ಲಂಡನ್: ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸಿದ್ದು, 47 ವರ್ಷಗಳ ಸದಸ್ಯತ್ವದ ಬಳಿಕ ಆರ್ಥಿಕ ಬಣದಿಂದ ಹೊರಬಂದ ಮೊದಲ ದೇಶವಾಗಿದೆ.
ಬ್ರೆಕ್ಸಿಟ್ ಕುರಿತು ಮಾತನಾಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈ ದಿನ ನಾವು ಯುರೋಪಿಯನ್ ಒಕ್ಕೂಟವನ್ನು ತೊರೆದಿದ್ದು, ಬ್ರಿಟನ್ ಇತಿಹಾಸದಲ್ಲೇ ಇದೊಂದು ಅಸಾಧಾರಣ ತಿರುವಾಗಿದೆ. ಬ್ರೆಕ್ಸಿಟ್ ಅಂತ್ಯವಲ್ಲ, ಬ್ರಿಟನ್ಗೆ ಇದು ಹೊಸ ಯುಗದ ಆರಂಭ, ಬದಲಾವಣೆಯ ಒಂದು ಕ್ಷಣವಾಗಿದೆ ಎಂದು ಹೇಳಿದ್ದಾರೆ.
ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ದೇಶ ಹೊರಬೇಕೆಂಬುದು ಕನ್ಸರ್ವೇಟಿವ್ ಪಕ್ಷದ ನಿಲುವಾಗಿತ್ತು. ಇದಕ್ಕಾಗಿ 2016 ರಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಬಹುಮತವೂ ಸಿಕ್ಕಿತ್ತು. ಆದರೆ ಕೆಲ ಕಾರಣಗಳಿಂದ ಜಾರಿಯಾಗಿರಲಿಲ್ಲ. 2016 ರಿಂದ ಯೂರೋಪಿಯನ್ ಒಕ್ಕೂಟದಿಂದ ಹೊರಬರಲು ಪ್ರಯತ್ನಿಸುತ್ತಿದ್ದ ಬ್ರಿಟನ್, ಇಂದು ಅಧಿಕೃತವಾಗಿ ನಿರ್ಗಮಿಸಿದಂತಾಗಿದೆ.