನಿರಾಕರಿಸಲು ಸಾಧ್ಯ ಇಲ್ಲ. ಐರೋಪ್ಯ ಹಣಕಾಸು ಸಮಿತಿ (ಇಇಸಿ) ಎಂಬ ಹೆಸರಿನಲ್ಲಿ 1957ರಲ್ಲಿ ಆರು ದೇಶಗಳು ರೂಪಿಸಿದ ಸಂಘಟನೆಗೆ ಯುಕೆ 1973ರಲ್ಲಿ ಸೇರಿಕೊಂಡಿತು. ಕಳೆದ ಆರು ದಶಕಗಳಲ್ಲಿ ಐರೋಪ್ಯ ಒಕ್ಕೂಟವು, ಕ್ರೈಸ್ತ ದೇಶಗಳೇ ಪ್ರಧಾನವಾಗಿರುವ 28 ಸದಸ್ಯ ರಾಷ್ಟ್ರಗಳ ಸಂಘಟನೆಯಾಗಿ ಬೆಳೆದಿದೆ. ಟರ್ಕಿಯ ವಿಚಾರಕ್ಕೆ ಬಂದರೆ ಅದೊಂದು ಸುಧಾರಿತ ಮುಸ್ಲಿಮ ದೇಶವಾಗಿದ್ದು, ಹೆಸರಿಗೆ ಜಾತ್ಯತೀತ ರಾಷ್ಟ್ರ ಎನಿಸಿಕೊಂಡರೂ ಮಹತ್ವದ ಇಯು ದೇಶವಾಗಿ ಮನ್ನಣೆ ಪಡೆದಿಲ್ಲ.

ಬ್ರಸೆಲ್ಸ್​ನಿಂದ ಸಾರ್ವಭೌಮತ್ವ ಮರಳಿ ಪಡೆಯುವ ಬಗ್ಗೆ ಬ್ರೆಕ್ಸಿಟ್ ಬೆಂಬಲಿಗರು ಖುಷಿಯಲ್ಲಿ ಇದ್ದರೂ ಬ್ರಿಟನ್​ಗೆ ಇದು ಹೆಚ್ಚು ಸಂತಸದಾಯಕವಾಗಿ ಪರಿಣಮಿಸಲಾರದು. ವಾಸ್ತವವಾಗಿ, ಇದು ‘ಬ್ರಿಟನ್ ಮಧ್ಯಮ ಶಕ್ತಿಯಾಗುವುದನ್ನು ತೀವ್ರತರವಾಗಿ ತಪ್ಪಿಸಿದೆ’ ಎಂದು ಹಿರಿಯ ಮಾಜಿ ರಾಜತಂತ್ರಜ್ಞರೊಬ್ಬರು ಟೀಕಿಸಿದ್ದಾರೆ. ಐರೋಪ್ಯ ಒಕ್ಕೂಟದ ಪರವಾಗಿ ಇರುವ, ಸ್ವತಂತ್ರ ರಾಷ್ಟ್ರವಾಗುವ ನಿಟ್ಟಿನಲ್ಲಿ ಎರಡನೇ ಜನಮತ ಸಂಗ್ರಹಕ್ಕೆ ಒತ್ತಾಯಿಸುತ್ತಿರುವ ಸ್ಕಾಟ್ಲೆಂಡ್ ಬಗ್ಗೆ ನಿಜವಾಗಿಯೂ ಆತಂಕ ಇದೆ. ಅಲ್ಲಿನ ಸ್ಕಾಟಿಷ್ ನ್ಯಾಷನಲ್ ಪಕ್ಷ 48 ಸ್ಥಾನಗಳನ್ನು ಪಡೆದಿದ್ದು (ಹೆಚ್ಚುವರಿಯಾಗಿ 13 ಸ್ಥಾನಗಳ ಲಾಭ ಗಳಿಸಿದೆ) ಕನ್ಸರ್ವೇಟಿವ್ ಪಕ್ಷ ಏಳು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ (ಇದು ಒಟ್ಟು 6 ಸ್ಥಾನಗಳ ನಷ್ಟ ಅನುಭವಿಸಿದೆ). ಲೇಬರ್ ಪಕ್ಷ ಕೇವಲ ಒಂದು ಸ್ಥಾನ ಗಳಿಸಲು ಯಶಸ್ವಿಯಾಗಿದೆ ( ಪಕ್ಷ ಒಟ್ಟು 6 ಸ್ಥಾನಗಳನ್ನು ಕಳೆದುಕೊಂಡಿದೆ ).

2014 ರಲ್ಲಿ ನಡೆದ ಮೊದಲ ಜನಾಭಿಪ್ರಾಯ ಸಂಗ್ರಹದ ವೇಳೆ ಶೇ.45ರಷ್ಟು ಸ್ಕಾಟ್ ಜನತೆ ಸ್ವತಂತ್ರರಾಗುವುದರ ಪರವಾಗಿ ಮತ ಚಲಾಯಿಸಿದ್ದರು. ಅಲ್ಲಿಂದ ಮುಂದೆ ಲಂಡನ್ ವಿರುದ್ಧದ ಅಸಮಾಧಾನ ತೀಕ್ಷ್ಣ ಸ್ವರೂಪ ಪಡೆದುಕೊಂಡಿತು. ಅಂತೆಯೇ ಬ್ರೆಕ್ಸಿಟ್ ನೆಪದಲ್ಲಿ ಪ್ರಧಾನಿ ಜಾನ್ಸನ್ ಅವರು ಗಡಿ ನಿಯಂತ್ರಣಕ್ಕೆ ಮುಂದಾದರೆ ಉತ್ತರ ಐರ್ಲೆಂಡ್ ಕೂಡ ಉದ್ವಿಗ್ನಗೊಳ್ಳುವ ಸ್ಥಿತಿ ನಿರ್ಮಾಣ ಆಗಬಹುದು. ಐರ್ಲೆಂಡ್ ಗಣರಾಜ್ಯದೊಂದಿಗೆ ಲಂಡನ್ ಅದೃಶ್ಯ ಗಡಿಯನ್ನು ಮಾತ್ರ ಮುಂದುವರಿಸಬೇಕು ಎಂಬ ಒತ್ತಾಯ ಇದೆ.

ಕೆಲವು ಸರ್ಕಾರಿ ವಲಯಗಳು ಸೃಜಿಸುವ ಮನೋಹರ ಸನ್ನಿವೇಶಗಳಿಗೆ ತದ್ವಿರುದ್ಧವಾಗಿ ಭವಿಷ್ಯದಲ್ಲಿ ಬ್ರಿಟಿಷ್ ಆರ್ಥಿಕತೆಯ ಮೇಲೆ ಬ್ರೆಕ್ಸಿಟ್ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬುದನ್ನು ವಸ್ತುನಿಷ್ಠ ವಿಶ್ಲೇಷಕರು ಒಪ್ಪುತ್ತಾರೆ. ದೇಶದ ಜಿಡಿಪಿ ಶೇ 3ರಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನುತ್ತದೆ ಲಂಡನ್ನಿನ ಇನ್ಸ್ಟಿಟ್ಯೂಟ್ ಫಾರ್ ಫಿಸ್ಕಲ್ ಸ್ಟಡೀಸ್ ವರದಿ. ಬೇರೆ ಬೇರೆ ಅಧ್ಯಯನಗಳು ಹೇಳಿರುವ ಪ್ರಕಾರ ಇನ್ನೂ ಹೆಚ್ಚಿನ ಕುಸಿತ ಉಂಟಾಗಬಹುದು.

ಇದಲ್ಲದೆ, ಐರೋಪ್ಯ ಒಕ್ಕೂಟ, ಅಮೆರಿಕ, ಚೀನಾ, ಭಾರತ ಮತ್ತಿತರ ರಾಷ್ಟ್ರಗಳ ಜೊತೆ ಸಂಬಂಧ ವೃದ್ಧಿಗೆ ಸುಲಭವಾದ ಯಾವುದಾದರೂ ಹೊಸ ಆರ್ಥಿಕ ಕಾರ್ಯಸೂಚಿಯನ್ನು ಬ್ರಿಟನ್ ರೂಪಿಸಿಕೊಳ್ಳಬೇಕಾದೀತು. ಪ್ರಸ್ತುತ ರಕ್ಷಣಾತ್ಮಕ ಸಂದರ್ಭದಲ್ಲಿ ಮತ್ತು ಬ್ರಿಟನ್ ತುರ್ತಿಗೆ ತಕ್ಕಂತೆ ಕೂಡಲೇ ಅಥವಾ ಆ ದೇಶಕ್ಕೆ ಹೆಚ್ಚು ಅನುಕೂಲಕರವಾದ ರೀತಿಯಲ್ಲಿ ಮುಕ್ತ ವಾಣಿಜ್ಯ ಒಪ್ಪಂದಗಳು ಏರ್ಪಡುವುದು ಸಾಧ್ಯ ಇಲ್ಲ.

ನಿಯಮದ ಪ್ರಕಾರ ಲಂಡನ್, 2020 ರ ಡಿಸೆಂಬರ್ 31ರವರೆಗೆ ಮಾತ್ರ ಐರೋಪ್ಯ ಒಕ್ಕೂಟದ ಜೊತೆ ಮುಂದುವರಿಯಬಹುದು. 2019 ರ ಅಕ್ಟೋಬರ್ 17 ರಂದು ಪ್ರಧಾನಿ ಜಾನ್ಸನ್ ಮತ್ತು ಐರೋಪ್ಯ ಒಕ್ಕೂಟದ ನಡುವೆ ತಾತ್ಕಾಲಿಕ ಮಾದರಿ ಒಪ್ಪಂದ ಏರ್ಪಟ್ಟಿತ್ತು. ಆದರೆ ಬ್ರಿಟನ್ ಸಂಸತ್ತಿನ ಕೆಳಮನೆಯಾದ ಹೌಸ್ ಆಫ್ ಕಾಮನ್ಸ್ನಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಬಹುಮತದ ಕೊರತೆ ಇದ್ದುದರಿಂದ ಇದು ತಿರಸ್ಕೃತಗೊಂಡಿತು. ಈಗ ಜಾನ್ಸನ್‌ ಅವರಿಗೆ ಸ್ಪಷ್ಟ ಜನಾದೇಶ ಮತ್ತು ಬಹುಮತ ದೊರೆತಿದ್ದು ಈ ಹಿನ್ನೆಲೆಯಲ್ಲಿ ಒಪ್ಪಂದ ಕುರಿತ ಚರ್ಚೆಗೆ ಬಲ ಬಂದಂತಾಗಿದೆ.
ಬ್ರೆಕ್ಸಿಟ್ ನಿಂದಾಗಿ ಐರೋಪ್ಯ ಒಕ್ಕೂಟದಿಂದ ಇಂಗ್ಲೆಂಡಿಗೆ ಮಾನವ ಸಂಪನ್ಮೂಲ (ಕುಶಲ ಅಥವಾ ಕೌಶಲ್ಯ ರಹಿತ ) ಸಹಜ ರೀತಿಯಲ್ಲಿ ಹರಿದು ಬರುವುದು ಸ್ಥಗಿತಗೊಳ್ಳಲಿದೆ. ಇದು ಬ್ರಿಟಿಷರನ್ನು ಕಾಡುತ್ತಿದ್ದ ಸಮಸ್ಯೆಯಾಗಿತ್ತು. ಇನ್ನು ಮುಂದೆ ಅರ್ಹತೆಯನ್ನು ಆಧರಿಸಿ ವಲಸೆ ವ್ಯವಸ್ಥೆ ಇರಲಿದೆ. ರಾಷ್ಟ್ರೀಯತೆ ಲೆಕ್ಕಿಸದೆ ಹೆಚ್ಚು ಕೌಶಲ್ಯ ಹೊಂದಿದವರಿಗೆ ಆದ್ಯತೆ ದೊರೆಯಲಿದೆ. ಇದರಿಂದ ಭಾರತೀಯರು ಮತ್ತು ಐರೋಪ್ಯ ಒಕ್ಕೂಟ ಸಿಬ್ಬಂದಿಯನ್ನು ಸಮವಾಗಿ ಕಾಣುವ ಸ್ಥಿತಿ ಏರ್ಪಡಲಿದೆ. ಇಲ್ಲಿಯವರೆಗೆ ಭಾರತೀಯರು ಮತ್ತು ಐರೋಪ್ಯ ಒಕ್ಕೂಟಕ್ಕೆ ಸೇರದ ನಾಗರಿಕರಿಗೆ ಎರಡನೇ ಶ್ರೇಣಿಯ (ಕೌಶಲ) ವೀಸಾಗಳನ್ನು ನೀಡಲಾಗುತ್ತಿತ್ತು.

ಬೋರಿಸ್ ಜಾನ್ಸನ್ ಅವರನ್ನು ಅಭಿನಂದಿಸಲು ಮತ್ತು ಅವರನ್ನು ಭಾರತಕ್ಕೆ ಆಹ್ವಾನಿಸಲು ಪ್ರಧಾನಿ ನರೇಂದ್ರ ಮೋದಿ ಕಾತರರಾಗಿದ್ದರು. ಡಿಸೆಂಬರ್ 13 ರಂದು ಅವರು ಮಾಡಿರುವ ಟ್ವೀಟ್ ಹೀಗಿದೆ - “ಪ್ರಧಾನ ಮಂತ್ರಿ @BorisJohnson ಅವರು ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿರುವುದಕ್ಕೆ ಅಭಿನಂದನೆಗಳು. ನಾನು ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಭಾರತ- ಬ್ರಿಟನ್ ಸಂಬಂಧ ವೃದ್ಧಿಗೆ ಪರಸ್ಪರ ಶ್ರಮಿಸುವುದನ್ನು ಎದುರು ನೋಡುತ್ತಿದ್ದೇನೆ’’ ಎಂದಿದ್ದರು. ಜಾನ್ಸನ್ ಅವರು 25 ವರ್ಷಗಳ ಹಿಂದೆ ಮರೀನಾ ವೀಲರ್ ಅವರನ್ನು ವಿವಾಹ ಆಗಿದ್ದು (ಆಕೆಯ ತಾಯಿ ಸಿಖ್ ಧರ್ಮಕ್ಕೆ ಸೇರಿದ ಭಾರತೀಯ ಸಂಜಾತೆ) ಅನೇಕ ಬಾರಿ ಭಾರತಕ್ಕೆ ಬಂದಿದ್ದಾರೆ. ಅವರು ಶೀಘ್ರವೇ ಅಧಿಕೃತವಾಗಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಮೊಟ್ಟಮೊದಲಿಗೆ ಪ್ರಸ್ತುತ ಬ್ರಿಟನ್ ಕೆಳಮನೆ ಭಾರತೀಯ ಮೂಲದ 15 ಸಂಸದರನ್ನು ಹೊಂದಿದ್ದು, ಅವರಲ್ಲಿ ಏಳು ಮಂದಿ ಕನ್ಸರ್ವೇಟಿವ್ ಪಕ್ಷಕ್ಕೆ ಸೇರಿದವರಾಗಿದ್ದಾರೆ. 15 ಲಕ್ಷದಷ್ಟಿರುವ ಪ್ರಬಲ ವಲಸಿಗ ಸಮುದಾಯವಾದ ಭಾರತೀಯರ ಒಲವು ಚಾರಿತ್ರಿಕವಾಗಿ ಲೇಬರ್ ಪಕ್ಷದ ಕಡೆಗೆ ಇತ್ತು. ಕಾಶ್ಮೀರದ ಬಗ್ಗೆ ಕಾರ್ಬಿನ್ ಅವರು ತಳೆದ ಪಕ್ಷಪಾತಿ ನಿಲುವಿನಿಂದಾಗಿ ಭಾರತೀಯರು ದೂರ ಸರಿಯುವಂತಾಯಿತು. "ಭಾರತೀಯರು ಯತೇಚ್ಛ ಪ್ರಮಾಣದಲ್ಲಿ ಕನ್ಸರ್ವೇಟಿವ್‌ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ" ಎಂದು ಟೋರಿ ಬೆಂಬಲಿಗರಾದ ಕನ್ಸರ್ವೇಟಿವ್ ಫ್ರೆಂಡ್ಸ್ ಆಫ್ ಇಂಡಿಯಾ ಸಂಘಟನೆಯ ಅಧ್ಯಕ್ಷರಾದ ರಾಮಿ ರೇಂಜರ್ ಹೇಳಿದ್ದಾರೆ. ‘ಕಾಶ್ಮೀರ ಕುರಿತಂತೆ ಲೇಬರ್ ಪಕ್ಷದ ನೀತಿ ಭಾರತೀಯ ಮತದಾರರನ್ನು ಹಿಂದೆಂದಿಗಿಂತಲೂ ಹೆಚ್ಚು ಒಗ್ಗೂಡಿಸಿದವು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಾಂಗ ಸಚಿವಾಲಯದ ಕೋಪಕ್ಕೆ ತುತ್ತಾದ ಲೇಬರ್ ಪಕ್ಷ, ಭಾರತೀಯ ಸಮುದಾಯದ ವಲಸಿಗ ಸಂಘಟನೆಗಳು ಹಾಗೂ ಭಾರತದ ಹೈ ಕಮಿಷನ್ ಎರಡರಿಂದಲೂ ಅಸಹಕಾರ ಎದುರಿಸಿತು. ಲೇಬರ್ ಪಕ್ಷದ ಸಂಸದರು, ಅಧಿಕಾರಿಗಳು ಮತ್ತು ಬೆಂಬಲಿಗರ ಪರವಾದ ಸಂಘಟನೆಯಾದ ‘ಲೇಬರ್ ಫ್ರೆಂಡ್ಸ್ ಆಫ್ ಇಂಡಿಯಾ’ಕ್ಕೆ ಸಾಂಪ್ರದಾಯಿಕವಾಗಿ ನೀಡುತ್ತಿದ್ದ ಔತಣಕೂಟವನ್ನು ಭಾರತೀಯ ಹೈ ಕಮಿಷನ್ ಕಚೇರಿ ರದ್ದುಪಡಿಸಿತು. ಅಲ್ಲದೆ ಕಚೇರಿಯ ನೇತೃತ್ವದಲ್ಲಿ ಸೆಪ್ಟೆಂಬರ್ 29ರಂದು ನಡೆದ ಭಾರತ ದಿನಾಚರಣೆಗೆ (ಇಂಡಿಯ ಡೇ) ಪಕ್ಷದ ಯಾವುದೇ ಪ್ರತಿನಿಧಿಗೆ ಆಹ್ವಾನ ನೀಡರಲಿಲ್ಲ. ಈ ಸಂದೇಶ ಪ್ರಬಲವಾಗಿತ್ತು ಮತ್ತು ಸ್ಪಷ್ಟವಾಗಿತ್ತು. ಭಾರತೀಯ ವಲಸೆಗಾರರು ರಾಜಕೀಯ ಲಾಬಿಯಲ್ಲಿ ಅನುಭವಸ್ಥರು.

ಐರೋಪ್ಯ ಒಕ್ಕೂಟಕ್ಕೆ (ಆಗಿನ ಇಇಸಿ) ತಡವಾಗಿ ಪ್ರವೇಶಿಸಿದ ಮತ್ತು ಎಲ್ಲ ಸದಸ್ಯ ದೇಶಗಳಿಗಿಂತಲೂ ಮೊದಲು ನಿರ್ಗಮಿಸುತ್ತಿರುವ ರಾಷ್ಟ್ರ ಎಂದು ಬ್ರಿಟನ್ ಕರೆಸಿಕೊಳ್ಳುತ್ತಿದೆ. ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರ ಅಧಿಕಾರಾವಧಿಯಲ್ಲಿ ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹವು ನಡೆದಿತ್ತು. ಆದರೆ ಬ್ರೆಕ್ಸಿಟ್ ಪರವಾಗಿ ಅಭಿಪ್ರಾಯ ಮೂಡಿಸಲು ಅಸಮರ್ಥರಾದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ‍ಘಟನೆ ಬ್ರಿಟನ್ನಿನಲ್ಲಿ ಭಾರಿ ಒಡಕು ಮೂಡಿಸಿತು. ‘ಇದು ಬ್ರಿಟನ್ ಸೊಕ್ಕಿನ ಫಲಶ್ರುತಿಯಾಗಿದ್ದು ಎಂದೆಂದಿಗೂ ಸೂರ್ಯ ಮುಳುಗದ ಸಾಮ್ರಾಜ್ಯ (ಹಾಗೆ ಅಂದುಕೊಳ್ಳಬೇಕಾಗಿಲ್ಲ) ಆಗಿದ್ದ ಬ್ರಿಟನ್ ಇನ್ನು ಮುಂದೆ ಕೇವಲ ಇಂಗ್ಲೆಂಡ್ ಆಗಬಹುದು’ ಎಂಬುದು ಟೀಕಾಕಾರರ ಆರೋಪ!

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.